"ಮಹಿಳೆಯರು ಮಾತ್ರ ಸರಿ ಎಂದುಕೊಂಡಿದ್ದೀರಾ, ಆದ್ರೆ ಪುರುಷರು ನಿಜವಾದ ಬಲಿಪಶುಗಳು"; ರವಿ ಮೋಹನ್

ತಮಿಳು ನಟ ರವಿ ಮೋಹನ್ ಹಾಗೂ ಪತ್ನಿ ಆರತಿ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಈಗಾಗಲೇ ಚೆನ್ನೈ ಕುಟುಂಬ ನ್ಯಾಯಾಲಯದಲ್ಲಿ ಡಿವೋರ್ಸ್ ಅರ್ಜಿ ವಿಚಾರಣೆ ಆರಂಭವಾಗಿದೆ. ಮತ್ತೊಂದು ಕಡೆ ಗಾಯಕಿ ಕೆನೀಶಾ ಫ್ರಾನ್ಸಿಸ್ ಜೊತೆ ನಟ ರವಿ ಮೋಹನ್ ಸುತ್ತಾಡುತ್ತಿದ್ದಾರೆ.

ಸದ್ಯ ದಳಪತಿ ವಿಜಯ್ ಹಾಗೂ ಸಂಗೀತಾ ದಂಪತಿ ಡಿವೋರ್ಸ್ ವಿಚಾರ ಕಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಪತ್ನಿ ಸಂಗೀತಾ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ನಟಿ ತ್ರಿಶಾ ಜೊತೆ ವಿಜಯ್ ಮದುವೆ ಸಮಾರಂಭಕ್ಕೆ ಹಾಜರಾಗಿ ಎಲ್ಲರ ಹುಬ್ಬೇರಿಸಿದ್ದರು. ಕೆಲ ದಿನಗಳ ಹಿಂದೆ ನಟ ರವಿ ಮೋಹನ್ ಕೂಡ ಇದೇ ರೀತಿ ಮಾಡಿದ್ದರು. ಡಿವೋರ್ಸ್ ವಿವಾದ ಶುರುವಾಗುತ್ತಿದ್ದಂತೆ ಗಾಯಕಿ ಕೆನೀಶಾ ಜೊತೆ ಮದುವೆ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದರು. ಮ್ಯಾಚಿಂಗ್ ಡ್ರೆಸ್‌ನಲ್ಲಿ ಇಬ್ಬರೂ ಮಿಂಚಿದ್ದರು.

Ravi Mohan Breaks Silence Amid Divorce Row With Aarthi Ravi Shares Emotional Post

ಸದ್ಯ ವಿಜಯ್- ಸಂಗೀತಾ ಡಿವೋರ್ಸ್ ಚರ್ಚೆ ನಡುವೆ ರವಿ ಮೋಹನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಪೋಸ್ಟ್ ಮಾಡಿದ್ದಾರೆ. "ನಾನು ಶಾಂತಿಯುತವಾಗಿ ನನ್ನ ಜೀವನವನ್ನು ಮತ್ತೆ ಕಟ್ಟಿಕೊಳ್ಳುತ್ತಿದ್ದೇನೆ. ನೀವು ಹೇಳಲು ಬಯಸುವ ಎಲ್ಲವನ್ನೂ ಮತ್ತೊಮ್ಮೆ ಹೇಳಿ, ಏಕೆಂದರೆ ಮಹಿಳೆಯರು ಮಾತ್ರ ಸರಿ ಎಂದು ನೀವು ಭಾವಿಸುತ್ತೀರಿ. ಪುರುಷರು ದೊಡ್ಡ ಬಲಿಪಶುಗಳು ಮತ್ತು ನಮ್ಮ ನ್ಯಾಯಾಂಗ ವ್ಯವಸ್ಥೆಯು ಸಹ ಅದನ್ನು ಅರ್ಥಮಾಡಿಕೊಳ್ಳುತ್ತದೆ" ಎಂದು ಬರೆದುಕೊಂಡಿದ್ದಾರೆ.

ಸ್ಟೈಲಿಶ್ ಆಗಿ ನಡೆದು ಬರೆದು ವೀಡಿಯೋ ಪೋಸ್ಟ್ ಮಾಡಿರುವ ರವಿ ಮಹನ್ "ಒಂದು ದಿನ ನೀವೆಲ್ಲರೂ ನನ್ನ ಹೃದಯವನ್ನು ಮತ್ತು ನಾನು ಪ್ರೀತಿಸುವ ಜನರಿಗೆ ನಾನು ಏನು ಮಾಡಿದ್ದೇನೆಂದು ಅರ್ಥ ಮಾಡಿಕೊಳ್ಳುತ್ತೀರಾ. ಒಬ್ಬ ವ್ಯಕ್ತಿ ಶಾಂತಿಯುತವಾಗಿ ಬದುಕಲು ಬಿಡಿ. ನಿಮ್ಮ ಕೊಳಕು ಆಲೋಚನೆಗಳನ್ನು ನೀವೇ ಇಟ್ಟುಕೊಳ್ಳಿ. ನನ್ನನ್ನು ಬದಲಾಯಿಸಬಹುದೆಂದು ತಿಳಿದುಕೊಳ್ಳುವಷ್ಟು ವಿನಮ್ರ. ನನ್ನಂತೆ ಯಾರೂ ಇಲ್ಲ ಎಂದು ತಿಳಿದುಕೊಳ್ಳುವಷ್ಟು ಆತ್ಮವಿಶ್ವಾಸದೊಂದಿಗೆ ನಾನು ನನ್ನ ಹಾದಿಗೆ ಹಿಂತಿರುಗುತ್ತಿದ್ದೇನೆ" ಎಂದು ರವಿ ಮೋಹನ್ ಪೋಸ್ಟ್ ಮಾಡಿದ್ದಾರೆ.

ಪತಿ ರವಿ ಮೋಹನ್ ಅವರಿಗೆ ಆರತಿ ತಿಂಗಳಿಗೆ 40 ಲಕ್ಷ ಜೀವನಾಂಶ ಕೇಳಿದ್ದಾರೆ. 2009ರಲ್ಲಿ ಜಯಂ ರವಿ ಹಾಗೂ ಆರತಿ ಮದುವೆ ನಡೆದಿತ್ತು. 18 ವರ್ಷಗಳ ಬಳಿಕ ದಂಪತಿ ಭಿನ್ನಾಭಿಪ್ರಾಯಗಳಿಂದ ದೂರಾಗಲು ಬಯಸಿದ್ದಾರೆ. ಕೆನಿಶಾ ಕಾರಣಕ್ಕೆ ತಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿತು ಎಂದು ಆರತಿ ಆರೋಪಿಸಿದ್ದಾರೆ. ರವಿ ಮೋಹನ್ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರೂ ಆರತಿ ರಾಜಿಗೆ ಮುಂದಾಗಿದ್ದರು. ಏಕಪಕ್ಷೀಯವಾಗಿ ರವಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದಿದ್ದರು. ಆದರೆ ಅದಕ್ಕೆ ರವಿ ಒಪ್ಪಲಿಲ್ಲ.

ಪತ್ನಿ ಆರತಿ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ನನಗೆ ಕಿರುಕುಳ ನೀಡುತ್ತಿದ್ದಳು. ನನಗೆ ಸ್ವಾತಂತ್ರ್ಯವೇ ಇಲ್ಲದಂತೆ ಆಗಿತ್ತು. ನನ್ನ ಪೋಷಕರನ್ನು ನೋಡಲು ಅವಕಾಶ ಮಾಡಿಕೊಡುತ್ತಿರಲಿಲ್ಲ. ಇದರಲ್ಲಿ ಆರತಿ ಅವರ ತಾಯಿ ಬೆಂಬಲವೂ ಇದೆ. ನನ್ನ ಕಷ್ಟದ ದಿನಗಳಲ್ಲಿ ಕೇನಿಶಾ ಜೊತೆಯಾಗಿ ನಿಂತಳು ಎಂದು ರವಿ ಮೋಹನ್ ಹೇಳಿದ್ದರು.

ಇನ್ನು ಕೇನಿಶಾ ಬಗ್ಗೆ ರವಿ ಮೋಹನ್ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪತ್ರ ಬರೆದಿದ್ದರು. ಕೇನಿಶಾ ನನಗೆ ಆತ್ಮೀಯ ಸ್ನೇಹಿತೆಗಿಂತಲೂ ಹೆಚ್ಚು. ಆಕೆಯೇ ನನ್ನ ಲೈಫ್‌ಲೈನ್ ಎಂದು ಹೇಳಿಕೊಂಡಿದ್ದರು. ಸಿನಿಮಾಗಳ ವಿಚಾರಕ್ಕೆ ಬಂದರೆ ರವಿ ಮೋಹನ್ ನಟನೆಯ ಸಿನಿಮಾಗಳು ಇತ್ತೀಚೆಗೆ ಹೆಚ್ಚು ಸದ್ದು ಮಾಡ್ತಿಲ್ಲ. ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ 'ಪರಾಶಕ್ತಿ' ಚಿತ್ರದ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಓಟಿಟಿಯಲ್ಲಿ ಹಿಟ್ ಆಗಿತ್ತು. 'ಕರಾಟೆ ಬಾಬು', 'ಬ್ರೋ ಕೊಡ್' ಎಂಬ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

More from Filmibeat

Read more about: vijay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X