ಡಿವೋರ್ಸ್..ಮಾನಸಿಕ ಕುರುಕುಳ.. ಬಿಟ್ಟುಹೋದ ಗೆಳತಿ.. ಕೈ ಕುಯ್ದುಕೊಂಡ ರವಿ ಮೋಹನ್; ಅತ್ತು ಗೋಳಾಡಿದ ನಟ

ತಮಿಳು ನಟ ರವಿ ಮೋಹನ್ ಹಾಗೂ ಪತ್ನಿ ಆರತಿ ಭಿನ್ನಾಭಿಪ್ರಾಯಗಳಿಂದ ದೂರಾಗಲು ಬಯಸಿದ್ದಾರೆ. ಡಿವೋರ್ಸ್ ಕೋರಿ ರವಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತ್ನಿ ಹಾಗೂ ಆಕೆಯ ಕುಟುಂಬದಿಂದ ಮಾನಸಿಕ ಕಿರುಕುಳ ಎದುರಿಸಿದ್ದಾಗಿ ಆರೋಪಿಸಿದ್ದರು. ಬಳಿಕ ಮನಶ್ಶಾಸ್ತ್ರಜ್ಞೆ, ಆಧ್ಯಾತ್ಮಿಕ ಚಿಕಿತ್ಸಕಿ, ಗಾಯಕಿ ಕೆನಿಶಾಗೆ ಹತ್ತಿರವಾಗಿದ್ದರು.

ರವಿ ಹಾಗೂ ಕೆನಿಶಾ ಕೈ ಕೈ ಹಿಡಿದು ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನ್ಯಾಯಾಲಯದಲ್ಲಿ ರವಿ ಹಾಗೂ ಆರತಿ ಡಿವೋರ್ಸ್ ಪ್ರಕರಣ ಇತ್ಯರ್ಥವಾಗಿಲ್ಲ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಟ್ರೋಲ್ ಮಾಡುತ್ತಿದ್ದಾರೆ, ಬೇಕೆಂದೇ ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದ್ದಾರೆ, ಬೆದರಿಸುತ್ತಿದ್ದಾರೆ ಎಂದು ಆರೋಪಿದ್ದಾರೆ. ಇದೇ ವಿಚಾರವನ್ನು ಕೆನಿಶಾ ವಿಡಿಯೋ ಮಾಡಿ ಹೇಳಿದ್ದರು. ನಾನು ಚೆನ್ನೈ ಬಿಟ್ಟು ಹೋಗುತ್ತಿದ್ದೇನೆ ಎಂದಿದ್ದರು. ಇದೀಗ ಸ್ವತಃ ಜಯಂ ರವಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಆರತಿ ಹಾಗೂ ಅವರ ಕುಟುಂಬದ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.

Ravi Mohan opens up about cyberbullying pain after divorce announcement from wife

ಡಿವೋರ್ಸ್ ಪ್ರಕರಣ ಶುರುವಾದ ಬಳಿಕ ನನ್ನ ಮಕ್ಕಳನ್ನು ನೋಡಲು ನನಗೆ ಸಾಧ್ಯವಾಗಿಲ್ಲ. ಫೋನ್ ಮಾಡಲು ಬಿಡುತ್ತಿಲ್ಲ. ಶಾಲೆಗೆ ಬಾಡಿಗಾರ್ಡ್ ಕಳಿಸಿ ನಾನು ಅವರನ್ನು ಭೇಟಿ ಮಾಡದಂತೆ ಮಾಡಿದ್ದಾರೆ. ನನ್ನ ಮಕ್ಕಳನ್ನು ನೋಡದೇ ಇರಲು ಸಾಧ್ಯವಾಗ್ತಿಲ್ಲ. ಇದೇ ನೋವಿನಲ್ಲಿ ನನ್ನ ಕೈಗಳನ್ನು ಕುಯ್ದುಕೊಂಡೆ. ನೋಡಿ ಎಂದು ರವಿ ಕೈಗಳನ್ನು ಮಾಧ್ಯಮಗಳತ್ತ ತೋರಿಸಿದ್ದಾರೆ. ನಾನು ಹೋಗ್ತೀನಿ, ಆದ್ರೆ ನನ್ನ ಜೀವನ ಹಾಳು ಮಾಡಿದ ಎಲ್ಲರ ಕಥೆ ಮುಗಿಸಿ ಬಳಿಕ ಹೋಗ್ತೀನಿ. ನನ್ನ ವೈವಾಹಿಕ ಜೀವನ ಚೆನ್ನಾಗಿ ಇದ್ದಿದ್ದರೆ ನಾನು ಯಾಕೆ ಇಷ್ಟೆಲ್ಲಾ ಆಗ್ತಿತ್ತು. ನನಗೆ ದಾಂಪತ್ಯದಲ್ಲಿ ಬಹಳ ದ್ರೋಹ ಎದುರಾಯಿತು. ಆದರೂ ಸಹಿಸಿಕೊಂಡಿದ್ದೆ. ಇನ್ನು ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾಗ ಹೊರ ಬಂದೆ ಎಂದಿದ್ದಾರೆ.

ನನಗೆ ವೈಯಕ್ತಿಕವಾಗಿ ಒಂದೇ ಒಂದು ಬ್ಯಾಂಕ್ ಅಕೌಂಟ್ ಇಲ್ಲ. ಇರುವ ಒಂದು ಬ್ಯಾಂಕ್ ಅಕೌಂಟ್ ಕೂಡ ಜಂಟಿ ಅಕೌಂಟ್ ಆಗಿತ್ತು. ನಾನು ಸ್ವಲ್ಪ ಹಣ ಡ್ರಾ ಮಾಡಿದ್ರು, ಫೋನ್ ಬರ್ತಿತ್ತು. ಯಾಕೆ ಹಣ ಅಂತ ಕೇಳ್ತಿದ್ರು. ನಾನೇ ಸಂಪಾದನೆ ಮಾಡಿದರೂ ಖರ್ಚು ಮಾಡುಚವಂತಿರಲಿಲ್ಲ. ಮೌನವಾಗಿ ಎಲ್ಲವನ್ನು ಸಹಿಸಿಕೊಂಡೆ. ನನ್ನ ಹೆತ್ತವರು ಅವಳನ್ನು ಮದುವೆಯಾಗಬೇಡಿ ಎಂದು ಬೇಡಿಕೊಂಡರು. ಆದರೆ ನಾನು ಅವರ ಮಾತನ್ನು ಕೇಳಲು ನಿರಾಕರಿಸಿ ಈಗ ನೋವು ಅನುಭವಿಸುತ್ತಿದ್ದೇನೆ ಎಂದು ಜಯಂ ರವಿ ಹೇಳಿದ್ದಾರೆ.

ನನಗೆ ಡಿವೋರ್ಸ್ ಸಿಗುವವರೆಗೂ ನನ್ನ ಸಿನಿಮಾಗಳು ಬಿಡುಗಡೆ ಆಗುವುದಿಲ್ಲ.. ನಾನು ಯಾವುದೇ ಸಿನಿಮಾದಲ್ಲಿ ನಟಿಸಲ್ಲ. ನನಗೆ ಆದ ಅವಮಾನವನ್ನು ಸಹಿಸಲು ಸಾಧ್ಯವಾಗಲಿಲ್ಲ.. ನನ್ನ ವೈಯಕ್ತಿಕ ಜೀವನ ಸರಿಪಡಿಸಿಕೊಂಡ ಮೇಲೆ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತೇನೆ. ದಯವಿಟ್ಟು ನನಗೆ ಕಿರುಕುಳ ನೀಡುವುದನ್ನು ಅಥವಾ ಬೆದರಿಸುವುದನ್ನು ನಿಲ್ಲಿಸಿ. ನಾನು ನನ್ನ ಕಚೇರಿಯಲ್ಲಿ ಮಾತ್ರ ಇರುತ್ತೇನೆ, ಯಾರಾದರೂ ನನ್ನೊಂದಿಗೆ ಮಾತನಾಡಲು ಬಯಸಿದರೆ, ಅವರು ನೇರವಾಗಿ ಬರಬಹುದು. ಸೈಬರ್ ನಿಂದನೆ ಮಾಡಿ ಬಲವಂತವಾಗಿ ಕೆನಿಶಾ ದೂರಹೋಗುವಂತೆ ಮಾಡಿದರು. ಅವಳು ಎಲ್ಲಿದ್ದರೂ ಚೆನ್ನಾಗಿರಲಿ ಎಂದು ಬಯಸುತ್ತೇನೆ ಎಂದು ಜಯಂ ರವಿ ವಿವರಿಸಿದ್ದಾರೆ.

ಅವತ್ತು ಆರತಿ ಸಾಯುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಕೈಕುಯ್ದುಕೊಂಡು ನನ್ನ ಮದುವೆ ಆಗಿದ್ಲು. ಇವತ್ತು ನಾನು ಅದೇ ಮಾಡುವಂತೆ ಮಾಡಿಬಿಟ್ಲು.. ಅವಳಿಂದ ದೂರಾಗಿ ಈ 2 ವರ್ಷ ನಾನು ನೆಮ್ಮದಿಯಾಗಿ ಇದ್ದೆ. ಆರಾಮಾಗಿ ಉಸಿರಾಡುತ್ತಿದ್ದೆ. ನನ್ನ ಜೊತೆಗಿರುವ ಎಲ್ಲರಿಗೂ ಈ ವಿಚಾರ ಗೊತ್ತು. ಅದೇ ಭಯದಲ್ಲೇ ನಾನು ಇಷ್ಟು ದಿನ ಸುಮ್ಮನಿದ್ದೆ. ನನ್ನ ಮಕ್ಕಳಿಗಾಗಿ ಎಲ್ಲವನ್ನು ಸಹಿಸಿಕೊಂಡೆ. ಮಕ್ಕಳನ್ನು ನೋಡಲು ಬಿಡಲ್ಲ ಅಂದ್ರೆ ಹೇಗೆ? ಎಂದು ರವಿ ಮೋಹನ್ ಬೇಸರ ವ್ಯಕ್ತಪಡಿಸಿದ್ದಾರೆ.

Read more about: actor kollywood relationship
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X