ಏನ್ರೀ ಫೆಮಿನಿಸಂ.. ಆ ನಟಿಯಿಂದ ನನ್ನ ಸಂಸಾರ ಹಾಳಾಯ್ತು.. ರವಿ ಮೋಹನ್ ಆರೋಪದ ಬೆನ್ನಲ್ಲೇ ಖುಷ್ಭು ಹೆಸ್ರು ಟ್ರೆಂಡಿಂಗ್

ತಮಿಳು ನಟ ರವಿ ಮೋಹನ್ ಹಾಗೂ ಆರತಿ ಕೌಟುಂಬಿಕ ಕಲಹ ಮತ್ತೆ ಬೀದಿಗೆ ಬಂದಿದೆ. ಎರಡು ವರ್ಷಗಳ ಹಿಂದೆ ಪತ್ನಿಯಿಂದ ಡಿವೋರ್ಸ್ ಕೇಳಿ ನಟ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಪತ್ನಿ ಆರತಿ ಅದಕ್ಕೆ ಒಪ್ಪಲಿಲ್ಲ. ಸಂಸಾರ ಸರಿಪಡಿಸಿಕೊಳ್ಳುವ ಮಾತು ಆಡಿದ್ದರು. ಅಷ್ಟರಲ್ಲೇ ಮನಶ್ಶಾಸ್ತ್ರಜ್ಞೆ, ಆಧ್ಯಾತ್ಮಿಕ ಚಿಕಿತ್ಸಕಿ, ಗಾಯಕಿ ಕೆನಿಶಾ ಜೊತೆ ರವಿ ಮೋಹನ್ ಸುತ್ತಾಡಲು ಆರಂಭಿಸಿದ್ದರು.

ರವಿ ಹಾಗೂ ಆರತಿ ದಾಂಪತ್ಯದಲ್ಲಿ ಕೆನಿಶಾ ಹುಳಿ ಹಿಂಡಿದ್ದಾಳೆ ಎನ್ನುವಂತೆ ಚರ್ಚೆ ಶುರುವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಟ್ರೋಲ್ ಆಯಿತು. ಇದೀಗ ಕೆನಿಶಾ ಕೂಡ ದೂರಾಗಿದ್ದ ನಟ ರವಿ ಮೋಹನ್ ಸುದ್ದಿಗೋಷ್ಠಿ ನಡೆಸಿ ಕೆಂಡಾಮಂಡಲವಾಗಿದ್ದಾರೆ. ಮಾಜಿ ಪತ್ನಿ ಆರತಿ ಹಾಗೂ ಆಕೆಯ ಕುಟುಂಬದ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ನಡುವೆ ನಟಿಯೊಬ್ಬರ ಹೆಸರು ಎಳೆದು ತಂದು ಚರ್ಚೆ ಹುಟ್ಟಾಕ್ಕಿದ್ದಾರೆ. ಆಕೆಯಿಂದಲೇ ನನ್ನ ಸಂಸಾರ ಹಾಳಾಯ್ತು ಎಂದು ಆರೋಪಿಸಿದ್ದಾರೆ. ಆದರೆ ನೇರವಾಗಿ ನಟಿಯ ಹೆಸರು ಹೇಳಿಲ್ಲ.

Ravi Mohan s Idli Actress Remark Sparks Khushbu Sundar Buzz After Explosive Press Meet

ಆರತಿ ಹಾಗೂ ಆಕೆಯ ಕುಟುಂಬದಿಂದ ಇವತ್ತಿಗೂ ಬಹಳ ಕಿರುಕುಳ ಎದುರಾಗುತ್ತಿದೆ. ನನ್ನ ಮಕ್ಕಳನ್ನು ನಾನು ನೋಡಲು ಬಿಡುತ್ತಿಲ್ಲ ಎಂದು ನಟ ರವಿ ಮೋಹನ್ ನೋವು ತೋಡಿಕೊಂಡಿದ್ದಾರೆ. ನನ್ನ ವೈಯಕ್ತಿಕ ಜೀವನದ ಸರಿ ಹೋಗುವರೆಗೆ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗುವುದಿಲ್ಲ ಎಂದಿದ್ದಾರೆ. ಆರತಿ ಸೈಬರ್ ನಿಂದನೆ, ಬೆದರಿಕೆ ಹಾಕಿ ಕೆನಿಶಾ ನನ್ನಿಂದ ದೂರಾಗುವಂತೆ ಮಾಡಿದ್ದಾಳೆ ಎಂದಿದ್ದಾರೆ. ಏನ್ರೀ ಫೆಮಿನಿಸಂ ಎಂದು ಕೂಗಾಡಿ ಅತ್ತು ಗೋಳಾಡಿದ್ದಾರೆ.

ಇಷ್ಟು ದಿನ ನಾನು ಮಾತನಾಡದೇ ಇದ್ದಿದ್ದೇ ತಪ್ಪು. ಏನ್ರೀ ಗಂಡು, ಹೆಣ್ಣು.. ಫೆಮಿನಿಸಂ ಅಂದ್ರೆ ಏನು? ಎಂದು ರವಿ ಮೋಹನ್ ಪ್ರಶ್ನಿಸಿದ್ದಾರೆ. "ಫೆಮಿನಿಸಂ ಅಂದ್ರೆ ಏನು? ರೇ*ಪ್ ವಿರೋಧಿಸಿ ಸಿನಿಮಾ ಮಾಡಿದವನು ನಾನು. ಸಿನಿಮಾ ಗೆಲ್ಲುತ್ತೋ ಇಲ್ಲವೋ ಗೊತ್ತಿರಲಿಲ್ಲ. ಅದು ಬಹಳ ಮುಖ್ಯ ಎಂದು ಸಿನಿಮಾ ಮಾಡಿದ್ದೆ. ಹೆಣ್ಣುಮಕ್ಕಳಿಗೆ ಗೌರವ ಕೊಡಬೇಕು ಎಂದು ನೋಡಿದ್ದೆ. ಹೆಣ್ಣಿಗೆ ಗೌರವ ನೀಡುವ ಬಗ್ಗೆ ನನಗೆ ಹೇಳ್ತೀರಾ.. ಸತ್ಯಕ್ಕೆ ನ್ಯಾಯ ಸಿಗಬೇಕು ಎಂದು 2 ವರ್ಷ ಇದ್ದೆ. ಎಲ್ಲಾ ದಾಖಲೆ ಸಿಕ್ಕಮೇಲೆ ಹೇಳ್ತೀನಿ. 14 ವರ್ಷ ನಾನು ಎಲ್ಲಾ ನೋವು ನುಂಗಿಕೊಂಡಿದ್ದೆ. ನಾನು ಹೇಳಬಹುದಿತ್ತಲ್ಲ. ನನ್ನ ಮಕ್ಕಳನ್ನು ದೂರ ಮಾಡಿದ್ರೆ ಹೇಗೆ ಬಿಡ್ತೀನಿ" ಎಂದು ಕೂಗಾಡಿದ್ದಾರೆ.

ಮೂರು ಅಕ್ಷರದ ಹೆಸರಿನ ನಟಿಯೊಬ್ಬಳು ಇದ್ದಾಳೆ, ಇಡ್ಲಿ ನಟಿ, ಅದನ್ನು ಹೇಳಿಬಿಡ್ತೀನಿ.. ಅವತ್ತು ಪರೋಕ್ಷವಾಗಿ ಏನೋ ಮಾತನಾಡಿದ್ಲು ಎಂದು ನಟಿಯೊಬ್ಬರ ಬಗ್ಗೆ ರವಿ ಮೋಹನ್ ಮಾತನಾಡಿದ್ದಾರೆ. "ಅವರ ತಲೆಮಾರಿನ ಮೂವರು ಹಿರಿಯ ನಟರ ಜೊತೆ ಸೇರಿ ನನ್ನ ಸಂಸಾರ ಹಾಳು ಮಾಡಲು ನೋಡಿದ್ಲು. ಮೂವರ ಜೀವನ ಹಾಳು ಮಾಡಲು ಹೊರಟ ಆ ಹೆಂಗಸು, ನನ್ನ ಜೀವನದ ಬಗ್ಗೆ ಮಾತನಾಡುತ್ತಾಳೆ. ಬೇರೆ ಯಾವುದಾದರೂ ವಿಚಾರ ಬಂದಾಗ ಫೆಮಿನಿಸಂ, ಅದು ಇದು ಅಂತಾಳೆ. ನನ್ನ ಬಗ್ಗೆ ಮಾತನಾಡಲು ನಿನಗೆ ಮಾನ ಮರ್ಯಾದೆ ಇದ್ಯಾ? ನನಗಿಂತ ಚೆನ್ನಾಗಿ ನಟಿಸ್ತೀಯಾ ನಟಿಸು, ನಾನೇ ನಿನ್ನ ಕಾಲಿಗೆ ಬೀಳ್ತೀನಿ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಬೇಡ" ಎಂದಿದ್ದಾರೆ.

ರವಿ ಮೋಹನ್ ಪತ್ನಿ ಆರತಿ ಹಾಗೂ ನಟಿ ಖುಷ್ಬೂ ಸುಂದರ್ ನಡುವೆ ಆತ್ಮೀಯ ಒಡನಾಟವಿದೆ. ರಿವೋರ್ಸ್ ವಿಚಾರ ಬೆಳಕಿಗೆ ಬಂದಾಗ ಖುಷ್ಬೂ ಪರೋಕ್ಷವಾಗಿ ರವಿ ಮೋಹನ್ ಬಗ್ಗೆ ಕಾಮೆಂಟ್ ಮಾಡಿ ಟ್ವೀಟ್ ಮಾಡಿದ್ದರು. ಇದೀಗ ರವಿ ಮೋಹನ್ ಸುದ್ದಿಗೋಷ್ಠಿ ಬೆನ್ನಲ್ಲೇ ಮಾರ್ಮಿಕವಾಗಿ ಮತ್ತೊಂದು ಟ್ವೀಟ್ ಮಾಡಿದ್ದಾರೆ. ಇದನ್ನೆಲ್ಲಾ ನೋಡಿ ರವಿ ಮೋಹನ್ ಹೇಳಿದ ಇಡ್ಲಿ ನಟಿ ಇದೇ ಖುಷ್ಬೂ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಇದ್ದಕ್ಕಿದಂತೆ ಖುಷ್ಬೂ ಹೆಸರು ಟ್ರೆಂಡ್ ಆಗುವಂತಾಗಿದೆ.

"ಕೆಲವರು ತಮ್ಮ ಡಿಎನ್ಎ ಸಾಬೀತುಪಡಿಸಲು ತುಂಬಾ ಕಷ್ಟಪಡುತ್ತಾರೆ. ನಾನು ಸರಿ ಎಂದು ಸಾಬೀತುಪಡಿಸಿದ್ದಕ್ಕಾಗಿ ಧನ್ಯವಾದಗಳು" ಎಂದು ನಟಿ ಖುಷ್ಬೂ ಸುಂದರ್ ಪೋಸ್ಟ್ ಮಾಡಿದ್ದಾರೆ. ಸಾಕಷ್ಟು ಜನ ಕಾಮೆಂಟ್ ಬಾಕ್ಸ್‌ನಲ್ಲಿ ರವಿ ಮೋಹನ್ ಸುದ್ದಿಗೋಷ್ಠಿ ಬಗ್ಗೆ ಚರ್ಚಿಸಿದ್ದಾರೆ. ಖುಷ್ಬೂ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆರತಿ ಕುಟುಂಬದವರು ನನ್ನ ಮೇಲೆ ವಾಮಾಚಾರ ಮಾಡಿದ್ರು, ರಕ್ತ ವಾಂತಿ ಆಗಿತ್ತು ಎಂದು ರವಿ ಮೋಹನ್ ಆರೋಪಿಸಿದ್ದಾರೆ.

Read more about: khushboo kollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X