twitter
    For Quick Alerts
    ALLOW NOTIFICATIONS  
    For Daily Alerts

    ತಮಿಳು ರಾಕರ್ಸ್ 1 ತಿಂಗಳಿನ ಆದಾಯ ಕೇಳಿದ್ರೆ ಆಶ್ಚರ್ಯ ಆಗುತ್ತೆ!

    |

    ಪೈರಸಿ ಎಂದ ತಕ್ಷಣ ಮೊದಲು ಎಲ್ಲರ ಬಾಯಿಗೆ ಬರುವ ಹೆಸರು ತಮಿಳು ರಾಕರ್ಸ್. ಈ ಪೈರೈಟ್ ವೆಬ್ ಸೈಟ್ ಅಷ್ಟರ ಮಟ್ಟಗೆ ಫೇಮಸ್ ಆಗಿದೆ. ಬೆಳಗ್ಗೆ ಬಿಡುಗಡೆಯಾದ ಸಿನಿಮಾವನ್ನು ಮಧ್ಯಾಹ್ನದ ಒಳಗೆ ಪೈರಸಿ ಮಾಡುವ ಪ್ರವೀಣರು ಇವರು.

    ಇವ್ರು ಸೂಪರ್ ಸ್ಟಾರ್ ಗಳಿಗೆಯೇ ಚಾಲೆಂಜ್ ಹಾಕಿ, ಅವರ ಸಿನಿಮಾಗಳನ್ನು ಪೈರಸಿ ಮಾಡುತ್ತಾರೆ. ಆದರೆ, ಇದುವರೆಗೆ ಇವರನ್ನು ಹಿಡಿಯಲು ಯಾರಿಗೂ ಆಗಿಲ್ಲ. ಇಷ್ಟು ದಿನ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಸಿನಿಮಾಗಳನ್ನು ಲೀಕ್ ಮಾಡುತ್ತಿದ್ದವರು, ಈಗ ಕನ್ನಡ ಚಿತ್ರಗಳ ಪೈರಸಿ ಮಾಡುತ್ತಿದ್ದಾರೆ.

    ಮೊದಲ ದಿನವೇ ಪೈರಸಿಯಾಯ್ತು 'ಪೈಲ್ವಾನ್' ಸಿನಿಮಾಮೊದಲ ದಿನವೇ ಪೈರಸಿಯಾಯ್ತು 'ಪೈಲ್ವಾನ್' ಸಿನಿಮಾ

    'ದಿ ವಿಲನ್', 'ಕೆಜಿಎಫ್', 'ನಟ ಸಾರ್ವಭೌಮ', 'ಯಜಮಾನ', 'ಕುರುಕ್ಷೇತ್ರ' ಇದೀಗ 'ಪೈಲ್ವಾನ್' ಹೀಗೆ ಕನ್ನಡದ ದೊಡ್ಡ ದೊಡ್ಡ ಚಿತ್ರಗಳ ಮೇಲೆ ಕಣ್ಣು ಹಾಕುತ್ತಿದ್ದಾರೆ. ತಮಿಳು ರಾಕರ್ಸ್ ಮಾಡಿರುವ ಕೆಟ್ಟ ಕೆಲಸದಿಂದ ಇಡೀ ಸ್ಯಾಂಡಲ್ ವುಡ್ ಹೊತ್ತಿ ಉರಿಯುತ್ತಿದೆ. 'ಪೈಲ್ವಾನ್' ಸಿನಿಮಾ ಪೈರಸಿ ಬೇರೆಯದ್ದೇ ರೂಪ ಪಡೆದುಕೊಳ್ಳುತ್ತಿದೆ.

    ಇಷ್ಟೊಂದು ಶಕ್ತಿಶಾಲಿಯಾಗಿ, ರಾಜರೋಷವಾಗಿ ಪೈರಸಿ ಮಾಡುವ ತಮಿಳು ರಾಕರ್ಸ್ ಬಗ್ಗೆ ಅನೇಕರಿಗೆ ಕುತುಹಲ ಇರುತ್ತದೆ. ಅವರ ಆದಾಯ ಎಷ್ಟು?, ಅದರ ಮಾಲೀಕ ಯಾರು? ಎನ್ನುವ ಪ್ರಶ್ನೆ ಇರುತ್ತದೆ. ಆ ಬಗ್ಗೆ ಕೆಲ ಪ್ರಮುಖ ವಿವರಗಳು ಮುಂದಿವೆ.

    ತಮಿಳು ರಾಕರ್ಸ್ ಅಂದರೆ ಏನು?

    ತಮಿಳು ರಾಕರ್ಸ್ ಅಂದರೆ ಏನು?

    ತಮಿಳು ರಾಕರ್ಸ್ ಒಂದು ಪೈರೈಟ್ ವೆಬ್ ಸೈಟ್. ಹೊಸ ಹೊಸ ಸಿನಿಮಾಗಳನ್ನು ಪೈರಸಿ ಮಾಡುವುದೇ ಇವರ ಕೆಲಸ. ರಿಲೀಸ್ ಆದ ಮೊದಲ ದಿನವೇ ಪೈರಸಿ ತೆಗೆಯುತ್ತಾರೆ. ಪ್ರಮುಖವಾಗಿ ದಕ್ಷಿಣ ಭಾರತ ಚಿತ್ರಗಳು ಇವರ ಟಾರ್ಗೆಟ್. ಸಿನಿಮಾಗಳ ಜೊತೆಗೆ ನೆಟ್ ಫಿಕ್ಸ್ ನ ಜನಪ್ರಿಯ ಸೀರಿಸ್, ಕಾಪಿ ರೈಟ್ಸ್ ಇರುವ ವಿಡಿಯೋ, ಕಿರುತೆರೆ ಶೋ ಗಳನ್ನು ಪೈರಸಿ ಮಾಡುತ್ತಾರೆ. ಹೆಚ್ಚು ದುಡ್ಡು ಕೊಟ್ಟು, ಸಿನಿಮಾ ನೋಡಲು ಆಗದೆ ಇದ್ದವರಿಗೂ, ಸಿನಿಮಾ ಸಿಗಬೇಕು ಎನ್ನುವುದು ಇವರ ಉದ್ದೇಶವಂತೆ.

    ತಿಂಗಳಿನ ಆದಾಯ ಎಷ್ಟು?

    ತಿಂಗಳಿನ ಆದಾಯ ಎಷ್ಟು?

    ತಮಿಳು ರಾಕರ್ಸ್ ಒಂದು ತಿಂಗಳಿನ ಆದಾಯ ಕೇಳಿದರೆ, ಆಶ್ಚರ್ಯ ಆಗುತ್ತದೆ. ಪ್ರತಿ ದಿನ ಈ ಸೈಟ್ ಗೆ 3 ರಿಂದ 4 ಲಕ್ಷ ಜನರು ಭೇಟಿ ನೀಡುತ್ತಾರೆ. ಪ್ರಮುಖವಾಗಿ ಜಾಹಿರಾತಿನ ಮೂಲಕ ಇವರಿಗೆ ದುಡ್ಡು ಬರುತ್ತದೆ. ತಿಂಗಳಿಗೆ ಕನಿಷ್ಟ 20 ರಿಂದ 80 ಲಕ್ಷದ ವರೆಗೆ ಹಣ ಮಾಡುತ್ತಾರೆ. ಪ್ರತಿ ದಿನ ಇವರ ಆದಾಯ 60 ಸಾವಿರದಿಂದ 2 ಲಕ್ಷ.

    ''ಡಿ ಬಾಸ್ ಸಿನಿಮಾ ನಮ್ಗೆ ಗ್ರೇಟ್, ಅದಕ್ಕೆ 'ಪೈಲ್ವಾನ್' ಲೀಕ್ ಮಾಡಿದೆ : ಆರೋಪಿ ರಾಕೇಶ್ ಹೇಳಿಕೆ''ಡಿ ಬಾಸ್ ಸಿನಿಮಾ ನಮ್ಗೆ ಗ್ರೇಟ್, ಅದಕ್ಕೆ 'ಪೈಲ್ವಾನ್' ಲೀಕ್ ಮಾಡಿದೆ : ಆರೋಪಿ ರಾಕೇಶ್ ಹೇಳಿಕೆ

    ವರ್ಷದ ಖರ್ಚು ಎಷ್ಟಿದೆ?

    ವರ್ಷದ ಖರ್ಚು ಎಷ್ಟಿದೆ?

    ತಮಿಳು ರಾಕರ್ಸ್ ಒಂದು ವರ್ಷಕ್ಕೆ ಸುಮಾರು 2 ಲಕ್ಷ ಖರ್ಚು ಮಾಡುತ್ತದೆ. ವೆಬ್ ಸೈಟ್ ರಕ್ಷಣೆ ಮಾಡಲು CloudFlare ಮತ್ತು Sucuri Firewall ಸೆಕ್ಯೂರಿಟಿ ಸರ್ವಿಸ್ ಗಳನ್ನು ಬಳಸುತ್ತದೆ. ಇದರ ಜೊತೆಗೆ ಡೊಮೈನ್ ಖರ್ಚು ಕೂಡ ಸೇರುತ್ತದೆ. ಚಿತ್ರದ ಪೈರಸಿ ಮಾಡಲು ಆಗುವ ಖರ್ಚಿನ ಬಗ್ಗೆ ಮಾಹಿತಿ ಗುಪ್ತವಾಗಿದೆ.

    ತಮಿಳು ರಾಕರ್ಸ್ ಗೆ ಹಣ ಹೇಗೆ ಬರುತ್ತದೆ?

    ತಮಿಳು ರಾಕರ್ಸ್ ಗೆ ಹಣ ಹೇಗೆ ಬರುತ್ತದೆ?

    ಯಾವುದೇ ವೆಬ್ ಸೈಟ್ ಆದ್ರೂ, ಅದಕ್ಕೆ ಆದಾಯದ ಮೂಲ ಜಾಹಿರಾತು. ಹಾಗೆಯೇ, ತಮಿಳು ರಾಕರ್ಸ್ ಕೂಡ ಜಾಹಿರಾತಿನ ಮೂಲಕ ಹಣ ಪಡೆಯುತ್ತದೆ. ಸಾಮಾನ್ಯವಾಗಿ ಗೂಗಲ್ ಈ ರೀತಿಯ ಪೈರಸಿ ವೆಬ್ ಸೈಟ್ ಗಳಿಗೆ ಜಾಹಿರಾತು ನೀಡುವುದಿಲ್ಲ. ಆದರೆ, ಕೆಲವು ಲೋಕಲ್ ನೆಟ್ ವರ್ಕ್ ಗಳು ತಮಿಳು ರಾಕರ್ಸ್ ಗೆ ಜಾಹಿರಾತು ನೀಡುತ್ತದೆ.

    ಪೈಲ್ವಾನ್ ಪೈರಸಿ: ವಿವಾದದ ಕೇಂದ್ರದಲ್ಲಿ 'ಯಜಮಾನನ ಅನ್ನದಾತರು'!ಪೈಲ್ವಾನ್ ಪೈರಸಿ: ವಿವಾದದ ಕೇಂದ್ರದಲ್ಲಿ 'ಯಜಮಾನನ ಅನ್ನದಾತರು'!

    ಇದರ ಮಾಲೀಕ ಯಾರು?

    ಇದರ ಮಾಲೀಕ ಯಾರು?

    ತಮಿಳು ರಾಕರ್ಸ್ ಮಾಲೀಕ ಮತ್ತು ಅಡ್ಮಿನ್ ಯಾರು ಎನ್ನುವ ಮಾಹಿತಿ ಖಚಿತವಾಗಿ ಇಲ್ಲ. ಆದರೆ, ಕಳೆದ ವರ್ಷ ಮಾರ್ಚ್ 15 ರಂದು ಪೊಲೀಸರು ಐದು ಜನರನ್ನು ಬಂದಿಸಿದ್ದರು. ಅವರು ಜಾಕ್ಸನ್, ಪ್ರಭು, ಕಾರ್ತಿ, ಸುರೇಶ್ ಮತ್ತು ಮಾರೀಯಾ ಜಾನ್ ಎಂಬ ಹೆಸರಿನವರು. ಪೊಲೀಸರು ಆಗ ಹೇಳಿದ್ದ ಪ್ರಕಾರ ಪ್ರಭು ತಮಿಳು ರಾಕರ್ಸ್ ಓನರ್ ಹಾಗೂ ಜಾನ್ ಡಿವಿಡಿ ರಾಕರ್ಸ್ ಓನರ್.ಏನೇ ಕಡಿವಾಣ ಹಾಕಿದರೂ ತಮಿಳು ರಾಕರ್ಸ್ ಹಾಗೆಯೇ ಮುಂದುವರೆಯುತ್ತಿದೆ.

    English summary
    Read how tamilrockers works, and how they make money.
    Wednesday, October 30, 2019, 17:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X