'ಸೂಪರ್ ಸ್ಟಾರ್' ರಜಿನಿಕಾಂತ್ 'ಕೂಲಿ' ಚಿತ್ರದ ಬಗ್ಗೆ ಹೇಳಿದ್ದೇನು 'ರಿಯಲ್ ಸ್ಟಾರ್' ..?

ಕೇವಲ ಡೈರೆಕ್ಟರ್ ಆಗಿ ಮಾತ್ರವಲ್ಲ ಆಕ್ಟರ್ ಆಗಿ ಕೂಡ ಹೆಸರು ಮಾಡಿದವರು ಉಪೇಂದ್ರ. ತಮ್ಮ ಅದ್ಭುತ ಪ್ರತಿಭೆಯ ಮೂಲಕ ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಹೆಸರು ಮಾಡಿ 'ಸೂಪರ್ ಸ್ಟಾರ್' ಆದ ಉಪೇಂದ್ರ ಈಗ ತಮ್ಮ ನೆಚ್ಚಿನ 'ಸೂಪರ್ ಸ್ಟಾರ್‌' ರಜಿನಿಕಾಂತ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಹೌದು, ಈ ಹಿಂದೆ 'ಕಮಲ್ ಹಾಸನ್‌' ಅವರಿಗೆ 'ವಿಕ್ರಂ' ಚಿತ್ರವನ್ನು ನಿರ್ದೇಶಿಸಿದ್ದ ಲೋಕೇಶ್ ಕನಕರಾಜ್ ಸದ್ಯಕ್ಕೆ ರಜಿನಿಕಾಂತ್‌ ಅವರಿಗೆ 'ಕೂಲಿ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಕೂಲಿ ಚಿತ್ರತಂಡವನ್ನು ಈಗ ಉಪೇಂದ್ರ ಸೇರಿಕೊಂಡಿದ್ದಾರೆ.

real-star-upendra-to-share-the-screen-with-superstar-rajinikanth-in-lokesh-kanagarajs-coolie

ಇನ್ನೂ .. ಸಹಜವಾಗಿ ರಜಿನಿಕಾಂತ್ ಚಿತ್ರದಲ್ಲಿ ಉಪೇಂದ್ರ ಅವರ ಪಾತ್ರದ ವಿನ್ಯಾಸ ಹೇಗಿರುತ್ತೆ ಎನ್ನುವ ಪ್ರಶ್ನೆ ಈ ಸುದ್ದಿ ಹೊರ ಬಂದ ಕ್ಷಣದಿಂದ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಸ್ಪಷ್ಟವಾದ ಉತ್ತರ ಸದ್ಯಕ್ಕೆ ಇಲ್ಲವಾದರೂ ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಕೂಲಿ ಚಿತ್ರದ ಪ್ರಮುಖ ಖಳನಾಯಕ ಎನ್ನುವ ಮಾತು ಸದ್ಯಕ್ಕೆ ಚೆನ್ನೈನಲ್ಲಿ ಕೇಳಿ ಬರುತ್ತಿದೆ. ಹಾಗೊಂದು ವೇಳೆ ಈ ಮಾತು ನಿಜವಾದಲ್ಲಿ ಸಿನಿಪ್ರಿಯರಿಗೆ ಕೂಲಿ ಹಬ್ಬದೂಟವೇ ಸರಿ.

ಅಂದ್ಹಾಗೇ ತಮ್ಮ ' ಉಪೇಂದ್ರ' ಚಿತ್ರದ ಸಂದರ್ಭದಲ್ಲಿ, ರಿಯಲ್ ಸ್ಟಾರ್ ಉಪೇಂದ್ರ ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನು ಭೇಟಿಯಾಗಿದ್ದರು. ವ್ಯೆಯಕ್ತಿಕವಾಗಿ ಕಾಲ ಕಳೆದಿದ್ದರು.ತಮ್ಮ ನೆಚ್ಚಿನ ನಾಯಕನನ್ನು ತುಂಬಾ ಹತ್ತಿರದಿಂದ ಕಂಡು ಸಂಭ್ರಮ ಪಟ್ಟಿದ್ದರು. 25 ವರ್ಷದ ಹಿಂದೆ ನಡೆದ ಈ ಭೇಟಿಯನ್ನು ಇವತ್ತು ಕೂಡ ಉಪೇಂದ್ರ ಮರೆತಿಲ್ಲ. ಇಂಥಾ ಉಪೇಂದ್ರಗೆ 'ಕೂಲಿ' ಸಿನಿಮಾ ಬಯಸದೇ ಬಂದ ಭಾಗ್ಯ. ಖುದ್ದು ಉಪೇಂದ್ರ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಮಾತು ಹೇಳಿದ್ದಾರೆ. ನಾನು ಕನಸು ಮನಸಿನಲ್ಲಿಯೂ ರಜಿನಿಕಾಂತ್ ಅವರ ಜೊತೆ ನಾನು ಮುಂದೊಂದು ದಿನ ತೆರೆ ಹಂಚಿಕೊಳ್ಳುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

real-star-upendra-to-share-the-screen-with-superstar-rajinikanth-in-lokesh-kanagarajs-coolie

ಮುಂದುವರೆದು ರಜಿನಿ ಸರ್ ನನ್ನ ಪಾಲಿಗೆ ದ್ರೋಣಾಚಾರ್ಯರಂತೆ ಎಂದಿರುವ ಉಪೇಂದ್ರ, ನಾನು ಹಲವಾರು ವರ್ಷಗಳಿಂದ ಅವರನ್ನು ಆರಾಧಿಸುತ್ತಾ, ಅವರನ್ನು ಹಿಂಬಾಲಿಸುತ್ತಾ ಬಂದಿದ್ದೇನೆ ಎಂದಿದ್ದಾರೆ. ವೃತ್ತಪರವಾಗಿ ಮತ್ತು ಆಧ್ಯಾತ್ಮಿಕವಾಗಿ ಅವರಿಂದ ನಾನು ತುಂಬಾ ಕಲಿತಿದ್ದೇನೆ ಎಂದಿದ್ದಾರೆ.

ಇನ್ನೂ ಕೂಲಿ ಚಿತ್ರಕ್ಕೆ ನನಗೆ ಕರೆ ಬಂದಾಗ ನನಗಾದ ಸಂಭ್ರಮ ಹೇಳಲು ಆಗದು ಎಂದಿರುವ ಉಪೇಂದ್ರ, ಅವರಿಂದಲೇ ಅಧಿಕೃತ ಘೋಷಣೆಯಾಗಲಿ ಎಂದು ನಾನು ಬಯಸುತ್ತಿದ್ದೆ, ಕಾಯುತ್ತಿದ್ದೇ ಎಂದು ನಕ್ಕಿದ್ದಾರೆ. ಇನ್ನೂ ಈಗಾಗ್ಲೇ ನಾನು ಹೋಗಿ ನನ್ನ ಲುಕ್ ಟೆಸ್ಟ್ ನೀಡಿ ಬಂದಿದ್ದೇನೆ, ಅವರೆಲ್ಲರಿಗೂ ಇಷ್ಟ ಆಗಿರುವುದು ಖುಷಿಯ ವಿಚಾರ ಎಂದಿರುವ ಉಪೇಂದ್ರ 'ಕೂಲಿ' ಚಿತ್ರದ ಈ ಪಾತ್ರವನ್ನು ನಾನು ಯಾವತ್ತು ಮರೆಯಲಾರೆ ಅಂದಿದ್ದಾರೆ. ನನ್ನ ಹೃದಯಕ್ಕೆ ಈ ಪಾತ್ರ ಸದಾ ಹತ್ತಿರವಾಗಿರಲಿದೆ ಅಂದಿದ್ಧಾರೆ.

ಉಳಿದಂತೆ ಕನ್ನಡದ ಜೊತೆ ಜೊತೆ ತೆಲುಗಿನಲ್ಲಿ ಏಕಕಾಲಕ್ಕೆ ಫೇಮಸ್ ಆದ ಉಪ್ಪಿ, ತಮ್ಮ 'ಹೆಚ್‌ಟುಓ' ಚಿತ್ರವನ್ನು ಕನ್ನಡದ ಜೊತೆ ತಮಿಳಿನಲ್ಲಿ ಕೂಡ ಚಿತ್ರೀಕರಣ ಮಾಡಿ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಆ ನಂತರ ವಿಶಾಲ್ ಅಭಿನಯದ 'ಸತ್ಯಂ' ಚಿತ್ರದಲ್ಲಿ ಕೂಡ ಉಪೇಂದ್ರ ಕಾಣಿಸಿಕೊಂಡಿದ್ದರು. ಇದಾದ ನಂತರ ಕಾಲಿವುಡ್‌ನಿಂದ ಅಂತರವನ್ನು ಕಾಪಾಡಿಕೊಂಡಿದ್ದ ಉಪೇಂದ್ರ ಈಗ 16 ವರ್ಷದ ನಂತರ ಮತ್ತೊಮ್ಮೆ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X