'ಪೊನ್ನಿಯಿನ್ ಸೆಲ್ವನ್' ಸಿನಿಮಾ ಮಾಡೋಕ್ಕಾಗಲ್ಲ, ತಕ್ಕ ನಿರ್ದೇಶಕರು, ಕಲಾವಿದರು ಇಲ್ಲ, ಅಂದ್ರೂ ಕೇಳ್ಲಿಲ್ಲ: ದುರೈ ಮುರುಗನ್

ತಮಿಳಿನ ಐತಿಹಾಸಿಕ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಮೊದಲ ಭಾಗ ಕಳೆದ ವರ್ಷ ರಿಲೀಸ್ ಆಗಿ ಸದ್ದು ಮಾಡಿತ್ತು. ಇದೀಗ ಚಿತ್ರದ 2ನೇ ಭಾಗ ಬಿಡುಗಡೆ‌ಗೆ ಸಜ್ಜಾಗಿದೆ. ಚಿತ್ರದ ಟ್ರೈಲರ್ ಲಾಂಚ್ ವೇದಿಕೆಯಲ್ಲಿ ಮಾತನಾಡಿದ ತಮಿಳುನಾಡು ಸಚಿವ ದುರೈ ಮುರುಗನ್ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸುಭಾಷ್‌ಕರನ್ ಬಹಳ ಅದ್ಧೂರಿಯಾಗಿ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುಭಾಷ್‌ಕರನ್ ಸಚಿವ ದುರೈ ಮುರುಗನ್ ಅವರಿಗೆ ಬಹಳ ಆತ್ಮೀಯ ಸ್ನೇಹಿತರು. ಇದೇ ಸ್ನೇಹದಿಂದ ಮೊದಲು ಸುಭಾಕರನ್ ಈ ಸಿನಿಮಾ ಮಾಡ್ತೀನಿ ಎಂದಾಗ ದುರೈ ಮುರುಗನ್ ಬೇಡ ಎಂದಿದ್ದರಂತೆ. ನಾನು ಕಲ್ಕಿ ಕೃಷ್ಣಮೂರ್ತಿ ಬರೆದ ಕಾದಂಬರಿ ಓದಿದ್ದೇನೆ, ಇದನ್ನು ಸಿನಿಮಾ ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿದ್ದೆ ಆದರೂ ಅವರು ಕೇಳಲಿಲ್ಲ ಸಿನಿಮಾ ನಿರ್ಮಿಸಿದರು ಎಂದಿದ್ದಾರೆ.

Reason Behind why Minister Durai Murugan advised Subaskaran not to make Ponniyin Selvan into a movie

"ನಾನು ಸುಭಾಷ್‌ಕರನ್‌ಗೆ ಹೇಳಿದ್ದೆ. ಕಥೆಗಳನ್ನು ಸಿನಿಮಾ ಮಾಡಬಹುದು. ಆದರೆ ಒಂದು ಸೂಪರ್ ಹಿಟ್ ಕಾದಂಬರಿಯನ್ನು ಸಿನಿಮಾ ರೂಪದಲ್ಲಿ ತರೋಕೆ ಸಾಧ್ಯವಿಲ್ಲ. ಇಂತಹ ಕಾದಂಬರಿಯನ್ನು ಸಿನಿಮಾ ಮಾಡಲು ಹೋದರೂ ಪಾತ್ರಗಳಿಗೆ ನ್ಯಾಯ ಒದಗಿಸುವಂತಹ ಕಲಾವಿದರು ಇಲ್ಲ ಎಂದು ಹೇಳಿದ್ದೆ. ಮಣಿರತ್ನಂ ಈ ಸಿನಿಮಾ ಮಾಡೋಕೆ ಸಾಧ್ಯಾನಾ ಎಂದು ನಾನು ಅಂದುಕೊಂಡಿದ್ದೆ. ಬರೀ ಕತ್ತಲಲ್ಲಿ ಸಿನಿಮಾ ಮಾಡುವ ನಿರ್ದೇಶಕ ಈ ಕಥೆ ಹೇಳೊಕೆ ಸಾಧ್ಯಾನಾ?" ಎಂದು ಸುಭಾಕರನ್‌ಗೆ ಹೇಳಿದ್ದೆ ಎಂದು ದುರೈ ಮುರುಗನ್ ವಿವರಿಸಿದ್ದಾರೆ.

"ನಾನು ಅರ್ಧ ಮನಸ್ಸಿನಿಂದಲೇ ಸುಭಾಕರನ್ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಮಾಡಲು ಒಪ್ಪಿಕೊಂಡೆ. ಆದರೆ ಮೊದಲ ಭಾಗ ನೋಡಿದ ಮೇಲೆ ನನ್ನಾ ಲೆಕ್ಕಾಚಾರಗಳೆಲ್ಲಾ ತಲೆ ಕೆಳಗಾಗಿತ್ತು. ಇಷ್ಟು ಅದ್ಭುತವಾದ ಕತೆಯನ್ನು ಇಷ್ಟು ಸೊಗಸಾಗಿ ಇಟ್ಟು ಬೇಗ ಹೇಗೆ ಮಾಡೋಕೆ ಸಾಧ್ಯವಾಯಿತು ಎಂದು ಅಚ್ಚರಿ ವ್ಯಕ್ತಪಡಿಸಿದ್ಧಾರೆ. "ನನಗೆ ಈ ಕಥೆಯನ್ನು ವಂದಿಯ ದೇವನ್ ಪಾತ್ರ ಬಹಳ ಇಷ್ಟ. ಆತ ಲವರ್ ಬಾಯೋ, ವೀರನೋ ಅನ್ನೋದನ್ನು ಹೇಳೋಕೆ ಸಾಧ್ಯವಿಲ್ಲ." ಎಂದಿದ್ದಾರೆ.

"ಅಷ್ಟೆಲ್ಲಾ ಹೇಳಿದರೂ ಕೇಳದೇ ಸುಭಾಷ್‌ಕರನ್ ಈ ಸಿನಿಮಾ ಮಾಡಿದ್ದಾರೆ. ಅವರಿಗೆ ಶುಭವಾಗಲಿ. ಮೊದಲ ಭಾಗಕ್ಕಿಂತ 2ನೇ ಭಾಗ ಬಹಳ ಅದ್ದೂರಿಯಾಗಿ ಮೂಡಿ ಬಂದಿದೆ. ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ದುರೈ ಮುರುಗನ್ ತಂಡಕ್ಕೆ ಶುಭ ಹಾರೈಸಿದ್ದಾರೆ. ನಿರ್ದೇಶಕ ಮಣಿರತ್ನಂ ಅವರಿಗೆ ಹ್ಯಾಟ್ಸಾಪ್. ಬಹುಕೋಟಿ ವೆಚ್ಚದ ಈ ಕಾಸ್ಟೂಮ್ ಡ್ರಾಮಾ ಸಿನಿಮಾದಲ್ಲಿ ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ತ್ರಿಷಾ, ಜಯಂ ರವಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎ. ಆರ್ ರಹಮಾನ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್.

Reason Behind why Minister Durai Murugan advised Subaskaran not to make Ponniyin Selvan into a movie

ಕಲ್ಕಿ ಕೃಷ್ಣಮೂರ್ತು ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಆಧರಿಸಿ ಸಿನಿಮಾ ಕಟ್ಟಿಕೊಡಲಾಗಿದೆ. 350 ಕೋಟಿ ರೂ. ಬಜೆಟ್‌ನಲ್ಲಿ 2 ಭಾಗಗಳಾಗಿ ಸಿನಿಮಾ ಮೂಡಿ ಬರುತ್ತಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಮೊದಲ ಭಾಗಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ತಮಿಳುನಾಡಿನಲ್ಲಿ ಮಾತ್ರ ಸಿನಿಮಾ ಸಖತ್ ಸದ್ದು ಮಾಡಿತ್ತು. ಬೇರೆ ಕಡೆಗಳಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. 'ಪೊನ್ನಿಯಿನ್ ಸೆಲ್ವನ್' ಸೀಕ್ವೆಲ್‌ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಸಿನಿಮಾ ಹೆಚ್ಚು ಸದ್ದು ಮಾಡುತ್ತೋ ಕಾದು ನೋಡಬೇಕಿದೆ.

More from Filmibeat

English summary
Reson Behind why Minister Durai Murugan advised Subaskaran not to make 'Ponniyin Selvan' Novel into a movie. Ponniyin Selvan- 2 trailer launch event was held at the Nehru Indoor Stadium on Wednesday. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X