ಈ ಒಂದು ಕಾರಣಕ್ಕೆ ನಟ ಶಿವಕಾರ್ತಿಕೇಯನ್ ಕುಡಿಯುವುದಿಲ್ಲ ಮತ್ತು ಸಿಗರೇಟ್ ಸೇದುವುದಿಲ್ಲವಂತೆ

By ಫಿಲ್ಮ್ ಡೆಸ್ಕ್

ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಶಿವಕಾರ್ತಿಕೇಯನ್ ಕೂಡ ಒಬ್ಬರು. ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡು ನಂತರ ತಮಿಳು ಚಿತ್ರರಂಗದಲ್ಲಿ ಮಾಸ್ ಹೀರೋ ಆಗಿ ಬೆಳೆದ ನಟ ಅನೇಕರಿಗೆ ಸ್ಫೂರ್ತಿ. ತುಂಬಾ ಕಷ್ಟಪಟ್ಟು ಶ್ರಮಪಟ್ಟು ಬೆಳೆದ ನಟ ಶಿವಕಾರ್ತಿಕೇಯನ್.

Recommended Video

RockLine Venkatesh Hospitalized,ಆಸ್ಪತ್ರೆಗೆ ದಾಖಲಾದ ರಾಕ್ ಲೈನ್ ವೆಂಕಟೇಶ್ | Filmibeat Kannada

ಶಿವಕಾರ್ತಿಕೇಯನ್ ಕೊನೆಯದಾಗಿ ಹೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಯಾವುದೆ ಸಿನಿಮಾ ರಿಲೀಸ್ ಗೆ ರೆಡಿ ಇಲ್ಲವಾದರು ಶಿವಕಾರ್ತಿಕೇಯನ್ ಈಗ ಸುದ್ದಿಯಲ್ಲಿದ್ದಾರೆ. ಅಭಿಮಾನಿಗಳು ಶಿವಕಾರ್ತಿಕೇಯನ್ ಅವರ ಭಾಷಣದ ಹಳೆಯ ತುಣುಕನ್ನು ವೈರಲ್ ಮಾಡಿದ್ದಾರೆ. ಮುಂದೆ ಓದಿ..

ಶಿವಕಾರ್ತಿಕೇಯನ್ ಹಳೆಯ ವಿಡಿಯೋ ವೈರಲ್

ಶಿವಕಾರ್ತಿಕೇಯನ್ ಹಳೆಯ ವಿಡಿಯೋ ವೈರಲ್

ನಟ ಶಿವಕಾರ್ತಿಕೇಯನ್ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋ ಈಗ ಸದ್ದು ಮಾಡುತ್ತಿದೆ. ದೀರ್ಘವಾಗಿರುವ ವಿಡಿಯೋದಲ್ಲಿ ಕಾರ್ತಿಕೇಯನ್ ಎಂದಿಗೂ ನಾನು ಸಿಗರೇಟ್ ಸೇದಿಲ್ಲ ಮತ್ತು ಕುಡಿದಿಲ್ಲ ಎಂದು ಹೇಳುತ್ತಿರುವ ಮಾತನ್ನು ಮಾತ್ರ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ ಅಭಿಮಾನಿಗಳು.

ಸ್ನೇಹಿತರು ಯಾವತ್ತು ಅಂತಹ ಅಭ್ಯಾಸಕ್ಕೆ ಕರೆಯುವುದಿಲ್ಲ

ಸ್ನೇಹಿತರು ಯಾವತ್ತು ಅಂತಹ ಅಭ್ಯಾಸಕ್ಕೆ ಕರೆಯುವುದಿಲ್ಲ

ಅನೇಕ ಸ್ಟಾರ್ ಕಲಾವಿದರಿಗೆ ಕುಡಿಯುವುದು ಮತ್ತು ಸ್ಮೋಕ್ ಮಾಡುವುದು ಸಹ ಒಂದು ಶೋಕಿಯಾಗಿರುತ್ತೆ. ಆದರೆ ಶಿವಕಾರ್ತಿಕೇಯನ್ ಹಾಗಲ್ಲ. ಈ ಬಗ್ಗೆ ಮಾತನಾಡಿರುವ ಶಿವಕಾರ್ತಿಕೇಯನ್ "ನನ್ನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಯಾಕಂದ್ರೆ ನಾನು ಸಿಗರೇಟ್ ಸೇದಿಲ್ಲ ಮತ್ತು ಮದ್ಯ ಸೇವಿಸಿಲ್ಲ. ನನ್ನ ಸ್ನೇಹಿತರು ಯಾವತ್ತು ನನ್ನನ್ನು ಅಂತರ ಅಭ್ಯಾಸಗಳಿಗೆ ಕರೆಯುವುದಿಲ್ಲ" ಎಂದು ಹೇಳಿದ್ದಾರೆ.

ಕುಡಿದು ಆರೋಗ್ಯ ಹಾಳುಮಾಡಿಕೊಳ್ಳಬೇಡಿ

ಕುಡಿದು ಆರೋಗ್ಯ ಹಾಳುಮಾಡಿಕೊಳ್ಳಬೇಡಿ

"ನಿಮ್ಮ ಹಣವಾಗಲಿ ಅಥವಾ ನಿಮ್ಮ ಪೋಷಕರ ಹಣವಾಗಿರಲಿ ಅಂತಹ ಅಭ್ಯಾಸಗಳಿಂದ ನಿಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಡಿ. ಇದು ಸಲಹೆ ಎಂದು ತಿಳಿಯಿರಿ. ಇದನ್ನು ಕೇಳೊಕೆ ತುಂಬಾ ಕಹಿಯಾಗಿರುತ್ತೆ ಎನ್ನುವುದು ಗೊತ್ತು. ಆದರೆ ಇದನ್ನು ಅನುಸರಿಸಲು ಪ್ರಯತ್ನಿಸಿ" ಎಂದು ಹೇಳಿದ್ದಾರೆ.

ಶಿವಕಾರ್ತಿಕೇಯನ್ ಸಿನಿಮಾಗಳು

ಶಿವಕಾರ್ತಿಕೇಯನ್ ಸಿನಿಮಾಗಳು

ಶಿವಕಾರ್ತಿಕೇಯನ್ ಸದ್ಯ ಎರಡು ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಡಾಕ್ಟರ್ ಮತ್ತು ಆಯಲನ್ ಎರಡು ಸಿನಿಮಾಗಳು ಚಿತ್ರೀಕರಣ ನಡೆಯುತ್ತಿತ್ತು ಆದರೆ ಲಾಕ್ ಡೌನ್ ಪರಿಣಾಮ ಚಿತ್ರೀಕರಣ ಸ್ಥಗಿತವಾಗಿದೆ. ಪರಿಸ್ಥಿತಿ ಸುಧಾರಿಸಿದ ನಂತರ ಚಿತ್ರೀಕರಣ ಮಾಡಲು ಸಜ್ಜಾಗಿದ್ದಾರೆ. ಶಿವಕಾರ್ತಿಕೇಯನ್ ಈ ಹಿಂದೆ ಮಾಡಿರುವ ಎಲ್ಲ ಪಾತ್ರಗಳಿಂದ ಡಾಕ್ಟರ್ ಸಿನಿಮಾದ ಪಾತ್ರ ವಿಭಿನ್ನವಾಗಿದಯಂತೆ.

More from Filmibeat

English summary
Tamil Actor Sivakarthikeyan says never smoked a cigarette and drink alcohol.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X