For Quick Alerts
  ALLOW NOTIFICATIONS  
  For Daily Alerts

  ಬೆತ್ತಲೆ ಫೋಟೋಗಾಗಿ ಎಡಕ್ಕೆ ಸ್ವೈಪ್ ಮಾಡಿ; 'ಸೂರ್ಯಕಾಂತಿ' ನಟಿಯ ಪೋಸ್ಟ್ ವೈರಲ್

  |

  ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ರೆಜಿನಾ ಕ್ಯಾಸಂದ್ರ ಯಾರಿಗೆ ತಾನೆ ಗೊತ್ತಿಲ್ಲ. ತಮಿಳು ಮೂಲದ ಈ ನಟಿ ಕನ್ನಡಿಗರಿಗೂ ಚಿರಪರಿಚಿತ. ನಟ ಚೇತನ್ ನಟನೆಯ ಸೂರ್ಯಕಾಂತಿ ಸಿನಿಮಾ ಮೂಲಕ ರಿಜಿನಾ ಕನ್ನಡ ಸಿನಿಮಾರಂಗದಲ್ಲೂ ಮಿಂಚಿದ್ದಾರೆ.

  ತಮಿಳು ಮತ್ತು ತೆಲುಗು ಸಿನಮಾರಂಗದಲ್ಲಿ ಬ್ಯುಸಿಯಾಗಿರುವ ರೆಜಿನಾ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ದಿನ ರೆಜಿನಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ಫೋಟೋ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಅನೇಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಪೋಸ್ಟ್ ಹಾಕಿದ್ದಾರೆ.

  ತನ್ನ ಫೋಟೋವನ್ನು ಶೇರ್ ಮಾಡುವ ಜೊತೆಗೆ ಒಂದು ಟ್ವಿಸ್ಟ ಕೂಡ ಇಟ್ಟಿದ್ದಾರೆ. ಫೋಟೋ ಕೆಳಗೆ ಬೆತ್ತಲೆ ಫೋಟೋಗಾಗಿ ಎಡಕ್ಕೆ ಸ್ವೈಪ್ ಮಾಡಿ ಎಂದು ಬರೆದ್ದಾರೆ.

  ಇದನ್ನ ನೋಡಿದ ಅಭಿಮಾನಿಗಳು ಒಮ್ಮೆ ಶಾಕ್ ಆಗಿದ್ದಾರೆ. ಅಲ್ಲದೆ ತಕ್ಷಣ ಸ್ವೈಪ್ ಮಾಡಿ ನೋಡಿದ್ದಾರೆ. ಸ್ವೈಪ್ ಮಾಡಿದ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿದೆ. ರೆಜಿನಾ ಹೇಳಿದಂತೆ ಬೆತ್ತಲೆ ಫೋಟೋ ಶೇರ್ ಮಾಡಿದ್ದರು. ಆದರೆ ಮಗುವಾಗಿದ್ದಾಗ ತೆಗೆದ ಫೋಟೋವನ್ನು ಶೇರ್ ಮಾಡಿದ್ದರು.

  ಹೌದು, ರೆಜಿನಾ ಮಗುವಾಗಿದ್ದ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸ್ನಾನ ಮಾಡುತ್ತಿರುವ ಫೋಟೋ, ತಾಯಿಯ ಮಡಿಲಲ್ಲಿ ಇರುವ ಫೋಟೋ ಸೇರಿದಂತೆ ಅನೇಕ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ರೆಜಿನಾ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬಂದರೂ ಅಭಿಮಾನಿಗಳು ನಿರಾಸೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

  ರೆಜಿನಾ ಟ್ವಿಸ್ಟ್ ಗೆ ಸುಸ್ತಾದನೆಟ್ಟಿಗರು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ನೀವು ಮೋಸ ಮಾಡಿದ್ದಾರಿ ಎನ್ನುವ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

  KGF 2 ಸೆಟ್ ಗೆ ಹೋದ ಕಾರ್ತಿಕ್ ಗೌಡ ಪರಿಸ್ಥಿತಿ ನೋಡಿ | Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರೆಜಿನಾ ಸದ್ಯ ತಮುಳಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ನಾಲ್ಕೈದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನೆಂಜಮ್ ಮರಪ್ಪತಿಲೈ, ಪಾರ್ಟಿ, ಚಕ್ರ ಸೇರಿದಂತೆ ಇನ್ನು ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Actress Regina Cassandra shares new photo and She had also mentioned in the bottom to swipe left for nudes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X