For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಗೆ ಅನಾರೋಗ್ಯ; ತೋಟದ ಮನೆಯಲ್ಲಿ ವಿಶ್ರಾಂತಿ

  By ಫಿಲ್ಮ್ ಡೆಸ್ಕ್
  |

  ಸೂಪರ್ ಸ್ಟಾರ್ ರಜನಿಕಾಂತ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ತೀವ್ರ ಜ್ವರದಿಂದ ಬಳಲುತ್ತಿರುವ ರಜನಿಕಾಂತ್ ಚಿಕಿತ್ಸೆ ಪಡೆದು ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

  Rajinikanth ಅಭಿಮಾನಿಗಳಿಗೆ ಆತಂಕ | Filmibeat Kannada

  ಆದರೆ ಕೆಲವು ಮೂಲಗಳ ಪ್ರಕಾರ ರಜನಿಂಕಾತ್ ತಮ್ಮ ನಿವಾಸದಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ. ರಜನಿಕಾಂತ್ ಅನಾರೋಗ್ಯದ ಸುದ್ದಿ ಕೇಳಿ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ. ಸಿನಿಮಾಗಳ ಜೊತೆಗೆ ರಜನಿಕಾಂತ್ ತಮ್ಮ ಆರೋಗ್ಯದ ಮೇಲೂ ನಿಗಾ ಇಟ್ಟಿದ್ದಾರೆ. ಸೂಪರ್ ಸ್ಟಾರ್ ಗೆ ಅನಾರೋಗ್ಯ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತಿರುತ್ತೆ.

  ಕ್ಯಾನ್ಸರ್‌ಗೆ ತುತ್ತಾಗಿ ಆರ್ಥಿಕ ಸಂಕಷ್ಟದಲ್ಲಿರುವ ನಟನ ಸಹಾಯಕ್ಕೆ ಬಂದ ರಜನಿ

  ಇತ್ತೀಚಿಗಷ್ಟೆ ಅನಾರೋಗ್ಯದ ವದಂತಿ ಬಗ್ಗೆ ರಜನಿಕಾಂತ್ ಸ್ಪಷ್ಟನೆ ನೀಡಿದ್ದರು. ಅನಾರೋಗ್ಯದ ಕಾರಣ ತಮಿಳುನಾಡಿನ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಜನಿಕಾಂತ್ ಬರೆದಿದ್ದಾರೆ ಎನ್ನುವ ಪತ್ರ ಹರಿದಾಡಿತ್ತು. ಆದರೆ ಈ ಪತ್ರ ಬರೆದಿದ್ದು ನಾನಲ್ಲ ಎಂದು ರಜನಿಕಾಂತ್ ಸ್ಪಷ್ಟನೆ ನೀಡಿ ಊಹಾಪೂಹಗಳಿಗೆ ತೆರೆಎಳೆದಿದ್ದಾರೆ.

  ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ಬಳಿಕ ಅಣ್ಣಾತೆ ಸಿನಿಮಾದ ಚಿತ್ರೀಕರಣ ಇನ್ನು ಪ್ರಾರಂಭ ಮಾಡಿಲ್ಲ. ಚಿತ್ರದಲ್ಲಿ ಖುಷ್ಬೂ ಸುಂದರ್, ಮೀನಾ ಮತ್ತು ಕೀರ್ತಿ ಸುರೇಶ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ.

  English summary
  Reports have been dooing rounds that Rajinikanth is unwell due to fever and taking rest in his farmhouse.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X