ನಮ್ಮಿಬ್ಬರದ್ದು 'ವೈ ಬ್ಲಡ್ ಸೇಮ್ ಬ್ಲಡ್' ಎನ್ನುವಂತ ಜರ್ನಿ; ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರ್ತಿಸಿಕೊಂಡಿದ್ದಾರೆ. ಅಕ್ಕಪಕ್ಕದ ಇಂಡಸ್ಟ್ರಿಗಳಲ್ಲಿ ಕೂಡ ಡಿವೈನ್ ಸ್ಟಾರ್ ಕ್ರೇಜ್ ಜೋರಾಗಿದೆ. ಎಲ್ಲಾ ಇಂಡಸ್ಟ್ರಿಗಳಲ್ಲಿ ಸ್ನೇಹಿತರನ್ನು ಸಂಪಾದಿಸಿದ್ದಾರೆ. ತೆಲುಗು ನಟ ಜ್ಯೂ. ಎನ್‌ಟಿಆರ್ ಸೇರಿ ಸ್ಟಾರ್ ನಟರು, ಫಿಲ್ಮ್ ಮೇಕರ್ಸ್ ರಿಷಬ್ ಶೆಟ್ಟಿ ಜೊತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ತಮಿಳು ನಟ ವಿಜಯ್ ಸೇತುಪತಿ ಕೂಡ ಆಪ್ತರಾಗಿಬಿಟ್ಟಿದ್ದಾರೆ.
'ಕಾಂತಾರ' ಸಿನಿಮಾ ಮಾಡಿದ ಮ್ಯಾಜಿಕ್ ಅಂಥದ್ದು. ರಿಷಬ್ ಶೆಟ್ಟಿ ನಮ್ಮೂರಿನ ಕಥೆಯನ್ನು ತಾವು ನೋಡಿದ ಕಥೆಯನ್ನು ತೆರೆಗೆ ತಂದು ಸಕ್ಸಸ್ ಕಂಡಿದ್ದರು. ಈ ಚಿತ್ರ ನೋಡಿ ಪರಭಾಷಾ ಫಿಲ್ಮ್ ಮೇಕರ್ಸ್, ಸ್ಟಾರ್ಸ್ ಮೆಚ್ಚುಗೆ ಸೂಚಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ವೈಯಕ್ತಿಕವಾಗಿ ಕೆಲವರು ರಿಷಬ್ ಶೆಟ್ಟಿ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಸಿನಿಮಾ ಬಗ್ಗೆ ಕೊಂಡಾಡಿದ್ದರು. ಅದರಲ್ಲಿ ಪ್ರತಿಭಾನ್ವಿತ ನಟ ವಿಜಯ್ ಸೇತುಪತಿ ಕೂಡ ಒಬ್ಬರು.

ಇತ್ತೀಚೆಗೆ ಗಲಾಟ ಗ್ಲೋರಿಯಸ್ ಐಕಾನ್ಸ್ ಅವಾರ್ಡ್ ವೇದಿಕೆಯಲ್ಲಿ ರಿಷಬ್ ಹಾಗೂ ವಿಜಯ್ ಸೇತುಪತಿ ಮುಖಾಮುಖಿ ಆಗಿದ್ದರು. ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಸೇತುಪತಿಗೆ ರಿಷಬ್ ಅತ್ಯುತ್ತಮ ನಟ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವಿನ ಪರಿಚಯ, ಸ್ನೇಹದ ಬಗ್ಗೆ ರಿಷಬ್ ನೆನಪಿಸಿಕೊಂಡಿದ್ದಾರೆ. 'ಕಾಂತಾರ' ಸಿನಿಮಾ ನೋಡಿ ಸೇತುಪತಿ ಕರೆ ಮಾಡಿ ಮಾತನಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.
'ಕಾಂತಾರ' ಸಿನಿಮಾ ನೋಡಿ ವಿಜಯ್ ಸರ್ ಫೋನ್ ಮಾಡಿದ್ರು. "ಇಂಗ್ಲೀಷ್‌ನಲ್ಲಿ ಸಿನಿಮಾ ಚೆನ್ನಾಗಿದೆ ಅಂತ ಹೇಳುತ್ತಿದ್ರು.. ನಾನು ತಮಿಳಿನಲ್ಲಿ ಧನ್ಯವಾದ ಎಂದೆ.. ನಾನು ತಮಿಳು ಚೆನ್ನಾಗಿ ಮಾತಾಡ್ತೀನಿ ಎಂದು ಗೊತ್ತಾದ ಮೇಲೆ ತಮಿಳಿನಲ್ಲೇ ನಮ್ಮ ಮಾತುಕತೆ ನಡೆಯಿತು.. ವಿಜಯ್ ಸರ್ ಎಲ್ಲಾ ಸಿನಿಮಾ ನೋಡಿದ್ದೀನಿ, ಎಲ್ಲಾ ಸಂದರ್ಶನ ಕೇಳಿದ್ದೀನಿ.. ವಡಿವೇಲು ಸರ್ ಕಾಮಿಡಿ ತರ "ವೈ ಬ್ಲೆಡ್.. ಸೇಮ್ ಬ್ಲಡ್" ಎನ್ನುವಂತೆ ನಮ್ಮಿಬ್ಬರ ಜರ್ನಿ.. ಹಾಗಾಗಿ ಈ ಅನುಬಂಧ" ಎಂದಿದ್ದಾರೆ.
ವಿಜಯ್ ಸೇತುಪತಿ ಮಾತನಾಡಿ "ಕಾಂತಾರ ಸಿನಿಮಾ ನೋಡಿ ಅವರಿಗೆ ಫೋನ್ ಮಾಡಿದ್ದೆ.. ಬಹಳ ಇಷ್ಟವಾಗಿತ್ತು ಆ ಸಿನಿಮಾ.. ಆ ಜೀವನವನ್ನು ನೋಡಿ ಅನುಭವಿಸಿ ಮಾಡಿದ್ದರಿಂದ ಆ ಚಿತ್ರಕ್ಕೆ ಅಷ್ಟು ಜೀವ ತುಂಬಿದಂತಿತ್ತು. ಬೇರೆ ಯಾರು ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾನು ರಿಷಬ್ ರೀತಿ ಕೂಡ 2004ರಲ್ಲಿ ಸಿನಿ ಕರಿಯರ್ ಆರಂಭಿಸಿದೆ. ನೀನು ನಿರ್ದೇಶನ, ನಟನೆ, ನಿರ್ಮಾಣ ಹೀಗೆ ಎಲ್ಲದರಲ್ಲೂ ಸಿನಿಮಾವನ್ನು ಅರಿತಿದ್ದೀನಿ. ನಿಮ್ ಮೈಯಿಂ ಪ್ರಶಸ್ತಿ ಪಡೆದಿದ್ದು ಖುಷಿಯಾಗ್ತಿದೆ ಎಂದಿದ್ದಾರೆ.
"ನಾನು ನಿಮ್ಮೊಟ್ಟಿಗೆ ಕೆಲಸ ಮಾಡಬೇಕು. ಅಂತಾದೊಂದು ಆಸೆಯಿದೆ ಎಂದು ವಿಜಯ್ ಸೇತುಪತಿ ಕೇಳಿದ್ದಾರೆ. ಕಂಡಿತ ಮಾಡೋಣ ಸರ್ ಎಂದು ರಿಷಬ್ ಪ್ರತಿಕ್ರಿಯಿಸಿದ್ದಾರೆ. ವೇದಿಕೆ ಎನ್ನುವ ಕಾರಣಕ್ಕೆ ಈ ಮಾತು ಹೇಳ್ತಿಲ್ಲ.. ನಿಜಕ್ಕೂ ನಿಮ್ಮೊಟ್ಟಿಗೆ ಕೆಲಸ ಮಾಡಲು ಕಾತುರನಾಗಿದ್ದೀನಿ ಎಂದು ಸೇತುಪತಿ ಪುನರುಚ್ಚರಿಸಿದ್ದಾರೆ.
'ತಲೈವನ್ ತಲೈವಿ' ಚಿತ್ರಕ್ಕಾಗಿ ಗಲಾಟ ಗ್ಲೋರಿಯಸ್ ಐಕಾನ್ಸ್ ಅವಾರ್ಡ್ ಅತ್ಯುತ್ತಮ ನಟ ಪ್ರಶಸ್ತಿ ವಿಜಯ್ ಸೇತುಪತಿಗೆ ಸಿಕ್ಕಿದೆ. ನಿತ್ಯಾ ಮೆನನ್ ಜೊತೆಗೆ ಈ ಚಿತ್ರದಲ್ಲಿ ನಟಿಸಿದ್ದರು. ಕಳೆದ ವರ್ಷ ತೆರೆಕಂಡಿದ್ದ ಸಿನಿಮಾ ಹಿಟ್ ಲಿಸ್ಟ್ ಸೇರಿತ್ತು. ಕಡಿಮೆ ಬಜೆಟ್ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿತ್ತು. ಸದ್ಯ ರಿಷಬ್ ಶೆಟ್ಟಿ 'ಜೈಹನುಮಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ತಮ್ಮದೇ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ ಘೋಷಿಸಿದ್ದಾರೆ.


Click it and Unblock the Notifications











