ಅಳಿಯ ಅತ್ತೆಗೆ, ಮಗಳು ತಂದೆಗೆ ಕಿಸ್ ಮಾಡಿ ವಿವಾದಕ್ಕೀಡಾದ ಬಳಿಕ ಒಟ್ಟಿಗೆ ಸೇರಿಕೊಂಡ ಕುಟುಂಬ; ಫೋಟೊ ಟ್ರೆಂಡಿಂಗ್!
ತಮಿಳಿನ ಜನಪ್ರಿಯ ಹಾಸ್ಯ ನಟ ರೋಬೊ ಶಂಕರ್ ಕಳೆದ ಕೆಲವು ತಿಂಗಳಿನಿಂದ ಸುದ್ದಿಯಲ್ಲಿ ಇದ್ದಾರೆ. ತಮಿಳಿನಲ್ಲಿ ಸೂಪರ್‌ಸ್ಟಾರ್ ಜೊತೆ ನಟಿಸಿರುವ ರೋಬೊ ಶಂಕರ್ ಇತ್ತೀಚೆಗೆ ತಮ್ಮ ಮಗಳು ಇಂದ್ರಜಾ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದರು. ಇಡೀ ತಮಿಳು ಚಿತ್ರರಂಗವೇ ಈ ಮದುವೆಯಲ್ಲಿ ಭಾಗಿಯಾಗಿತ್ತು.
ರೋಬೋ ಶಂಕರ್ ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದರು. ಈ ಸಂಬಂಧ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ. ಅದೇ ಗ್ಯಾಪ್‌ನಲ್ಲಿಯೇ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿ ತಮಿಳು ಚಿತ್ರರಂಗ ಬೆರಗು ಕಣ್ಣಿನಿಂದ ನೋಡುವಂತೆ ಮಾಡಿದ್ದರು. ಮದುವೆ ಏನೋ ಅದ್ಧೂರಿಯಾಗಿ ಮಾಡಿದ್ದರು. ಆದರೆ, ಈ ವೇಳೆ ಮಗಳು ಹಾಗೂ ಅಳಿಯನ ಮುತ್ತಿನ ಪ್ರಕರಣ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು.

ಎರಡು ಪ್ರತ್ಯೇಕ ಸಂದರ್ಭದಲ್ಲಿ ರೋಬೊ ಶಂಕರ್ ಪುತ್ರಿ ಹಾಗೂ ಅಳಿಯನ ಮುತ್ತಿನ ಪ್ರಕರಣಗಳು ನೆಟ್ಟಿಗರ ನಿದ್ದೆಯನ್ನು ಕೆಡಿಸಿದ್ದವು. ರೋಬೊ ಶಂಕರ್ ಮಗಳು ಇಂದ್ರಜಾ ನಿಶ್ವಿತಾರ್ಥದ ವೇಳೆ ತಂದೆಯ ತುಟಿಗಳಿಗೆ ಚುಂಬಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೆಂಡಾಮಂಡಲವಾಗಿದ್ದರು.
ಅದೇ ಮಗಳ ಮದುವೆ ಮುಗಿದ ಬಳಿಕ ಆರತಕ್ಷತೆಯನ್ನು ಆಯೋಜನೆ ಮಾಡಿದ್ದರು. ಈ ವೇಳೆ ಅಳಿಯ ಕಾರ್ತಿಕ್ ಡ್ಯಾನ್ಸ್ ಮಾಡುವ ಜೋಷ್‌ನಲ್ಲಿ ಅತ್ತೆ ಪ್ರಿಯಾಂಕಾ ತುಟಿಗಳಿಗೆ ಚುಂಬಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೆ ನೆಟ್ಟಿಗರು ಕಿಡಿಕಾರಿದ್ದರು. ಈ ಎರಡೂ ಘಟನೆಗಳ ಬಳಿಕ ನಟಿ ಇಂದ್ರಜಾಳನ್ನು ಟ್ರೋಲ್ ಮಾಡುತ್ತಲೇ ಇದ್ದರು. ಈ ಸಂಬಂಧ ನಟಿ ಬೇಸರ ಪಟ್ಟುಕೊಂಡಿದ್ದರು.
ಈ ಎರಡು ಘಟನೆಗಳು ವಿವಾದಕ್ಕೀಡಾದ ಬಳಿಕ ಇಡೀ ಕುಟುಂಬ ಮತ್ತೆ ಒಟ್ಟಿಗೆ ಸೇರಿ ಸಂಭ್ರಮಿಸಿದೆ. ರೋಬೊ ಶಂಕರ್ ಪುತ್ರಿ ಇಂದ್ರಜಾ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಇದು ಇಂದ್ರಜಾ ವಿವಾಹದ ಬಳಿಕ ಆಚರಿಸಿಕೊಳ್ಳುತ್ತಿರುವ ಮೊದಲ ಬರ್ತ್‌ಡೇ ಕೂಡ ಹೌದು. ಈ ಹುಟ್ಟುಹಬ್ಬದ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.

ಅಂದ್ಹಾಗೆ, ರೋಬೊ ಶಂಕರ್ ಮಗಳು ಮುತ್ತಿನ ಬಗ್ಗೆ ಈ ಹಿಂದೆ ಕಾರಣವನ್ನು ಕೊಟ್ಟಿದ್ದಾರೆ. ನೆಟ್ಟಿಗರು ತಂದೆಗೆ ಹೀಗೆಲ್ಲ ಮುತ್ತು ಕೊಡಬೇಕಾ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಇಂದ್ರಜಾ "ಅವರು ನನ್ನ ತಂದೆ, ನಾನು ಹುಟ್ಟಿದಾಗಿನಿಂದ ಅವರೊಂದಿಗೆ ನಾನು ಹೀಗೆ ಚುಂಬಿಸುತ್ತೇನೆ. ಅದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನೆ ಮಾಡಿದ್ದರು.
ಹಾಗೇ "ಮಗಳು ಬೆಳೆದ ಕೂಡಲೇ ನಾನು ಮಗಳಾಗುವುದಿಲ್ಲವೇ?" ಎಂದು ಕಾಮೆಂಟ್ ಮಾಡಿದ್ದವರಿಗೆ ಪ್ರಶ್ನೆ ಮಾಡಿದ್ದರು. "ನಾನು ಮುತ್ತುಕೊಟ್ಟಿದ್ದು ಖಂಡಿತಾ ತಪ್ಪಲ್ಲ. ಆದರೆ, ತಪ್ಪು ನೋಡುವವರ ದೃಷ್ಟಿಯಲ್ಲಿದೆ. ನಿಮ್ಮ ತಾಯಿ ನಿಮ್ಮನ್ನು ತಪ್ಪಾಗಿ ಬೆಳೆಸಿದ್ದಾರೆ. ನನ್ನನ್ನು ಅಪ್ಪ ಸರಿಯಾಗಿಯೇ ಬೆಳೆಸಿದ್ದಾರೆಂದು" ಟೀಕಿಸಿದವರಿಗೆ ಉತ್ತರ ಕೊಟ್ಟಿದ್ದಾರೆ. ಈಗ ವಿವಾದಗಳಿಗೆ ತಲೆಕೆಡಿಸಿಕೊಳ್ಳದೆ, ವಿವಾಹದ ಬಳಿಕ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಂದ್ರಜಾಗೆ ಈಗ 23 ವರ್ಷ.


Click it and Unblock the Notifications











