For Quick Alerts
  ALLOW NOTIFICATIONS  
  For Daily Alerts

  ನಯನತಾರಾ ಬಗ್ಗೆ ಹೀಗೊಂದು ಸುದ್ದಿ: ಅಭಿಮಾನಿಗಳಲ್ಲಿ ಫುಲ್ ಟೆನ್ಶನ್!

  |

  ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಸುಮಾರು 17 ವರ್ಷಗಳಾಗಿವೆ. ಸೌತ್ ಸಿನಿ ಇಂಡಸ್ಟ್ರಿಯಲ್ಲಿ ನಯನತಾರಾಗೆ ಅವರದ್ದೇ ಆದ ಅಭಿಮಾನಿಗಳಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಅವರ ಸಿನಿಮಾಗಳು ಹಿಟ್ ಆಗಿವೆ. ಈಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿರೋದು ಗೊತ್ತೇ ಇದೆ.

  ಬ್ಯೂಟಿಫುಲ್ ನಟಿ ನಯನತಾರಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಜನಮನ ಗೆದ್ದಿದ್ದಾರೆ. ಪ್ರೇಕ್ಷಕರನ್ನು ಒಂದೂವರೆ ದಶಕಗಳಿಗೂ ಹೆಚ್ಚು ರಂಜಿಸಿದ್ದಾರೆ. ಇತ್ತೀಚೆಗಷ್ಟೇ ತಮಿಳು ನಿರ್ದೇಶಕ ವಿಘ್ನೇಶ್ ಶಿವನ್‌ರನ್ನು ಮದುವೆಯಾಗಿರೋ ನಯನತಾರಾ ಹಿಂದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿದ್ದರೂ ಲೇಡಿ ಸೂಪರ್‌ಸ್ಟಾರ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

  ಬಾರ್ಸಿಲೋನಾದ ಬೀದಿಗಳಲ್ಲಿ ಬಾವುಟ ಹಿಡಿದು ನಿಂತ ವಿಕ್ಕಿ- ನಯನತಾರಾಬಾರ್ಸಿಲೋನಾದ ಬೀದಿಗಳಲ್ಲಿ ಬಾವುಟ ಹಿಡಿದು ನಿಂತ ವಿಕ್ಕಿ- ನಯನತಾರಾ

  'ಜವಾನ್' ಸಿನಿಮಾದಿಂದ ಬಾಲಿವುಡ್ ಎಂಟ್ರಿ

  'ಜವಾನ್' ಸಿನಿಮಾದಿಂದ ಬಾಲಿವುಡ್ ಎಂಟ್ರಿ

  ನಯನತಾರಾಗೆ ಈ ಹಿಂದೆನೇ ಬಾಲಿವುಡ್‌ನಿಂದ ಆಫರ್ ಬಂದಿತ್ತು. ಆದರೆ, ಲೇಡಿ ಸೂಪರ್‌ಸ್ಟಾರ್ ಹಿಂದಿ ಸಿನಿಮಾಗಳಲ್ಲಿ ನಟಿಸೋ ಮನಸ್ಸು ಮಾಡಿರಲಿಲ್ಲ. ಆದ್ರೀಗ ಶಾರುಖ್ ಖಾನ್ ಜೊತೆ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆಟ್ಲಿ ನಿರ್ದೇಶಿಸುತ್ತಿರುವ 'ಜವಾನ್' ಸಿನಿಮಾದಲ್ಲಿ ಶಾರುಖ್‌ಗೆ ನಯನತಾರಾ ಜೋಡಿ. ಹೀಗಾಗಿ ಫ್ಯಾನ್ಸ್ ಥ್ರಿಲ್ ಆಗಿರೋದಂತೂ ಸತ್ಯ.

  ಗಂಡನ ಎಡವಟ್ಟಿನಿಂದ ನಯನತಾರಾಗೆ ವಾಂತಿ; ಮ್ಯಾಟರ್ ಬೇರೇನೆ ಇದೆ!ಗಂಡನ ಎಡವಟ್ಟಿನಿಂದ ನಯನತಾರಾಗೆ ವಾಂತಿ; ಮ್ಯಾಟರ್ ಬೇರೇನೆ ಇದೆ!

  ನಯನತಾರಾಗೆ ಹೆಚ್ಚಿದ ಬೇಡಿಕೆ

  ನಯನತಾರಾಗೆ ಹೆಚ್ಚಿದ ಬೇಡಿಕೆ

  ನಯನತಾರಾ ಕೈಯಲ್ಲ ಬಾಲಿವುಡ್ ಸಿನಿಮಾ ಅಷ್ಟೇ ಅಲ್ಲ. ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರೋ 'ಗಾಡ್ ಫಾದರ್' ಸಿನಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ನಯನತಾರಾ ಚಿರಂಜೀವಿ ತಂಗಿಯಾಗಿ ನಟಿಸುತ್ತಿದ್ದಾರೆ. ಅಲ್ಲದೆ. ತಮಿಳು ಸಿನಿಮಾ 'ಗೋಲ್ಡ್' ಸೆಪ್ಟೆಂಬರ್ 8ಕ್ಕೆ ರಿಲೀಸ್ ಆಗುತ್ತಿದೆ. ಇದೆಲ್ಲದರ ಹೊರತಾಗಿ ಕಳೆದ ಕೆಲವು ದಿನಗಳಿಂದ ಸುದ್ದಿಯೊಂದು ಹಲ್‌ಚಲ್ ಎಬ್ಬಿಸುತ್ತಿದೆ.

  ನಯನತಾರಾ ನಿರ್ಧಾರ ನಿಜವೇ?

  ನಯನತಾರಾ ನಿರ್ಧಾರ ನಿಜವೇ?

  ಈ ಎಲ್ಲಾ ಸಿನಿಮಾಗಳನ್ನು ಬಿಟ್ಟು ನಯನತಾರಾ ಇನ್ನೂ ಎರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ ಇದರೊಂದಿಗೆ ಮತ್ತೊಂದು ಸುದ್ದಿ ಕೂಡ ಓಡಾಡುತ್ತಿದೆ. ನಯನತಾರಾ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆಂಬ ಗುಸುಗುಸು ಕೇಳಿಬರುತ್ತಿದೆ. ಮೂಲಗಳ ಪ್ರಕಾರ, ನಯನತಾರಾ ತಮ್ಮ ಸಿನಿ ಕರಿಯರ್‌ಗೆ ಬ್ರೇಕ್ ಹಾಕುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಒಪ್ಪಿಕೊಂಡಿರೋ ಎರಡು ಸಿನಿಮಾಗಳನ್ನು ಮುಗಿಸಿದ ಬಳಿಕ ನಟನೆಗೆ ವಿದಾಯ ಹೇಳುತ್ತಾರೆ ಎನ್ನಲಾಗಿದೆ.

  ನಯನತಾರಾ ಉದ್ಯಮಿ

  ನಯನತಾರಾ ಉದ್ಯಮಿ

  ನಯನತಾರಾ ನಟನೆಗೆ ಗುಡ್‌ ಬೈ ಹೇಳಿದ ಬಳಿಕ ಉದ್ಯಮಿಯಾಗುತ್ತಾರೆಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ಸಿನಿಮಾದಿಂದ ಗಳಿಸಿದ ಹಣವನ್ನು ಬೇರೆ ಕ್ಷೇತ್ರಗಳಲ್ಲಿ ಹೂಡುತ್ತಾರೆ ಎನ್ನಲಾಗಿದೆ. ಅಲ್ಲದೆ ನಯನತಾರಾ ಸಿನಿಮಾಗಳನ್ನೂ ನಿರ್ಮಾಣ ಮಾಡುತ್ತಾರೆ ಎನ್ನಲಾಗಿದೆ. ಆದರೆ ಈ ಸುದ್ದಿ ಬಗ್ಗೆ ನಯನತಾರಾ ಅಧಿಕೃತ ಪ್ರಕಟಣೆ ನೀಡಿಲ್ಲ. ಹೀಗಿದ್ದರೂ ಲೇಡಿ ಸೂಪರ್‌ಸ್ಟಾರ್ ಬಗ್ಗೆ ವದಂತಿಗಳು ಜೋರಾಗಿವೆ.

  ಫ್ಯಾನ್ಸ್ ಟೆನ್ಷನ್

  ಫ್ಯಾನ್ಸ್ ಟೆನ್ಷನ್

  ನಯನತಾರಾ ಆಕ್ಟಿಂಗ್‌ಗೆ ಗುಡ್‌ ಬೈ ಹೇಳುತ್ತಾರೆ ಅನ್ನೋ ವದಂತಿ ಟೆನ್ಷನ್ ಹುಟ್ಟಾಕಿದೆ. ಇಂತಹ ಸುದ್ದಿ ಹಲವು ಬಾರಿ ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡಿತ್ತು. ಈಗ ಮತ್ತೆ ನಯನತಾರಾ ನಟನೆ ಮಾಡೋದಿಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ. ಹೀಗಾಗಿ ಈ ಬಾರಿ ಸುದ್ದಿ ನಿಜವಾದರೇ ಅನ್ನೋ ಗೊಂದಲದಲ್ಲಿದ್ದಾರೆ.

  ನಯನತಾರಾ ಅತಿ ಹೆಚ್ಚು ಸಂಭಾವನೆ

  ನಯನತಾರಾ ಅತಿ ಹೆಚ್ಚು ಸಂಭಾವನೆ

  ದಕ್ಷಿಣ ಭಾರತದಲ್ಲಿ ನಯನತಾರಾ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಇತ್ತೀಚೆಗೆ 'ಕಾತುವಾಲುಕ ರೆಂಡು ಕಾದಲ್' ಸಿನಿಮಾ ರಿಲೀಸ್ ಆಗಿದ್ದರೂ, ಸಿನಿಮಾ ಹೆಚ್ಚು ಮಾಡಿಲ್ಲ. ಮುಂದಿನ ಸಿನಿಮಾಗಳ ಮೇಲೆ ನಯನತಾರಾ ನಟನೆ ಮುಂದುವರೆಸೋ ನಿರ್ಧಾರ ನಿಂತಿದೆ ಅನ್ನೋ ಸುದ್ದಿನೂ ಓಡಾಡುತ್ತಿದೆ.

  English summary
  Rumors Is that Nayanthara Will Quit Acting After Marriage Goes Viral, Know More
  Monday, September 5, 2022, 10:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X