ತಂಗಿ ಎಂಗೇಜ್‌ಮೆಂಟ್‌ನಲ್ಲಿ ಕುಣಿದು ಕುಪ್ಪಳಿಸಿದ ಸಾಯಿ ಪಲ್ಲವಿ, ವಿಡಿಯೋ ವೈರಲ್
ಲೇಡಿ ಸೂಪರ್ ಸ್ಟಾರ್ ಸಾಯಿ ಪಲ್ಲವಿ ಇದ್ದ ಕಡೆ ಸಂಭ್ರಮ ಮನೆ ಮಾಡುತ್ತದೆ. ಸದಾ ಲವಲವಿಕೆಯಿಂದ ಇರುವ ಚೆಲುವೆ ಎಲ್ಲರಲ್ಲೂ ಜೋಶ್ ತುಂಬುತ್ತಾರೆ. ಇನ್ನು ಡ್ಯಾನ್ಸ್ ಮಾಡಲು ಶುರು ಮಾಡಿದರೆ ಮುಗಿದೇ ಹೋಯ್ತು. ಸದ್ಯ ತಂಗಿ ಮದುವೆ ಸಂಭ್ರಮ ಮನೆಯಲ್ಲಿ ತುಂಬಿದೆ.
ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್ ಮದಿವೆ ನಿಶ್ಚಯವಾಗಿದೆ. ಬಹಳ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಕೂಡ ನಡೆದಿದೆ. ನೋಡಲು ಅಕ್ಕ ಸಾಯಿ ಪಲ್ಲವಿ ರೀತಿ ಕಾಣುವ ಪೂಜಾ ತಮಿಳು ಸಿನಿಮಾದಲ್ಲೂ ನಟಿಸಿದ್ದಾರೆ. 2021ರಲ್ಲಿ ಒಂದು ತಮಿಳು ಚಿತ್ರದಲ್ಲಿ ಆಕೆ ನಟಿಸಿದ್ದಳು, ಸದ್ಯ ಪ್ರಿಯಕರನ ಜೊತೆ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ.

ಇತ್ತೀಚೆಗೆ ಸಾಯಿ ಪಲ್ಲವಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿಯಾಗಿದೆ. ಕಾಶ್ಮೀರಿ ಪಂಡಿತರ ಕುರಿತು ಆಕೆ ನೀಡಿದ ಹೇಳಿಕೆ ಕೆಲ ದಿನಗಳ ಹಿಂದೆ ಭಾರೀ ವಿವಾದ ಸೃಷ್ಟಿಸಿತ್ತು. ಈ ವಿವಾದದಿಂದಲೇ ಆಕೆಯ ಸಿನಿಮಾಗಳಿಗೂ ಹಿನ್ನಡೆಯಾಗಿತ್ತು. ಬಳಿಕ ಕೆಲ ದಿನಗಳ ಕಾಲ ಯಾವುದೇ ಸಿನಿಮಾ ಒಪ್ಪಿಕೊಳ್ಳಲು ಚೆಲುವೆ ಮತ್ತೆ ಬಣ್ಣ ಹಚ್ಚಿದ್ದಾರೆ. ಆಕೆಗಿಂತ ಮುನ್ನ ತಂಗಿ ಪೂಜಾ ಮದುವೆಗೆ ಸಜ್ಜಾಗಿದ್ದಾರೆ.
ಬಹಳ ಅದ್ಧೂರಿಯಾಗಿ ಪೂಜಾ ಕಣ್ಣನ್ ಹಾಗೂ ಪ್ರಿಯಕರ ವಿನೀತ್ ಎಂಗೇಜ್‌ಮೆಂಟ್ ನಡೆದಿದೆ. ಆಪ್ತರು, ಸ್ನೇಹಿತರು ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತಿಳಿ ಹಳದಿ ಬಣ್ಣದ ಸೀರೆಯಲ್ಲಿ ಸಾಯಿ ಪಲ್ಲವಿ ಸಮಾರಂಭದಲ್ಲಿ ಓಡಾಡುತ್ತಾ ರಂಗೇರಿಸಿದ್ದಾರೆ.
ತಂಗಿ ಎಂಗೇಜ್‌ಮೆಂಡ್ ಸಂಭ್ರಮದಲ್ಲಿ ಸಾಯಿ ಪಲ್ಲವಿ ಸ್ನೇಹಿರು, ಬಂಧುಗಳ ಜೊತೆ ಆಡಿ, ಕುಣಿದು ಖುಷಿಪಟ್ಟಿದ್ದಾರೆ. ಹಗ್ಗಜಗ್ಗಾಟ ಸೇರಿದಂತೆ ಸಾಕಷ್ಟು ಆಟಗಳಲ್ಲಿ ಎಲ್ಲರೂ ಭಾಗಿ ಆಗಿದ್ದಾರೆ.
ಸಾಯಿ ಪಲ್ಲವಿ ಕುಟುಂಬ ಸದಸ್ಯರು ಎಲ್ಲೂ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಸಾಯಿ ಪಲ್ಲವಿ ತಾಯಿ, ತಂದೆ ಕ್ಯಾಮರಾ ಮುಂದೆ ಹೆಚ್ಚು ಬರುವುದಿಲ್ಲ. ಸಾಯಿ ಪಲ್ಲವಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇನು ಆಕ್ಟೀವ್ ಆಗಿ ಇರುವುದಿಲ್ಲ. ಆದರೆ ಸಹೋದರಿ ಪೂಜಾ ಕಣ್ಣನ್ ಇನ್‌ಸ್ಟಾಗ್ರಾಮ್‌ನಲ್ಲಿ ಫುಲ್ ಆಕ್ಟೀವ್ ಆಗಿರುತ್ತಾರೆ. ಸಾಯಿ ಪಲ್ಲವಿ ಅವರ ಫ್ಯಾಮಿಲಿ ಫೋಟೋಗಳು ಹೊರಬಂದು ನೆಟ್‌ನಲ್ಲಿ ಟ್ರೆಂಡಿಂಗ್ ಆಗುತ್ತಿರುವುದು ಇದೇ ಮೊದಲು ಎನ್ನಬಹುದು. ಅದರಲ್ಲಿ ಕುಟುಂಬ ಸದಸ್ಯರ ಜೊತೆ ಸಾಯಿ ಪಲ್ಲವಿ ಡ್ಯಾನ್ಸ್ ವಿಡಿಯೋ ವೈರಲ್ ಆಗ್ತಿದೆ.
ಸಾಯಿ ಪಲ್ಲವಿ ಮೆಡಿಕಲ್ ಓದಿಕೊಂಡಿದ್ದಾರೆ. ಹಾಗಾಗಿ ಕೆಲ ದಿನಗಳ ಹಿಂದೆ ಆಕೆ ಚಿತ್ರರಂಗ ಬಿಟ್ಟು ವೈದ್ಯವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಬಳಿಕ ಅದಕ್ಕೆಲ್ಲಾ ಫುಲ್ ಸ್ಟಾಪ್ ಇಟ್ಟು ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ತಮಿಳಿನಲ್ಲಿ ಶಿವಕಾರ್ತಿಕೇಯನ್ ಜೊತೆ ಒಂದು ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ತೆಲುಗಿನ 'ಥಂಡೆಲ್' ಎನ್ನುವ ಚಿತ್ರದಲ್ಲಿ ನಾಗಚೈತನ್ಯಾ ಜೊತೆ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.
ಬಾಲ್ಯದಲ್ಲೇ ಒಂದೆರಡು ಸಿನಿಮಾ ಹಾಗೂ ಜಾಹೀರಾತುಗಳಲ್ಲಿಸ ಆಯಿ ಪಲ್ಲವಿ ಕಾಣಿಸಿಕೊಂಡಿದ್ದರು. 'ಡೀ' ಎನ್ನುವ ತೆಲುಗು ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಕೊನೆಗೆ 'ಪ್ರೇಮಂ' ಚಿತ್ರದ ಮಲರ್ ಪಾತ್ರ ಹುಡುಕಿ ಬಂದಿತ್ತು. ಆ ಸಿನಿಮಾ ದೊಡ್ಡದಾಗಿ ಹಿಟ್ ಆಗಿತ್ತು. ಬಳಿಕ ಆಕೆ ಹಿಂತಿರುಗಿ ನೋಡಲೇಯಿಲ್ಲ.


Click it and Unblock the Notifications











