'ರೌಡಿ ಬೇಬಿ' ಹಾಡಿನ ಬಿಲಿಯನ್ ವೀಕ್ಷಣೆ ಸಂಭ್ರಮಕ್ಕೆ ಸಾಯಿ ಪಲ್ಲವಿ ಅಭಿಮಾನಿಗಳ ಆಕ್ರೋಶ

ತಮಿಳು ನಟ ಧನುಷ್ ಮತ್ತು ಸಾಯಿ ಪಲ್ಲವಿ ನಟನೆಯಲ್ಲಿ ಮೂಡಿ ಬಂದಿದ್ದ 'ರೌಡಿ ಬೇಬಿ' ಹಾಡು ಭಾಷೆಯ ಗಡಿ ಮೀರಿ ಹಿಟ್ ಆಗಿತ್ತು. ತಮಿಳುಗರು ಮಾತ್ರವಲ್ಲದೇ ಎಲ್ಲಾ ಭಾಷೆಯ ಚಿತ್ರಪ್ರೇಮಿಗಳು ಈ ಹಾಡಿಗೆ ಫಿದಾ ಆಗಿದ್ದಾರೆ.

Recommended Video

Rajinikanth ಅಭಿಮಾನಿಗಳಿಗೆ ಆತಂಕ | Filmibeat Kannada

'ರೌಡಿ ಬೇಬಿ' ಹಾಡು ಈಗಾಗಲೇ ಹಲವು ದಾಖಲೆಗಳನ್ನು ಬ್ರೇಕ್ ಮಾಡಿದೆ. ಇದೀಗ, ಸೌತ್ ಇಂಡಸ್ಟ್ರಿಯಲ್ಲಿ ಇತಿಹಾಸ ಸೃಷ್ಟಿಸಿರುವ ಮಾರಿ-2 ಚಿತ್ರದ ಈ ಹಾಡು ಒಂದು ಬಿಲಿಯನ್ ವೀಕ್ಷಣೆ ಪಡೆದು ರೆಕಾರ್ಡ್ ಕ್ರಿಯೇಟ್ ಮಾಡಿದೆ.

ಈ ಖುಷಿಯ ವಿಚಾರವನ್ನು ಸಿನಿಮಾತಂಡ ಸಹ ಹಂಚಿಕೊಂಡಿದೆ. ಬಿಲಿಯಲ್ ವೀಕ್ಷಣೆ ಪಡೆದ ಸಂತಸದಲ್ಲಿ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿದೆ. ವಂಡರ್ ಬಾರ್ ಫಿಲ್ಮ್ ನ ಟ್ವಿಟ್ಟರ್ ಖಾತೆಯಲ್ಲಿ ಈ ಪೋಸ್ಟರ್ ಅನ್ನು ಶೇರ್ ಮಾಡಲಾಗಿದೆ. ರೌಡಿ ಬೇಬಿ 1 ಬಿಲಿಯನ್ ಹಿಟ್ಸ್ ಸಂಭ್ರಮ ಎಂದು ಬರೆದುಕೊಂಡಿದೆ.

ಸಾಯಿ ಪಲ್ಲವಿ ಅಭಿಮಾನಿಗಳ ಬೇಸರ

ಸಾಯಿ ಪಲ್ಲವಿ ಅಭಿಮಾನಿಗಳ ಬೇಸರ

ಧನುಷ್ ಅವರ ರೌಡಿ ಬೇಬಿ ಸಂಭ್ರಮದ ಫೋಟೋ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ಸಾಯಿ ಪಲ್ಲವಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೌಡಿ ಬೇಬಿ ಯಶಸ್ಸಿನಲ್ಲಿ ಸಾಲು ಪಲ್ಲವಿ ಪಾತ್ರವೂ ಪ್ರಮುಖವಾಗಿದೆ. ಸಾಯಿ ಪಲ್ಲವಿ ಡ್ಯಾನ್ಸ್ ಎಲ್ಲರಿಗೂ ಫಿದಾ ಆಗಿದ್ದಾರೆ. ಆದರೆ ಪೋಸ್ಟರ್ ನಲ್ಲಿ ಧನುಷ್ ಫೋಟೋ ಮಾತ್ರವಿದೆ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ.

ಸಾಯಿ ಪಲ್ಲವಿ ಇಲ್ಲದಿದ್ದರೆ ಈ ಹಾಡು ಯಶಸ್ಸು ಆಗುತ್ತಿರಲಿಲ್ಲ

ಸಾಯಿ ಪಲ್ಲವಿ ಇಲ್ಲದಿದ್ದರೆ ಈ ಹಾಡು ಯಶಸ್ಸು ಆಗುತ್ತಿರಲಿಲ್ಲ

ಚಿತ್ರದಲ್ಲಿ ಸಾಯಿ ಪಲ್ಲವಿ ರೌಡಿ ಬೇಬಿಯಾಗಿ ಕಾಣಿಸಿಕೊಂಡಿದ್ದಾರೆ, ಆದರೆ ಪೋಸ್ಟರ್ ನಲ್ಲಿ ಮಿಸ್ ಆಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸಾಯಿ ಪಲ್ಲವಿ ಎಲ್ಲಿ? ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸಾಯಿ ಪಲ್ಲವಿ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಸಾಯಿ ಪಲ್ಲವಿ ಇಲ್ಲದಿದ್ದರೆ ಈ ಹಾಡು ದೊಡ್ಡ ಯಶಸ್ಸು ಪಡೆಯುತ್ತಿರಲಿಲ್ಲ ಎನ್ನುತ್ತಿದ್ದಾರೆ. ಸಾಯಿ ಪಲ್ಲವಿ ಅವರ ಪೋಸ್ಟರ್ ರಿಲೀಸ್ ಮಾಡುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಹಾಡಿನ ಬಗ್ಗೆ ಸಾಯಿ ಪಲ್ಲವಿ- ಧನುಷ್ ಹೇಳಿದ್ದೇನು?

ಹಾಡಿನ ಬಗ್ಗೆ ಸಾಯಿ ಪಲ್ಲವಿ- ಧನುಷ್ ಹೇಳಿದ್ದೇನು?

'ಕೊಲವರಿ ಡಿ' ಹಾಡಿನ ಒಂಬತ್ತನೇ ವರ್ಷ ತುಂಬಿದ ದಿನವೇ ರೌಡಿ ಬೇಬಿ ಒಂದು ಬಿಲಿಯನ್ ವೀಕ್ಷಣೆ ಕಂಡಿದೆ. ನಮ್ಮ ಇಡೀ ಚಿತ್ರತಂಡ ಹೃದಯ ಪೂರ್ವಕವಾಗಿ ಧನ್ಯವಾದ ತಿಳಿಸುತ್ತದೆ. ದಕ್ಷಿಣ ಭಾರತದಲ್ಲಿ ಒಂದು ಬಿಲಿಯನ್ ವೀಕ್ಷಣೆ ಕಂಡ ಮೊದಲ ಹಾಡು ಇದು ಎನ್ನುವುದಕ್ಕೆ ಹೆಮ್ಮೆ ಎನಿಸುತ್ತದೆ'' ಎಂದು ಧನುಷ್ ಟ್ವೀಟ್ ಮಾಡಿದ್ದಾರೆ. ಇನ್ನೂ ಸಾಯಿ ಪಲ್ಲವಿ ಸಹ ಟ್ವೀಟ್ ಮಾಡಿ, 'ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ' ಎಂದಿದ್ದಾರೆ.

ಪ್ರಭುದೇವ ಕೊರಿಯೋಗ್ರಾಫ್

ಪ್ರಭುದೇವ ಕೊರಿಯೋಗ್ರಾಫ್

ಅಂದ್ಹಾಗೆ, ಈ ಹಾಡಿಗೆ ಸಾಹಿತ್ಯ ರಚಿಸಿರುವುದು ಸ್ವತಃ ಧನುಷ್. ಜೊತೆಗೆ ಹಾಡಿರುವುದು ಸಹ ಅವರೇ. ಧನುಷ್ ಜೊತೆ ದೀಕ್ಷಿತಾ (ಧೀ) ದನಿಗೂಡಿಸಿದ್ದಾರೆ. ಈ ಹಾಡನ್ನು ಪ್ರಭುದೇವ ಕೊರಿಯೋಗ್ರಾಫ್ ಮಾಡಿದ್ದಾರೆ. ಮಾರಿ 2 ಚಿತ್ರವನ್ನು ಬಾಲಾಜಿ ಮೋಹನ್ ನಿರ್ದೇಶಿಸಿದ್ದ, ಖುದ್ದು ಧನುಷ್ ನಿರ್ಮಿಸಿದ್ದರು.

More from Filmibeat

English summary
Actress Sai Pallavi fans upset as Maari 2 makers Missing her from 1 billion views for Rowdy Baby success poster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X