ಧನುಶ್ ಜೊತೆ ನಟಿಸಲು ಒಲ್ಲೆ ಎಂದಿದ್ದರೇ ನಟಿ ಸಾಯಿ ಪಲ್ಲವಿ!?

ಖ್ಯಾತ ನಟ ಧನುಶ್ ಜೊತೆ ನಟಿ ಸಾಯಿ ಪಲ್ಲವಿ 'ಮಾರಿ 2' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅದಾದ ನಂತರವೂ ಮತ್ತೊಂದು ಸಿನಿಮಾದಲ್ಲಿ ಈ ಇಬ್ಬರೂ ನಟರು ಒಟ್ಟಿಗೆ ನಟಿಸಬೇಕಿತ್ತು, ಆದರೆ ಈ ಅವಕಾಶವನ್ನು ಸಾಯಿ ಪಲ್ಲವಿ ನಿರಾಕರಿಸಿದ್ದರಂತೆ.

ಹೌದು, ಮಾರಿ 2 ಅಂತಹಾ ಪಕ್ಕಾ ಮಾಸ್ ಸಿನಿಮಾದಲ್ಲಿ ನಟಿಸಿದ ಬಳಿಕ ಮತ್ತೊಂದು 'ಕಲ್ಟ್ ಕ್ಲಾಸಿಕ್' ಮಾದರಿಯ ಸಿನಿಮಾ 'ಅಸುರನ್' ನಲ್ಲಿ ಧನುಶ್ ಜೊತೆಗೆ ನಟಿಸುವ ಅವಕಾಶ ಸಾಯಿ ಪಲ್ಲವಿಗೆ ಇತ್ತಂತೆ ಆದರೆ ಸಾಯಿ ಪಲ್ಲವಿ ಅವಕಾಶವನ್ನು ನಿರಾಕರಿಸಿದ್ದರಂತೆ.

ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶಿಸಿದ್ದ 'ಅಸುರನ್' ಸಿನಿಮಾ ಬಹುದೊಡ್ಡ ಹಿಟ್ ಎನಿಸಿಕೊಂಡಿತು, ಅಷ್ಟೇ ಅಲ್ಲದೆ ವಿಮರ್ಶಕರಿಂದಲೂ ಹೊಗಳಿಕೆಗೆ ಪಾತ್ರವಾಯಿತು. ಇದೀಗ ತೆಲುಗು ಸೇರಿದಂತೆ ವಿವಿಧ ಭಾಷೆಗಳಿಗೆ ಸಿನಿಮಾ ರೀಮೇಕ್ ಆಗುತ್ತಿದೆ. ಈ ಮಹತ್ವದ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಸಾಯಿ ಪಲ್ಲವಿ ನಿರಾಕರಿಸಿದ್ದರಂತೆ.

ಫ್ಲಾಶ್ ಬ್ಯಾಕ್ ಕತೆಗೆ ನಾಯಕಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದರು

ಫ್ಲಾಶ್ ಬ್ಯಾಕ್ ಕತೆಗೆ ನಾಯಕಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದರು

ಅಸುರನ್ ಸಿನಿಮಾದಲ್ಲಿನ ಫ್ಲಾಶ್‌ ಬ್ಯಾಕ್ ಕತೆಯ ನಾಯಕಿ ಪಾತ್ರಕ್ಕೆ ನಟಿ ಸಾಯಿ ಪಲ್ಲವಿಯನ್ನು ಕೇಳಲಾಗಿತ್ತು. ಆ ಪಾತ್ರ ಬಹಳ ಸಣ್ಣ ಪಾತ್ರವಾಗಿತ್ತು. ಹಾಗಾಗಿ ನಟಿ ಸಾಯಿ ಪಲ್ಲವಿ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ ಎನ್ನಲಾಗಿದೆ.

ಸಾಯಿ ಪಲ್ಲವಿ ಬಿಟ್ಟ ಪಾತ್ರದಲ್ಲಿ ಅಮ್ಮು ಅಭಿರಾಮಿ

ಸಾಯಿ ಪಲ್ಲವಿ ಬಿಟ್ಟ ಪಾತ್ರದಲ್ಲಿ ಅಮ್ಮು ಅಭಿರಾಮಿ

ಸಾಯಿ ಪಲ್ಲವಿ ಬಿಟ್ಟ ಪಾತ್ರವನ್ನು ನಟಿ ಅಮ್ಮು ಅಭಿರಾಮಿ ನಟಿಸಿದರು. ಸಣ್ಣ ಪಾತ್ರವಾದರೂ ಈ ಪಾತ್ರ ಅಮ್ಮು ಅಭಿರಾಮಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಅಮ್ಮು ಅಭಿರಾಮಿ ಸಣ್ಣ ಪಾತ್ರಕ್ಕೆ ಚೆನ್ನಾಗಿಯೇ ಜೀವ ತುಂಬಿ ವಿಮರ್ಶಕರಿಂದ ಮೆಚ್ಚುಗೆ ಗಳಿಸಿಕೊಂಡರು.

ಸಿನಿಮಾ ನಾಯಕಿ ಮಂಜು ವಾರಿಯರ್

ಸಿನಿಮಾ ನಾಯಕಿ ಮಂಜು ವಾರಿಯರ್

ಅಸುರನ್ ಸಿನಿಮಾದಲ್ಲಿ ಮುಖ್ಯ ನಾಯಕಿಯಾಗಿ ಮಲಯಾಳಂ ನ ಮಂಜು ವಾರಿಯರ್ ನಟಿಸಿದ್ದಾರೆ. ಧನುಶ್, ಮಂಜು ವಾರಿಯರ್, ಧನುಶ್ ಪುತ್ರ ಕೆನ್ ಕರುಣಾಸ್ ಅವರುಗಳ ನಟನೆ ಬಹುವಾಗಿ ಗಮನ ಸೆಳೆದಿತ್ತು.

Recommended Video

Madhavi । ಅಣ್ಣಾವ್ರ ಜೊತೆ ನಟಿಸಿದ್ದ ಈ ನಟಿ ಇಂದು ಸಾವಿರಾರು ಕೋಟಿಯ ಒಡತಿ | Filmibeat Kannada
ಹಲವು ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಬ್ಯುಸಿ

ಹಲವು ಸಿನಿಮಾಗಳಲ್ಲಿ ಸಾಯಿ ಪಲ್ಲವಿ ಬ್ಯುಸಿ

ಇನ್ನು ನಟಿ ಸಾಯಿ ಪಲ್ಲವಿ ಲವ್ ಸ್ಟೋರಿ ಎಂಬ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ನಂತರ ವಿರಾಟ ಪರ್ವಂ ಹಾಗೂ ಪಾವ ಕಡೈಗಲ್ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಪಾವ ಕಡೈಗಲ್ ಸಿನಿಮಾವನ್ನು ತಮಿಳಿನ ಖ್ಯಾತ ನಾಲ್ಕು ನಿರ್ದೇಶಕರು ಒಟ್ಟಿಗೆ ನಿರ್ದೇಶಿಸುತ್ತಿದ್ದಾರೆ.

More from Filmibeat

English summary
Actress Sai Pallavi rejected a important role in Dhanush's super hit movie Asuran which directed by Vetrimaran.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X