ನಾನು ಮಾಂಸದ ತುಂಡಲ್ಲ, ನನಗೆ ಅವರ ಅವಶ್ಯಕತೆ ಇಲ್ಲ - ಸಾಯಿ ಪಲ್ಲವಿ...!
ಕಲೆ-ಕಾಸು ಬೆರೆತ ಉದ್ಯಮ ಸಿನಿಮಾ. ಕಾಸಿದ್ದರೆ ಇಲ್ಲಿ ಕೈಲಾಸವನ್ನೇ ಸೃಷ್ಟಿಸಬಹುದು. ಸದಾ ಕಾಲ ಸುದ್ದಿಯಲ್ಲಿಯೂ ಇರಬಹುದು. ಲೈಮ್ ಲೈಟಿನಲ್ಲಿ ಕೂಡ ಮಿಂಚಬಹುದು. ಬಾಲಿವುಡ್‌ನಲ್ಲಿ ಬಹುತೇಕರು ಈ ಫಾರ್ಮುಲಾವನ್ನೇ ಅನುಸರಿಸುತ್ತಾರೆ.
ಅಣಬೆಯಂತೆ ಹುಟ್ಟಿಕೊಂಡಿರುವ ಏಜೆನ್ಸಿಗಳ ಜೊತೆ ಬಾಲಿವುಡ್‌ನ ಅನೇಕ ಸ್ಟಾರ್‌ಗಳು ಕೈ ಜೋಡಿಸುತ್ತಾರೆ. ತಾವು ಹೋದಲ್ಲಿ ಬಂದಲ್ಲಿ ತಮ್ಮ ಹಿಂದೆ ಕ್ಯಾಮರಾ ಇರಬೇಕೆಂದು ಹಣ ನೀಡಿ ಪಾಪರಾಜಿಗಳನ್ನು ಕರೆಸಿಕೊಳ್ಳುತ್ತಾರೆ. ಈ ಮೂಲಕ ವರ್ಷದ 365 ದಿನ ಕೂಡ ಈ ತಾರೆಯರು ಚರ್ಚೆಯಲ್ಲಿರುತ್ತಾರೆ. ಪ್ರೇಕ್ಷಕರ ಕಣ್ಣಿಗೆ ಈ ಮೂಲಕ ಬೀಳುತ್ತಿರುತ್ತಾರೆ. ಆದರೆ, ಎಲ್ಲರೂ ಈ ಬದುಕು ಬದುಕಲು ಇಷ್ಟ ಪಡುವುದಿಲ್ಲ. ವೈಯಕ್ತಿಕ ಬದುಕು ಮೂರಾಬಟ್ಟೆ ಮಾಡಿಕೊಳ್ಳಲು ಬಯಸುವುದಿಲ್ಲ. ಅದರಲ್ಲಿಯೂ ದಕ್ಷಿಣದಿಂದ ಉತ್ತರಕ್ಕೆ ವಲಸೆ ಹೋದವರು ಈ ಸಂಸ್ಕ್ರತಿಯಿಂದ ದೂರು ಉಳಿಯುವ ಪ್ರಯತ್ನವನ್ನು ಮಾಡುತ್ತಾರೆ. ಉದಾಹರಣೆಗೆ ಸಾಯಿ ಪಲ್ಲವಿ.

ಹೌದು, ಮಾತು, ಹಾವ ಭಾವಗಳಿಂದ್ಲೇ ಹೃದಯಕ್ಕೆ ಹತ್ತಿರವಾಗಬಲ್ಲ ಸೌಂದರ್ಯ ಸಾಯಿ ಪಲ್ಲವಿ ಅವರದ್ದು. ಆ ಮುಗ್ದ ನಗು ಪಡ್ಡೆ ಹೈಕ್ಳ ನಿದ್ದೆ ಕೆಡ್ಸೋ 'ನಾಕೌಟ್' ಇದ್ದಂಗೆ. ಹೆಚ್ಚು ಕಡಿಮೆ ಕಳೆದ ಎರಡು ದಶಕಗಳಿಂದ ಸಿನಿ ಜಗತ್ತಿನಲ್ಲಿ ತನ್ನದೇ ಆದ ಕ್ರೇಝ್ ಹುಟ್ಟು ಹಾಕಿರುವ 'ಮಾಯಾಂಗನೆ' ಇವರು. ತಮ್ಮ ಮೋಹಕ ಅಭಿನಯದಿಂದ ಸಿನಿಪ್ರಿಯರ ಹೃದಯಕ್ಕೆ ಲಗ್ಗೆ ಇಟ್ಟಿರುವ ಸಾಯಿ ಪಲ್ಲವಿ ಹಿಂದೊಮ್ಮೆ ಎರಡು ಕೋಟಿ ರೂಪಾಯಿ ಸಂಭಾವನೆಯ ಸೌಂದರ್ಯವರ್ಧಕ ಜಾಹೀರಾತನ್ನು ಸಾರಸಗಟಾಗಿ ತಿರಸ್ಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಇಂಥಾ ಸಾಯಿ ಪಲ್ಲವಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಾಲಿವುಡ್‌ನವರ ತಿರುಪೆ ಶೋಕಿಯ ಬಗ್ಗೆ ಮಾತನಾಡಿದ್ದಾರೆ. ನಾನು ಮಾಂಸದ ತುಂಡಲ್ಲ, ನನಗೆ ಪ್ರಚಾರದ ಅವಶ್ಯಕತೆ ಕೂಡ ಇಲ್ಲ ಎಂದು ಹೇಳಿದ್ದಾರೆ.
ಹೌದು, ಬಿಹೈಂಡ್‌ವುಡ್‌ಗೆ ನೀಡಿರುವ ಸಂದರ್ಶನದಲ್ಲಿ ಬಾಲಿವುಡ್ ನಲ್ಲಿರುವ ಪಾಪರಾಜಿ ಸಂಸ್ಕ್ರತಿಯ ಬಗ್ಗೆ ಸಾಯಿ ಪಲ್ಲವಿ ಮಾತನಾಡಿದ್ದಾರೆ. ಬಾಲಿವುಡ್‌ನಲ್ಲಿ ನನಗೆ ಒಬ್ಬರು ನೀವು ಪಿ.ಆರ್.ಏಜೆನ್ಸಿಯನ್ನು ನೇಮಿಸಿಕೊಳ್ಳಲು ಬಯಸುತ್ತೀರಾ ಎಂದು ಕೇಳಿದರು ಎಂದಿರುವ ಸಾಯಿ ಪಲ್ಲವಿ ನನಗೆ ಅವರ ಮಾತು ಆರಂಭದಲ್ಲಿ ಅರ್ಥವಾಗಲಿಲ್ಲ ಈ ಕಾರಣಕ್ಕೆ ಏಜೆನ್ಸಿಯಿಂದ ಆಗುವ ಉಪಯೋಗವೇನು ಎಂದು ಕೇಳಿದೆ, ಅದಕ್ಕೆ ಅವರು ಇದರಿಂದ ನೀವು ಸದಾ ಸುದ್ದಿಯಲ್ಲಿರುತ್ತೀರಾ, ನಿಮ್ಮ ಚಿತ್ರ ಬಿಡುಗಡೆಯಾಗಲಿ ಆಗದಿರಲಿ ಸದಾ ಕಾಲ ನಿಮಗೆ ಪ್ರಚಾರ ಸಿಗುತ್ತೆ ಎಂದು ಹೇಳಿದರು ಎಂದಿದ್ದಾರೆ. ಇದಕ್ಕೆ ನಾನು ಆದರೆ ಇದರಿಂದ ನನಗೆ ಪಾತ್ರ ಸಿಗುವುದಿಲ್ಲವಲ್ಲ ಎಂದು ಕೇಳಿದೆ ಎಂದಿರುವ ಸಾಯಿ ಪಲ್ಲವಿ, ನನಗೆ ಪ್ರಚಾರ ಬೇಕು, ಸಿನಿಮಾ ಮಾಡುತ್ತೇನೆ, ಆ ಸಿನಿಮಾ ಬಿಡುಗಡೆಯ ಸಮಯದಲ್ಲಿ ಸಂದರ್ಶನ ಕೊಡುತ್ತೇನೆ, ಹೀಗಿರುವಾಗ ಅದಕ್ಕೆ ಏಜೆನ್ಸಿ ಯಾಕೆ ಬೇಕು ಎಂದು ಪ್ರಶ್ನೆ ಮಾಡಿದ್ದೆ ಎಂದಿದ್ದಾರೆ. ಜನ ಎಷ್ಟು ಅಂತ ನಮ್ಮ ಬಗ್ಗೆ ಮಾತನಾಡುತ್ತಾರೆ ನನಗೆ ಈ ಅರ್ಥಹೀನ ಕೆಲಸಗಳಲ್ಲಿ ಯಾವ ಆಸಕ್ತಿ ಕೂಡ ಇಲ್ಲ ಎಂದು ಹೇಳಿದ್ದೇ ಎಂದಿದ್ದಾರೆ.
ಇದೇ ಸಂದರ್ಶನದಲ್ಲಿ ತಾವ್ಯಾಕೇ ಅರೆ ಬರೆ ಬಟ್ಟೆಯನ್ನು ಹಾಕುವುದಿಲ್ಲ ಎನ್ನುವ ಪ್ರಶ್ನೆಗೆ ಕೂಡ ಉತ್ತರವನ್ನು ಕೂಡ ಸಾಯಿ ಪಲ್ಲವಿ ಹೇಳಿದ್ದಾರೆ. ತುಂಬಾ ವರ್ಷಗಳ ಹಿಂದೆ ನಾನು ಜಾರ್ಜಿಯಾದಲ್ಲಿ ನೃತ್ಯ ಪ್ರದರ್ಶನವೊಂದರಲ್ಲಿ ಭಾಗವಹಿಸಿದ್ದೆ. ಆಗ ಅದಕ್ಕೆ ಬೇಕಾದ ಬಟ್ಟೆಗಳನ್ನು ಹಾಕಿಕೊಂಡಿದ್ದೆ ಆದರೆ ಪ್ರೇಮಂ ಬಿಡುಗಡೆಯಾದಾಗ ಅನೇಕರು ನನ್ನ ಹಳೆಯ ಆ ವಿಡಿಯೋ ಮತ್ತು ಫೋಟೊ ಹೆಕ್ಕಿ ತೆಗೆದರು. ಮನಬಂದಂತೆ ಮಾತನಾಡಿದರು. ಇದರಿಂದ ನನಗೆ ತೀವೃ ಬೇಸರವಾಯ್ತು, ದುಖವಾಯ್ತು. ಹೀಗಾಗಿ ನನ್ನನ್ನೂ ಮಾಂಸದ ತುಂಡಿನಂತೆ ನೋಡಲು ಬಯಸುವವರ ಆಸೆಯನ್ನು ಪೂರೈಸಲು ನಾನು ಬಯಸುವುದಿಲ್ಲ ಎಂದು ಹೇಳಿದ್ದಾರೆ.


Click it and Unblock the Notifications











