ಮುಖದ ಮೇಲಿರುವ ಮೊಡವೆಗಳಿಂದ ಅಭದ್ರತೆ ಕಾಡುತ್ತಿತ್ತು: ನಟಿ ಸಾಯಿ ಪಲ್ಲವಿ
ನಟಿ ಸಾಯಿ ಪಲ್ಲವಿ ದಕ್ಷಿಣ ಭಾರತೀಯ ಸಿನಿಮಾರಂಗದ ಬಹು ಬೇಡಿಕೆಯ ನಟಿ. ಮಲಯಾಳಂನ ಪ್ರೇಮಂ ಸಿನಿಮಾ ಮೂಲಕ ರಾತ್ರೋ ರಾತ್ರಿ ಸ್ಟಾರ್ ನಟಿಯಾಗಿ ಹೊರಹೊಮ್ಮಿರುವ ಸಾಯಿ ಪಲ್ಲವಿ ಅವರನ್ನು ಅಭಿಮಾನಿಗಳು ನ್ಯಾಚುರಲ್ ಸ್ಟಾರ್ ಅಂತಾನೇ ಕರೆಯುತ್ತಾರೆ. ಅಲ್ಲದೆ ಸಾಯಿ ಪಲ್ಲವಿ ಮುಖಕ್ಕೆ ಮೊಡವೆಯೇ ಭೂಷಣ ಎಂದು ಅಭಿಮಾನಿಗಳು ಹಾಡಿಹೊಗಳುತ್ತಾರೆ.
Recommended Video
ಆದರೆ ಈ ಮೊಡವೆಗಳಿಂದ ಸಾಯಿ ಪಲ್ಲವಿ ಒಂದು ಕಾಲದಲ್ಲಿ ತುಂಬಾ ಹಿಂಸೆ ಅನುಭವಿಸಿದ್ದರಂತೆ. ಚಿತ್ರರಂಗದ ಪ್ರಾರಂಭದಲ್ಲಿ ಸಾಯಿ ಪಲ್ಲವಿಗೆ ತುಂಬಾ ಅಭದ್ರತೆ ಕಾಡುತ್ತಿತ್ತಂತೆ. ಈ ಬಗ್ಗೆ ನಟಿ ಸಾಯಿ ಪಲ್ಲವಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಪ್ರೇಮಂ ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟದ ಸಕ್ಸಸ್ ಕಂಡಮೇಲೆ ಸಾಯಿ ಪಲ್ಲವಿ ಆತ್ಮವಿಶ್ವಾಸ ಹೆಚ್ಚಾಯಿತ್ತಂತೆ.
ಈ ಬಗ್ಗೆ ಮಾತನಾಡಿರುವ ಸಾಯಿ ಪಲ್ಲವಿ. ಪ್ರೇಮಂ ಸಿನಿಮಾ ಬಿಡುಗೆಯಾದ ನಂತರ ಆತ್ಮವಿಶ್ವಾಸವೆ ನಿಜವಾದ ಸೌಂದರ್ಯ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ತಮ್ಮ ಚರ್ಮದಿಂದ ಒಬ್ಬ ವ್ಯಕ್ತಿಯು ಆತ್ಮವಿಶ್ವಾಸದಿಂದಲೂ ಪ್ರೇರೆಪಿಸಿದರೂ ಸಹ ಅದನ್ನೆ ಒಂದು ದೊಡ್ಡ ಸಾಧನೆ ಎಂದು ಪರಿಗಣಿಸುತ್ತಾರೆ. ನಾನೇನದು ಜನ ಒಪ್ಪಿಕೊಳ್ಳು ಸಾಧ್ಯವಾದರೆ. ಅದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಬಹುತೇಕ ಹೆಣ್ಣುಮಕ್ಕಳಿಗೆ ಮೊಡವೆಗಳದ್ದೆ ಚಿಂತೆಯಾಗಿರುತ್ತೆ. ಆದರೆ ಸಾಯು ಪಲ್ಲವಿ ಮುಖದ ಮೇಲಿರುವ ಮುತ್ತಿನಂತ ಮೊಡವೆಗಳಿಂದನೆ ಅಂದವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಅದೆಷ್ಟೊ ಯುವಕರ ಹೃದಯ ಕದ್ದಿದ್ದಾರೆ. ಸೆಲೆಬ್ರಿಟಿಗಳು ಮೇಕಮ್ ಇಲ್ಲದೆ ಮನೆಯಿಂದ ಹೊರಗಡೆಯೆ ಬರಲ್ಲ. ಹಾಗಿರುವಾಗ ಸಾಯಿ ಪಲ್ಲವಿ ಮೇಕಪ್ ಇಲ್ಲದೆ ನ್ಯಾಚುರಲ್ ಆಗಿಯೆ ಇದ್ದು ದೊಡ್ಡ ನಟಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಸಾಯಿ ಪಲ್ಲವಿ ಸದ್ಯ ವಿರಾಟ ಪರ್ವಂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ನಾಗಚೈತನ್ಯ ಅಭಿನಯದ ಲವ್ ಸ್ಟೋರಿ ಸಿನಿಮಾದಲ್ಲಿಯೂ ನಿರತರಾಗಿದ್ದಾರೆ. ಈ ಎರಡು ಸಿನಿಮಾಗಳು ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದ ಸಿನಿಮಾಗಳಾಗಿವೆ.


Click it and Unblock the Notifications











