For Quick Alerts
  ALLOW NOTIFICATIONS  
  For Daily Alerts

  ಆ ನಟನೊಂದಿಗೆ ನಟಿಸಬೇಕೆಂಬ ಆಸೆ ಇತ್ತು ಎಂದ ಸಾಯಿ ಪಲ್ಲವಿ: ಯಾರು ಆ ನಟ?

  |

  ನಟಿ ಸಾಯಿ ಪಲ್ಲವಿ ಹಲವು ಕಾರಣಗಳಿಗೆ ತನ್ನ ಸಮಕಾಲೀನ ನಟಿಯರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾರೆ. ಸಾಯಿ ಪಲ್ಲವಿ, ಜಾಹೀರಾತುಗಳಲ್ಲಿ ನಟಿಸುವುದಿಲ್ಲ, ಕಮರ್ಷಿಯಲ್ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ, ಟಾಕ್ ಶೋ ಗಳಿಗೆ ಬರುವುದಿಲ್ಲ, ಗ್ಲಾಮರಸ್ ಪಾತ್ರಗಳಲ್ಲಿ ನಟಿಸುವುದಿಲ್ಲ ಹೀಗೆ ಅನೇಕ ನಿಯಮಗಳನ್ನು ಅವರು ಪಾಲಿಸುತ್ತಾರೆ.

  ಮಾಧ್ಯಮಗಳ ಕೈಗೂ ಸಹ ಬಹಳ ಅಪರೂಪವಾಗಿ ಸಿಕ್ಕುತ್ತಾರೆ ನಟಿ ಸಾಯಿ ಪಲ್ಲವಿ. ಮಾಧ್ಯಮಗಳಿಗೆ ಸಂದರ್ಶನ ನೀಡಿದರೂ ಸಹ ಮಾತನಾಡುವುದು ಕಡಿಮೆಯೇ. ಇತ್ತೀಚೆಗೆ, ಬಾಲಿವುಡ್‌ ಸುದ್ದಿಗಳನ್ನು ಹೆಚ್ಚಾಗಿ ವರದಿ ಮಾಡುವ ಪತ್ರಿಕೆಯೊಂದು ಸಾಯಿ ಪಲ್ಲವಿಯನ್ನು ಸಂದರ್ಶನ ಮಾಡಿದೆ, ಈ ಸಂದರ್ಶನದಲ್ಲಿ ಕೆಲವು ವಿಷಯ ಮಾತನಾಡಿದ್ದಾರೆ ಸಾಯಿ ಪಲ್ಲವಿ.

  'ಶ್ಯಾಮ್ ಸಿಂಗ್ ರಾಯ್'ಗಾಗಿ ಒಂದಾದ ಸಾಯಿ ಪಲ್ಲವಿ ಮತ್ತು ನಾನಿ'ಶ್ಯಾಮ್ ಸಿಂಗ್ ರಾಯ್'ಗಾಗಿ ಒಂದಾದ ಸಾಯಿ ಪಲ್ಲವಿ ಮತ್ತು ನಾನಿ

  ಸಂದರ್ಶನದಲ್ಲಿ, ತೆಲುಗಿನ ಖ್ಯಾತ ನಟ ಮಹೇಶ್ ಬಾಬು, ಕೊರೊನಾ ಕಲಿಸಿದ ಪಾಠಗಳು, ಮುಂಬರುವ ಸಿನಿಮಾಗಳು ಇನ್ನೂ ಅನೇಕ ವಿಷಯ ಮಾತನಾಡಿದ್ದಾರೆ. ತಾವು ಜೊತೆಯಾಗಿ ನಟಿಸಬೇಕು ಎಂದು ಆಸೆ ಪಟ್ಟಿದ್ದ ನಟರೊಬ್ಬರ ಬಗ್ಗೆಯೂ ಹೇಳಿದ್ದಾರೆ ಸಾಯಿ ಪಲ್ಲವಿ.

  ಪ್ರಕಾಶ್ ರೈ ನೋಡಿ ಭಯ ಪಟ್ಟಿದ್ದರಂತೆ ನಟಿ ಸಾಯಿ ಪಲ್ಲವಿಪ್ರಕಾಶ್ ರೈ ನೋಡಿ ಭಯ ಪಟ್ಟಿದ್ದರಂತೆ ನಟಿ ಸಾಯಿ ಪಲ್ಲವಿ

  ಆ ನಟನೊಂದಿಗೆ ನಟಿಸುವ ಆಸೆಯಿತ್ತು: ಸಾಯಿ ಪಲ್ಲವಿ

  ಆ ನಟನೊಂದಿಗೆ ನಟಿಸುವ ಆಸೆಯಿತ್ತು: ಸಾಯಿ ಪಲ್ಲವಿ

  ಕೆಲ ತಿಂಗಳ ಹಿಂದಷ್ಟೆ ಕಾಲವಾದ ನಟ ಇರ್ಫಾನ್ ಖಾನ್ ಜೊತೆಗೆ ನಟಿಸಬೇಕು ಎಂದು ಬಹಳ ಆಸೆಯಿತ್ತಂತೆ ನಟಿ ಸಾಯಿ ಪಲ್ಲವಿಗೆ. ಆದರೆ ಆ ಆಸೆ ಈಡೇರಲಿಲ್ಲ ಎಂಬ ಬೇಸರವಿದೆ. 'ಇರ್ಫಾನ್ ಖಾನ್ ನಟನೆಯೆಂದರೆ ನನಗೆ ಬಹಳ ಇಷ್ಟ, ಅವರ ಸಿನಿಮಾಗಳು ಬಹಳ ಇಷ್ಟವಾಗುತ್ತವೆ ನನಗೆ' ಎಂದಿದ್ದಾರೆ ಸಾಯಿ ಪಲ್ಲವಿ.

  ನಾಗಚೈತನ್ಯ ಜೊತೆ ಸಾಯಿ ಪಲ್ಲವಿ ಮದುವೆ ಫೋಟೋ ವೈರಲ್ನಾಗಚೈತನ್ಯ ಜೊತೆ ಸಾಯಿ ಪಲ್ಲವಿ ಮದುವೆ ಫೋಟೋ ವೈರಲ್

  ಸಖತ್ ಹ್ಯಾಂಡ್ಸಮ್ ನಟ ಮಹೇಶ್ ಬಾಬು: ಸಾಯಿ ಪಲ್ಲವಿ

  ಸಖತ್ ಹ್ಯಾಂಡ್ಸಮ್ ನಟ ಮಹೇಶ್ ಬಾಬು: ಸಾಯಿ ಪಲ್ಲವಿ

  ಮಹೇಶ್ ಬಾಬು ಬಗ್ಗೆಯೂ ಮಾತನಾಡಿರುವ ಸಾಯಿ ಪಲ್ಲವಿ, 'ಮಹೇಶ್ ಬಾಬು ಬಹಳ ಹ್ಯಾಂಡ್ಸಮ್ ನಟ, ಅವರ ಚಿತ್ರಗಳನ್ನು ನೋಡುವಾಗ ಜೂಮ್ ಮಾಡಿ ನೋಡುತ್ತೇನೆ. ಆತ ನಿಜವಾಗಿಯೂ ಹ್ಯಾಂಡ್ಸಮ್, ಆತನ ಚರ್ಮದ ಕಾಂತಿ ಅದ್ಭುತ, ಒಂದೂ ಕಲೆ ಸಹ ಅವರ ಮುಖದಲ್ಲಿಲ್ಲ' ಎಂದಿದ್ದಾರೆ ಸಾಯಿ ಪಲ್ಲವಿ.

  ನಾನು ಇನ್ನಷ್ಟು ಒಳ್ಳೆಯ ವ್ಯಕ್ತಿಯಾಗಬೇಕು: ಸಾಯಿ ಪಲ್ಲವಿ

  ನಾನು ಇನ್ನಷ್ಟು ಒಳ್ಳೆಯ ವ್ಯಕ್ತಿಯಾಗಬೇಕು: ಸಾಯಿ ಪಲ್ಲವಿ

  ಕೊರೊನಾ ಕಲಿಸಿದ ಪಾಠದ ಬಗ್ಗೆ ಮಾತನಾಡಿರುವ ಸಾಯಿ ಪಲ್ಲವಿ, 'ನಾನು ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ. ನಾನು ಅಂದುಕೊಂಡಷ್ಟು ನಾನು ಒಳ್ಳೆಯ ವ್ಯಕ್ತಿ ಅಲ್ಲ. ಇನ್ನಷ್ಟು ಒಳ್ಳೆಯ ವ್ಯಕ್ತಿ ಆಗಬೇಕಿದೆ. ನನ್ನ ವ್ಯಕ್ತಿತ್ವದಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾನು ಮಾಡಿಕೊಳ್ಳಬೇಕಿದೆ' ಎಂದಿದ್ದಾರೆ ಸಾಯಿ ಪಲ್ಲವಿ.

  ಕರ್ನಾಟಕದಿಂದ ಹೊರಗೆ ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಗ್ರೂಪ್ | Darshan Bike Ride | Filmibeat Kannada
  ಎರಡು ಸಿನಿಮಾ ಬಿಡುಗಡೆಗೆ ರೆಡಿ

  ಎರಡು ಸಿನಿಮಾ ಬಿಡುಗಡೆಗೆ ರೆಡಿ

  ನಟಿ ಸಾಯಿ ಪಲ್ಲವಿ ಈಗಷ್ಟೆ 'ಲವ್ ಸ್ಟೋರಿ' ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾದಲ್ಲಿ ನಾಗಚೈತನ್ಯ ನಾಯಕ. ರಾಣಾ ದಗ್ಗುಬಾಟಿ ನಟನೆಯ 'ವಿರಾಟ ಪರ್ವಂ' ಸಿನಿಮಾದಲ್ಲಿ ನಕ್ಸಲೈಟ್ ಪಾತ್ರದಲ್ಲಿ ನಟಿಸಿದ್ದಾರೆ ಸಾಯಿ ಪಲ್ಲವಿ. ತಮಿಳಿನ 'ಪಾವ ಕದೈಗಳ್' ಸಿನಿಮಾ ಡಿಸೆಂಬರ್ 18 ರಂದು ಅಮೆಜಾನ್‌ ನಲ್ಲಿ ಬಿಡುಗಡೆ ಆಗಲಿದೆ.

  English summary
  Actress Sai Pallavi said she wanted to act with actor Irrfan Khan. She said i admired his acting, i love his movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X