ರಜಿನಿಕಾಂತ್ 'ಜೈಲರ್' ಚಿತ್ರಕ್ಕೆ ಕಾನೂನು ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ ಸನ್ ಪಿಕ್ಚರ್ಸ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಆದರೆ ಇಂತಹ ಹೊತ್ತಲ್ಲಿ ಚಿತ್ರಕ್ಕೆ ಕಾನೂನು ತೊಡಕು ಎದುರಾಗಿದೆ. ತಲೈವಾ ಹೊಸ ಸಿನಿಮಾ ಅಷ್ಟೇನು ಹೈಪ್ ಕ್ರಿಯೇಟ್ ಮಾಡಿಲ್ಲ. ಈ ಬಾರಿ ರಜನಿ ಜೊತೆ ಮಲಯಾಳಂ ನಟ ಮೋಹನ್ ಲಾಲ್, ಕನ್ನಡ ನಟ ಶಿವರಾಜ್‌ಕುಮಾರ್ ನಟಿಸಿರೋದು ಕೊಂಚಮಟ್ಟಿಗೆ ನಿರೀಕ್ಷೆ ಮೂಡಿಸಿದೆ.

ಒಂದ್ಕಾಲದಲ್ಲಿ ರಜನಿಕಾಂತ್ ಸಿನಿಮಾ ಅಂದ್ರೆ ಭಾರೀ ಕ್ರೇಜ್ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸೂಪರ್ ಸ್ಟಾರ್‌ನ ಹ್ಯಾಂಡಲ್ ಮಾಡುವ ನಿರ್ದೇಶಕರು ಸಿಗುತ್ತಿಲ್ಲ. ಒಳ್ಳೆ ಕಥೆ ಸಿಗದೇ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಿವೆ. ಸದ್ಯ 'ಜೈಲರ್' ಸಿನಿಮಾ ರಿಲೀಸ್‌ಗೆ ಸಿದ್ಧವಾಗ್ತಿದೆ. ನೆಲ್ಸನ್ ದಿಲೀಪ್‌ ಕುಮಾರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. ಚಿತ್ರಕ್ಕೆ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಿದ್ದು ಒಂದೊಂದೇ ಹಾಡುಗಳು ರಿಲೀಸ್ ಆಗ್ತಿದೆ.

Sakkir Madathil Demands To Sun pictures for Rajinikanths Jailer Title Change

ಸದ್ಯ ಚಿತ್ರದ 'ಕಾವಾಲಯ್ಯ' ಸಾಂಗ್ ಸೂಪರ್ ಹಿಟ್ ಆಗಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ಬಿಂದಾಸ್‌ ಸಾಂಗ್‌ನಲ್ಲಿ ರಜನಿಕಾಂತ್ ಜೊತೆ ತಮನ್ನಾ ಬಾಟಿಯಾ ಕುಣಿದು ರಂಗೇರಿಸಿದ್ದಾರೆ. 'ಜೈಲರ್' ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಹೊಸ ಸಮಸ್ಯೆ ಎದುರಾಗಿದೆ. ಮಲಯಾಳಂ ಸಿನಿಮಾ ನಿರ್ದೇಶಕ ಸಕ್ಕಿರ್ ಮಡತ್ತಿಲ್ 'ಜೈಲರ್' ಟೈಟಲ್ ನನ್ನದು ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಸಕ್ಕಿರ್ ಮಡತ್ತಿಲ್ ಹೇಳುವ ಪ್ರಕಾರ 2021ರ ಆಗಸ್ಟ್‌ನಲ್ಲಿ ಕೇರಳ ಫಿಲ್ಮ್‌ ಚೇಂಬರ್‌ನಲ್ಲಿ 'ಜೈಲರ್' ಎನ್ನುವ ಟೈಟಲ್ ರಿಜಿಸ್ಟರ್ ಮಾಡಿಸಿದ್ದರು. ಅದೇ ವರ್ಷ ಸಿನಿಮಾ ಚಿತ್ರೀಕರಣ ಆರಂಭಿಸಿದ್ದರು. ಆದರೆ ಆರ್ಥಿಕ ಸಮಸ್ಯೆಯಿಂದ ಚಿತ್ರೀಕರಣ ತಡವಾಗುತ್ತಾ ಬರ್ತಿದೆ. ರಜನಿಕಾಂತ್ ನಟನೆಯ ಸಿನಿಮಾ ಕಥೆಗೂ ಈ ಸಿನಿಮಾ ಕಥೆಗೂ ಸಂಬಂಧವಿಲ್ಲ. ಆದರೆ ಒಂದೇ ಟೈಟಲ್ ಆಗಿರುವುದರಿಂದ ತಮ್ಮ ಸಿನಿಮಾಗೆ ಹಿನ್ನಡೆ ಆಗುತ್ತದೆ ಎಂದು ಸಕ್ಕಿರ್ ಆತಂಕ ವ್ಯಕ್ತಪಡಿಸಿದ್ದಾರೆ.

Sakkir Madathil Demands To Sun pictures for Rajinikanths Jailer Title Change

ಬೇಕಿದ್ದರೆ ಇತರೆ ಭಾಷೆಗಳಲ್ಲಿ ರಜನಿಕಾಂತ್ ಚಿತ್ರವನ್ನು 'ಜೈಲರ್' ಟೈಟಲ್‌ನಲ್ಲೇ ರಿಲೀಸ್ ಮಾಡಿ, ಆದರೆ ಮಲಯಾಳಂನಲ್ಲಿ ಟೈಟಲ್ ಬದಲಿಸಿ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಮಾರುಕಟ್ಟೆ ದೃಷ್ಟಿಯಿಂದ ತಮ್ಮ ಚಿತ್ರಕ್ಕೆ ಯಾವುದೇ ಸಮಸ್ಯೆ ಎದುರಾಗಬಾರದು ಎಂದು ಸನ್ ಪಿಕ್ಚರ್ಸ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದೆ. ಆಗಸ್ಟ್ 2ರಂದು 'ಜೈಲರ್' ಟೈಟಲ್ ಪ್ರಕರಣ ಸಂಬಂಧ ಮದ್ರಾಸ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

7 ವರ್ಷಗಳ ಹಿಂದೆ ರಜನಿಕಾಂತ್ ನಟನೆಯ 'ಕಬಾಲಿ' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಕೂಡ ಇಂತದ್ದೇ ಸಮಸ್ಯೆ ಎದುರಾಗಿತ್ತು. ನಿರ್ಮಾಪಕರ ಶಿವ ಕುಮಾರ್ ಎಂಬುವವರು 'ಕಬಾಲಿ' ಟೈಟಲ್ ನಾವು ರಿಜಿಸ್ಟರ್ ಮಾಡಿಸಿದ್ದೀವಿ, ನಮ್ಮ ಸಿನಿಮಾ ಚಿತ್ರೀಕರಣ 90ರಷ್ಟು ಸಂಪೂರ್ಣ ಆಗಿದೆ ಎಂದು ವಾದಿಸಿದ್ದರು. ಆದರೆ 'ಕಬಾಲಿ' ಸಿನಿಮಾ ನಿರ್ಮಾಪಕ ಕಲೈಪುಲಿ ಎಸ್ ತನು ಈ ಟೈಟಲ್ ನಮ್ಮದು. ನಾನು ಫಿಲ್ಮ್ ಚೇಂಬರ್‌ನಲ್ಲರಿ ರಿಜಿಸ್ಟರ್ ಮಾಡಿಸಿದ್ದೇನೆ. ಟೈಟಲ್ ಯಾರು ತೆಗೆದುಕೊಂಡಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಂಡೇ ರಿಜಿಸ್ಟರ್ ಮಾಡಿಸಿದ್ದೀನಿ ಎಂದಿದ್ದರು.

More from Filmibeat

English summary
Sakkir Madathil Demands To Sun pictures for Rajinikanth's Jailer Title Change. This issue wil have court hearing on 2nd August. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X