ಕಾಲೇಜ್, ಪಬ್ ಎಲ್ಲಾ ಕಡೆ ಮಹಿಳೆಯರ ಜೊತೆ 'ಸಲಾರ್' ನಟನ ವಿಕೃತ ಚೇಷ್ಟೆ; ಗಾಯಕಿ ಪೋಸ್ಟ್
ತಮಿಳು ಚಿತ್ರ ಬರಹಗಾರ ವೈರಮುತ್ತು ವಿರುದ್ಧ ತೆಲುಗು ಗಾಯಕಿ ಚಿನ್ಮಯಿ ಶ್ರೀಪಾದ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ವಿರುದ್ಧ ಚಿನ್ಮಯಿ ದನಿ ಎತ್ತುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪದೇ ಪದೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಸದ್ಯ ನಟ ಜಾನ್ ವಿಜಯ್ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಚಿನ್ಮಯಿ ಆರೋಪಿಸಿದ್ದಾರೆ. ಇತ್ತೀಚೆಗೆ ಸಂದರ್ಶನಕ್ಕಾಗಿ ಹೋಗಿದ್ದ ಪತ್ರಕರ್ತೆಯ ಜತೆ ಜಾನ್ ವಿಜಯ್ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗುತ್ತಿದೆ. ಆತನ ವಿಚಿತ್ರ ವರ್ತನೆಯ ಬಗ್ಗೆ ಇತರ ಮಹಿಳೆಯರು ಸಹ ತನ್ನೊಂದಿಗೆ ಮಾತನಾಡಿದ್ದಾರೆ ಎಂದು ಗಾಯಕಿ ಚಿನ್ಮಯಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಚಿನ್ಮಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜಾನ್ ವಿಜಯ್ ಕೆಲಸದ ಸ್ಥಳಗಳು, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎನ್ನುವುದರ ಬಗ್ಗೆ ಇದರಲ್ಲಿ ಬರೆಯಲಾಗಿದೆ. ಜಾನ್ ವಿಜಯ್ ಹಾಗೂ ವೈರಮುತ್ತು ಕೂಡ ಡಿಎಂಕೆ ಸದಸ್ಯರೇ. ಎಲ್ಲಾ ಒಂದೇ ವರ್ಗಕ್ಕೆ ಸೇರಿದವರು. ಚಿನ್ಮಯಿ ಪೋಸ್ಟ್‌ಗೆ ಕೆಲವು ಮಹಿಳೆಯರು ಪ್ರತಿಕ್ರಿಯಿಸಿದ್ದಾರೆ. ಪಬ್, ಕ್ಲಬ್ ಗಳಲ್ಲಿ ಕೆಟ್ಟದಾಗಿ ನಡೆದುಕೊಳ್ಳುತ್ತಾನೆ. ತಾನೊಬ್ಬ ಸೆಲೆಬ್ರಿಟಿ ಎಂದು ಆಡುತ್ತಾನೆ. ಎಲ್ಲರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ. ಒಂಟಿ ಮಹಿಳೆಯನ್ನು ಕಂಡರೆ ಹುಚ್ಚನಂತೆ ವರ್ತಿಸುತ್ತಾನೆ ಎನ್ನುವಂತೆ ಪೋಸ್ಟ್‌ಗಳಲ್ಲಿ ನೋಡಬಹುದು.
ಇನ್ನು ಜಾನ್ ವಿಜಯ್ ಚೇಷ್ಟೆಗಳ ಮತ್ತೊಬ್ಬ ಹುಡುಗಿ ಪೋಸ್ಟ್ ಮಾಡಿದ್ದಾಳೆ. ಒಮ್ಮೆ ಅವರು ಓದುತ್ತಿದ್ದ ಕಾಲೇಜಿನಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಬಂದಿತ್ತು. ಹಲವು ದಿನಗಳಿಂದ ಚಿತ್ರೀಕರಣ ನಡೆಸಿದರು. ಜಾನ್ ವಿಜಯ್ ಕೂಡ ಇದ್ದರು. ಆದರೆ ಅವರ ವರ್ತನೆಯಿಂದ ಶೂಟಿಂಗ್ ಸಮಯದಲ್ಲಿ ಅತ್ತ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ನಟ ಜಾನ್ ವಿಜಯ್ ಮೇಲೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿವೆ.
ತಮಿಳುನಾಡಿನ ತೂತುಕುಡಿ ಮೂಲದ ನಟ ಜಾನ್ ವಿಜಯ್ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಮಾತ್ರವಲ್ಲದೇ ಕನ್ನಡ ಸಿನಿಮಾಗಳಲ್ಲಿ ಸಹ ಬಣ್ಣ ಹಚ್ಚಿದ್ದಾರೆ. ಕನ್ನಡದ 'ಪೃಥ್ವಿ' ಹಾಗೂ 'ಗಜಕೇಸರಿ' ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಪ್ರಭಾಸ್ ನಟನೆಯ 'ಸಲಾರ್' ಚಿತ್ರದಲ್ಲಿ ರಂಗಾ ಆಗಿ ನಟಿಸಿದ್ದರು.
ವಿಷ್ಯುವಲ್ ಕಮ್ಯನಿಕೇಷನ್ ವಿಭಾಗದಲ್ಲಿ ಎಂಎಸ್ಸಿ ಮುಗಿಸಿದ ಜಾನ್ ವಿಜಯ್ ಮೊದಲಿಗೆ ಎಫ್‌ಎಂನಲ್ಲಿ ಕೆಲಸ ಮಾಡಿದ್ದರು. ಬಳಿಕ ಜಾಹೀರಾತು ಏಜೆನ್ಸಿಯಲ್ಲಿ ಕೂಡ ದುಡಿದಿದ್ದರು. 2006ರಲ್ಲಿ ಬಂದಿದ್ದ 'ತಲೈಮಗನ್' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಖಳನಟ, ಪೋಷಕನಟನಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ವಿಚಿತ್ರ ಮ್ಯಾನರಿಸಂನಿಂದ ಗಮನ ಸೆಳೆಯುತ್ತಾರೆ.


Click it and Unblock the Notifications











