For Quick Alerts
  ALLOW NOTIFICATIONS  
  For Daily Alerts

  ಸಮಂತಾ ಅಕ್ಕಿನೇನಿ-ನಯನತಾರಾ ಸಿನಿಮಾದ ಚಿತ್ರೀಕರಣ ಆರಂಭ

  |

  ಸಮಂತಾ ಅಕ್ಕಿನೇನಿ ಮತ್ತು ನಯನತಾರಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ 'ಕಾತುವಾಕುಲ ರೆಂಡು ಕಡಲ್' ಸಿನಿಮಾ ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ. ನಯನತಾರಾ ಪ್ರಿಯಕರ ವಿಘ್ನೇಶ್ ಶಿವನ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.

  ಕಾತುವಾಕುಲ ರೆಂಡು ಕಡಲ್ ಚಿತ್ರದ ಪೂಜೆ ಇಂದು ನೆರವೇರಿದ್ದು, ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ನಟ ವಿಜಯ್ ಸೇತುಪತಿ ಮಾತ್ರ ಭಾಗಿಯಾಗಿದ್ದರು, ನಯನತಾರ ಮತ್ತು ಸಮಂತಾ ಪಾಲ್ಗೊಂಡಿಲ್ಲ.

  ಸಮಂತಾ ಬಿಕಿನಿ ಫೋಟೋ: ಮಾಲ್ಡೀವ್ಸ್‌ನಲ್ಲಿ ಸ್ಯಾಮ್ ಸಖತ್ ಹಾಟ್ಸಮಂತಾ ಬಿಕಿನಿ ಫೋಟೋ: ಮಾಲ್ಡೀವ್ಸ್‌ನಲ್ಲಿ ಸ್ಯಾಮ್ ಸಖತ್ ಹಾಟ್

  ಕಳೆದ ಎರಡು ವರ್ಷದಿಂದ ಈ ಪ್ರಾಜೆಕ್ಟ್ ಮೇಲೆ ವಿಘ್ನೇಶ್ ಶಿವನ್ ಕೆಲಸ ಮಾಡಿದ್ದು, ಫೆಬ್ರವರಿ ತಿಂಗಳಲ್ಲಿ ಅಧಿಕೃತವಾಗಿ ಪ್ರಾಜೆಕ್ಟ್ ಘೋಷಣೆ ಮಾಡಿದ್ದರು. ನಂತರ ಲಾಕ್‌ಡೌನ್ ಆದ ಕಾರಣ ತಾತ್ಕಲಿಕವಾಗಿ ಸಿನಿಮಾ ನಿಂತಿತ್ತು.

  ಸದ್ಯ ಪರಿಸ್ಥಿತಿ ಚೇತರಿಕೆ ಕಂಡಿದ್ದು ಪೂಜೆ ಮಾಡುವ ಮೂಲಕ ಸಿನಿಮಾ ಆರಂಭವಾಗಿದೆ. ಇಂದಿನಿಂದ ಶೂಟಿಂಗ್ ಶುರುವಾಗಿದ್ದು, ವಿಜಯ್ ಸೇತುಪತಿಯ ಕೆಲವು ದೃಶ್ಯಗಳನ್ನು ಸೆರೆಹಿಡಿಯಲಾಯಿತು.

  ನಯನತಾರ ಹುಟ್ಟುಹಬ್ಬಕ್ಕೆ 'ಪವರ್‌ ಫುಲ್' ಶುಭಾಶಯ ತಿಳಿಸಿದ ಸಮಂತಾನಯನತಾರ ಹುಟ್ಟುಹಬ್ಬಕ್ಕೆ 'ಪವರ್‌ ಫುಲ್' ಶುಭಾಶಯ ತಿಳಿಸಿದ ಸಮಂತಾ

  ಮಲಯಾಳಂ ಸಿನಿಮಾ ನಿಜಾಲ್ ಚಿತ್ರೀಕರಣ ಮುಗಿಸಿ ನಯನಾತಾರ ಮತ್ತು ಡಿಸೆಂಬರ್ ಅಂತ್ಯದಲ್ಲಿ ಸಮಂತಾ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಇನ್ನು ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದು, ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

  English summary
  Telugu actress Samantha akkineni, nayanthara and Vijay sethupathi starrer Kaathuvaakula Rendu Kaadhal movie Shoot Starts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X