"ಕನ್ನಡದಲ್ಲಿ ನನ್ನ ಸಿನ್ಮಾ ರೀಮೆಕ್ ಚೆನ್ನಾಗಿತ್ತು, ಯಶ್ ಸರ್ ಚೆನ್ನಾಗಿ ಮಾಡಿದ್ರು, ಆದರೆ ತೆಲುಗಿನಲ್ಲಿ.."; ಶಶಿಕುಮಾರ್

ಇತ್ತೀಚಿನ ವರ್ಷಗಳಲ್ಲಿ ರೀಮೆಕ್ ಟ್ರೆಂಡ್ ಕಮ್ಮಿ ಆಗಿದೆ. ಒಂದ್ಕಾಲದಲ್ಲಿ ಸ್ಟಾರ್ ನಟರು ಬೇರೆ ಭಾಷೆಯ ಹಿಟ್ ಸಿನಿಮಾಗಳನ್ನು ರೀಮೆಕ್ ಮಾಡಲು ಮುಗಿಬೀಳುತ್ತಿದ್ದರು. ಒಂದು ಭಾಷೆಯಲ್ಲಿ ಗೆದ್ದ ಚಿತ್ರ ಮಾಡುವುದು ಒಂದರ್ಥದಲ್ಲಿ ಸೇಫ್ ಎನ್ನುವ ಲೆಕ್ಕಾಚಾರ ಇರುತ್ತಿತ್ತು. ರೀಮೆಕ್ ಸಿನಿಮಾಗಳೇ ಕೆಲ ನಟರಿಗೆ ದೊಡ್ಡ ಬ್ರೇಕ್ ಕೊಟ್ಟಿರುವ ಉದಾಹರಣೆಗಳಿವೆ.

ಕೆಲವೊಮ್ಮೆ ಒರಿಜಿನಲ್ ಚಿತ್ರವನ್ನು ಯಥಾವತ್ ರೀಮೆಕ್ ಮಾಡುತ್ತಾರೆ. ಮತ್ತೆ ಕೆಲವೊಮ್ಮೆ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ. ಇದು ಕೆಲವೊಮ್ಮೆ ಪ್ಲಸ್ ಆದರೆ ಮತ್ತೆ ಕೆಲವೊಮ್ಮೆ ಮೈನಸ್ ಆಗಿಬಿಡುತ್ತದೆ. ರೀಮೆಕ್ ಸಿನಿಮಾ ಗೆದ್ದೇ ಗೆಲ್ಲುತ್ತದೇ ಎಂದು ಹೇಳುವುದು ಕಷ್ಟ. ತಮಿಳು, ತೆಲುಗು ಚಿತ್ರವನ್ನು ಯಥಾವತ್ ಕನ್ನಡಕ್ಕೆ ತಂದರೆ ನೇಟಿವಿಟಿ ಮ್ಯಾಚ್ ಮಾಡುವುದು ಸವಾಲಿನ ಕೆಲವೇ ಸರಿ.

Sasikumar opens up on Sundarapandian kannada remake yash starrer rajahuli

ಹೆಚ್ಚು ಬದಲಾವಣೆ ಮಾಡದೇ ಕೆಲ ಸಿನಿಮಾಗಳನ್ನು ಸೇಮ್ ಟು ಸೇಮ್ ಮಾಡುವುದು ಉತ್ತಮ. ಹೀಗೆ ಮಾಡಿ ಗೆದ್ದ ಸಾಕಷ್ಟು ಉದಾಹರಣೆಗಳಿವೆ. ಬರೀ ಕನ್ನಡ ಮಾತ್ರವಲ್ಲ ಪರಭಾಷೆಯಲ್ಲಿ ಕೂಡ ರೀಮೆಕ್ ಚಿತ್ರಗಳು ಗೆದ್ದಿರುವ ಸೋತಿರುವ ಉದಾಹರಣೆಗಳಿವೆ. ಕನ್ನಡದ ಹಿಟ್ ಸಿನಿಮಾ ಪರಭಾಷೆಯಲ್ಲಿ ಅಲ್ಲಿನ ನೇಟಿವಿಟಿಗೆ ಒಗ್ಗದೇ ನೆಲಕಚ್ಚಿರುವುದು ಇದೆ. ತಮಿಳಿನ 'ಸುಂದರ ಪಾಂಡಿಯನ್' ಚಿತ್ರವನ್ನು ಕನ್ನಡದಲ್ಲಿ 'ರಾಜಹುಲಿ' ಆಗಿ ರೀಮೆಕ್ ಮಾಡಲಾಗಿತ್ತು.

ತಮಿಳಿನಲ್ಲಿ ಶಶಿಕುಮಾರ್ ಹೀರೊ ಆಗಿ ನಟಿಸಿದ್ದರು. ಕನ್ನಡದಲ್ಲಿ ಅದೇ ಪಾತ್ರವನ್ನು ರಾಕಿಂಗ್ ಸ್ಟಾರ್ ಯಶ್ ಮಾಡಿ ಗೆದ್ದಿದ್ದರು. ಕೆ. ಮಂಜು ನಿರ್ಮಾಣದ 'ರಾಜಹುಲಿ' ಚಿತ್ರಕ್ಕೆ ಗುರುದೇಶ್ ಪಾಂಡೆ ಆಕ್ಷನ್ ಕಟ್ ಹೇಳಿದ್ದರು. ಇನ್ನು ಚಿತ್ರವನ್ನು ತೆಲುಗಿನಲ್ಲಿ 'ಸ್ಪೀಡುನ್ನೋಡು' ಹೆಸರಿನಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ರೀಮೆಕ್ ಮಾಡಿ ಸೋತಿದ್ದರು. ತೆಲುಗಿಗೆ ತಕ್ಕಂತೆ ಒಂದಷ್ಟು ಬದಲಾವಣೆ ಮಾಡಿಕೊಳ್ಳಲಾಗಿತ್ತು. ತಮನ್ನಾ ಹೆಜ್ಜೆ ಹಾಕಿದ್ದ ಐಟಂ ಸಾಂಗ್ ಕೂಡ ಇತ್ತು.

Sasikumar opens up on Sundarapandian kannada remake yash starrer rajahuli

ಸದ್ಯ ಸಂದರ್ಶನವೊಂದರಲ್ಲಿ ತಮಿಳು ನಟ, ನಿರ್ದೇಶಕ ಶಶಿಕುಮಾರ್ ಮಾತನಾಡಿದ್ದಾರೆ. 'ಸುಂದರ ಪಾಂಡಿಯನ್' ಕನ್ನಡ ರೀಮೆಕ್ 'ರಾಜಹುಲಿ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು 'ಸ್ಪೀಡುನ್ನೋಡು' ಚಿತ್ರದ ಪೋಸ್ಟರ್ ನೋಡಿಯೇ ನಕ್ಕಿದ್ದಾರೆ. ನಾನು ಕನ್ನಡದಲ್ಲಿ 'ರಾಜಹುಲಿ' ಸಿನಿಮಾ ನೋಡಿದ್ದೀನಿ. ಬಹಳ ಇಷ್ಟವಾಯಿತು. ಯಶ್‌ ಅವರೊಟ್ಟಿಗೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದೇನೆ ಎಂದಿದ್ದಾರೆ.

"ಕನ್ನಡದಲ್ಲಿ 'ರಾಜಾಹುಲಿ' ಸಿನ್ಮಾ ನೋಡ್ದೆ. ಓಪನಿಂಗ್ ಎಲ್ಲಾ ಸಖತ್ತಾಗಿ ತೆಗೆದಿದ್ದಾರೆ. ನಾವು ತಮಿಳಿನಲ್ಲಿ ಏನು ಮಾಡಿದ್ದೇವೋ, ಅದನ್ನೇ ಯಶ್ ಸರ್ ಅಷ್ಟೆ ಚೆನ್ನಾಗಿ ಮಾಡಿದ್ದರು. ಆ ಚಿತ್ರದ ಹಾಡು, ಲೊಕೇಶನ್ ಎಲ್ಲವೂ ಸೇಮ್, ಹೆಚ್ಚು ಬದಲಾವಣೆ ಮಾಡದೇ ಅದೇ ರೀತಿ ಕಟ್ಟಿಕೊಟ್ಟಿದ್ದರು. ಕೆಜಿಎಫ್ ಅದ್ಭುತ ಸಿನಿಮಾ. ನಾನು ಸಿನಿಮಾ ನೋಡಿ ಯಶ್ ಅವರೊಟ್ಟಿಗೆ ಮಾತನಾಡಿದೆ. ಆಗಲೂ 'ರಾಜಾಹುಲಿ' ಚಿತ್ರದ ಬಗ್ಗೆ ಚರ್ಚೆ ನಡೀತು, ನಾನು ಆ ಚಿತ್ರದ ಸೆಟ್‌ಗೂ ಹೋಗಿದ್ದೆ" ಎಂದು ಶಶಿಕುಮಾರ್ ನೆನಪಿಸಿಕೊಂಡಿದ್ದಾರೆ.

'ಸ್ಪೀಡುನ್ನೋಡು' ಚಿತ್ರದ ಪೋಸ್ಟರ್ ನೋಡಿ ಚಿತ್ರದಲ್ಲಿ ತಮನ್ನಾ ನಟಿಸಿದ್ದಾರಾ? ಓಹ್, ಬರೀ ಐಟಂ ಸಾಂಗ್ ಮಾತ್ರನಾ? ಅಷ್ಟೆಲ್ಲಾ ಬದಲಾವಣೆ ಮಾಡ್ಕೊಂಡಿದ್ದಾರಾ? ಎಂದು ನಟ ಶಶಿಕುಮಾರ್ ವ್ಯಂಗ್ಯವಾಡಿರುವ ವೀಡಿಯೋ ವೈರಲ್ ಆಗುತ್ತಿದೆ.

ಸದ್ಯ ನಟ ಶಶಿಕುಮಾರ್ 4 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿಯಾನ್ ವಿಕ್ರಂ ನಟಿಸಿದ 'ಸೇತು' ಚಿತ್ರದ ಸಹ ನಿರ್ದೇಶಕರಾಗಿ ಅವರು ಚಿತ್ರರಂಗಕ್ಕೆ ಬಂದಿದ್ದರು. ಚಿತ್ರದಲ್ಲಿ ನಾಯಕ ಸ್ನೇಹಿತನಾಗಿ ಸಣ್ಣ ಪಾತ್ರದಲ್ಲೂ ಮಿಂಚಿದ್ದರು. ಬಳಿಕ 'ನಾಡೋಡಿಗಳ್' ಚಿತ್ರದ ಹೀರೊ ಆಗಿದ್ದರು. ಈ ಚಿತ್ರವನ್ನು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ರೀಮೇಕ್(ಹುಡುಗರು) ಮಾಡಿದ್ದರು. ಅಲ್ಲಿಂದ ಮುಂದೆ ಕೆಲ ಸೂಪರ್ ಹಿಟ್ ಸಿನಿಮಾಗಳಲ್ಲಿ ಶಶಿಕುಮಾರ್ ನಟಿಸಿದ್ದಾರೆ.

More from Filmibeat

English summary
Tamil actor Sasikumar compared his Sundarapandian telugu and kannada remake;
Read more about: yash kannada tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X