twitter
    For Quick Alerts
    ALLOW NOTIFICATIONS  
    For Daily Alerts

    ಯಾಕಾದರೂ ಅಂತಹ ಸಿನಿಮಾಗಳನ್ನು ಮಾಡಿದೆನೋ...: 'ಸಿಂಗಂ' ನಿರ್ದೇಶಕನ ಪಶ್ಚಾತ್ತಾಪ

    By Avani Malnad
    |

    'ಸಿಂಗಂ' ಖ್ಯಾತಿಯ ತಮಿಳು ನಿರ್ದೇಶಕ, ಪೊಲೀಸ್ ಸರಣಿಯ ಐದು ಸಿನಿಮಾಗಳನ್ನು ಮಾಡಿದ್ದಾರೆ. 'ಸಿಂಗಂ' ಯಶಸ್ಸಿನ ಬಳಿಕ ಪೊಲೀಸರನ್ನು ವೈಭವೀಕರಿಸುವ ಚಿತ್ರಗಳನ್ನು ಮಾಡಿರುವ ಅವರು ಅವುಗಳಲ್ಲಿ ಯಶಸ್ಸನ್ನೂ ಕಂಡಿದ್ದಾರೆ. 'ಸಿಂಗಂ' ನಂತರ ಕನ್ನಡಕ್ಕೆ 'ಕೆಂಪೇಗೌಡ' ಹೆಸರಿನಲ್ಲಿ ರೀಮೇಕ್ ಆಗಿದ್ದರೆ, ಹಿಂದಿಯಲ್ಲಿ 'ಸಿಂಗಂ' ಹೆಸರಿನಲ್ಲೇ ರೀಮೇಕ್ ಆಗಿತ್ತು.

    Recommended Video

    Darshan made a mistake while wishing Kempegowda Jayanthi to his fans | Filmibeat Kannada

    ಈ ಯಶಸ್ಸಿನ ಬಳಿಕ ಸಿಂಗಂನ ಇನ್ನೂ ಎರಡು ಭಾಗಗಳನ್ನು ಅವರು ಮಾಡಿದ್ದರು. ನಂತರ ನಾಯಕ ಪೊಲೀಸ್ ಆಗಿರುವ 'ಸಾಮಿ' ಚಿತ್ರದ ಸೀಕ್ವೆಲ್ ಕೂಡ ಮಾಡಿದರು. ಈ ಎಲ್ಲ ಚಿತ್ರಗಳಲ್ಲಿಯೂ ಪೊಲೀಸ್ ಇಲಾಖೆಯಲ್ಲಿರುವ ನಾಯಕ, ಅನ್ಯಾಯದ ವಿರುದ್ಧ ಹೋರಾಡುವ, ತನ್ನ ಜನರನ್ನು ರಕ್ಷಿಸುವ ಕಥೆಗಳು ಸಾಮಾನ್ಯವಾಗಿದ್ದವು. ಆದರೆ ಈಗ ನಿರ್ದೇಶಕ ಹರಿ, ಈ ಐದು ಸಿನಿಮಾಗಳನ್ನು ಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟುಕೊಳ್ಳುತ್ತಿದ್ದಾರೆ. ಈ ಸಿನಿಮಾಗಳನ್ನು ಮಾಡಿ ತಪ್ಪು ಎಸಗಿದ್ದೇನೆ ಎಂದಿದ್ದಾರೆ.

    ಲಾಕ್‌ಡೌನ್‌ನಲ್ಲಿ ಸಿಂಪಲ್ಲಾಗಿ ಮೂರನೇ ಮದುವೆಯಾದ ಜನಪ್ರಿಯ ನಟಿಲಾಕ್‌ಡೌನ್‌ನಲ್ಲಿ ಸಿಂಪಲ್ಲಾಗಿ ಮೂರನೇ ಮದುವೆಯಾದ ಜನಪ್ರಿಯ ನಟಿ

    ಹಿಟ್ ಸಿನಿಮಾಗಳನ್ನು ನೀಡಿದ್ದರೂ ಅವರು ಬೇಸರಪಟ್ಟುಕೊಳ್ಳುವುದಕ್ಕೆ ಕಾರಣವೇನು? ಮುಂದೆ ಓದಿ...

    ಘಟನೆ ಖಂಡಿಸಿದ ಹರಿ

    ಘಟನೆ ಖಂಡಿಸಿದ ಹರಿ

    ತಮಿಳುನಾಡಿನ ತೂತುಕುಡಿಯಲ್ಲಿನ ಸತ್ತಾನ್‌ಕುಳಂ ಪಟ್ಟಣದಲ್ಲಿ ಜೆಯರಾಜ್ ಮತ್ತು ಅವರ ಮಗ ಫೆನಿಕ್ಸ್ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಅಮಾನುಷವಾಗಿ ಥಳಿಸಿ ಸಾಯಿಸಿದ ಪ್ರಕರಣದ ಬಗ್ಗೆ ನಿರ್ದೇಶಕ ಹರಿ ಖೇದ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

    ಪಶ್ಚಾತ್ತಾಪ ಪಡುತ್ತಿದ್ದೇನೆ

    ಪಶ್ಚಾತ್ತಾಪ ಪಡುತ್ತಿದ್ದೇನೆ

    ಇಂತಹ ಘಟನೆಗಳು ತಮಿಳುನಾಡಿನಲ್ಲಿ ಮರುಕಳಿಸದೆ ಇರಲಿ. ಕೆಲವು ಅಧಿಕಾರಿಗಳಿಂದಾಗಿ ಇಡೀ ಪೊಲೀಸ್ ಇಲಾಖೆಗೆ ಕಳಂಕ ಬಂದಿದೆ. ಪೊಲೀಸರನ್ನು ವೈಭವೀಕರಿಸುವ ಐದು ಸಿನಿಮಾಗಳನ್ನು ಮಾಡಿದ್ದಕ್ಕಾಗಿ ನಾನು ಈಗ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಅವರು ಬೇಸರದಿಂದ ಹೇಳಿದ್ದಾರೆ.

    ಲಾಕ್ ಡೌನ್ ನಲ್ಲಿ ಬಳಕುವ ಬಳ್ಳಿಯಂತಾಗಿ ಅಚ್ಚರಿ ಮೂಡಿಸಿದ ಗುಂಡಗಿದ್ದ ಹಾಸ್ಯನಟಿ ವಿದ್ಯುಲ್ಲೇಖಾಲಾಕ್ ಡೌನ್ ನಲ್ಲಿ ಬಳಕುವ ಬಳ್ಳಿಯಂತಾಗಿ ಅಚ್ಚರಿ ಮೂಡಿಸಿದ ಗುಂಡಗಿದ್ದ ಹಾಸ್ಯನಟಿ ವಿದ್ಯುಲ್ಲೇಖಾ

    ಸಮಾನ ಹೊಣೆಗಾರರು- ಸೂರ್ಯ

    ಸಮಾನ ಹೊಣೆಗಾರರು- ಸೂರ್ಯ

    'ಸಿಂಗಂ' ಸರಣಿಯಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದ ನಟ ಸೂರ್ಯ, ಇಡೀ ಘಟನೆ ಒಂದು ಸಂಘಟಿತ ಅಪರಾಧ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಲ್ಲಿ ಪೊಲೀಸರು ಮಾತ್ರವಲ್ಲ, ಮ್ಯಾಜಿಸ್ಟರೇಟ್ ಮತ್ತು ವೈದ್ಯರು ಕೂಡ ಸಮಾನ ಹೊಣೆಗಾರರು. ಇದನ್ನು ನಿರ್ಲಕ್ಷ್ಯದ ಕೃತ್ಯ ಎಂದು ವ್ಯಾಖ್ಯಾನಿಸಲಾಗದು. ಏಕೆಂದರೆ ಲಾಕಪ್ ಡೆತ್‌ಗಳು ಪೊಲೀಸ್ ಇಲಾಖೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತಿವೆ ಎಂದಿದ್ದಾರೆ.

    ಬೇಗ ಶಿಕ್ಷಿಸಿ- ಖುಷ್ಬೂ ಆಗ್ರಹ

    ಬೇಗ ಶಿಕ್ಷಿಸಿ- ಖುಷ್ಬೂ ಆಗ್ರಹ

    'ಜೆಯರಾಜ್ ಮತ್ತು ಫೆನಿಕ್ಸ್ ಪ್ರಕರಣದಲ್ಲಿ ಯಾವುದೇ ವಿಳಂಬವಿಲ್ಲದೆ ಕಾನೂನು ತನ್ನ ಕ್ರಮ ತೆಗೆದುಕೊಂಡು ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸುವುದನ್ನು ನಾವು ನೋಡಬಹುದೇ? ತಪ್ಪಿತಸ್ಥರು ತಪ್ಪಿಕೊಳ್ಳಬಾರದು. ಕುಟುಂಬವೊಂದು ತಮ್ಮ ಅತಿ ಪ್ರೀತಿಪಾತ್ರರನ್ನು ಕಳೆದುಕೊಂಡಿದೆ. ನ್ಯಾಯದಾನ ವಿಳಂಬವಾಗುವುದು ನ್ಯಾಯ ನಿರಾಕರಿಸಿದಂತೆಯೇ' ಎಂದು ನಟಿ ಖುಷ್ಬೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸ್ಟಾರ್ ನಟನ ನಿರ್ದೇಶನದ ಸಿನಿಮಾದಲ್ಲಿ ಸ್ಟಾರ್ ನಟ ನಾಯಕ!ಸ್ಟಾರ್ ನಟನ ನಿರ್ದೇಶನದ ಸಿನಿಮಾದಲ್ಲಿ ಸ್ಟಾರ್ ನಟ ನಾಯಕ!

    ಏನಿದು ಘಟನೆ?

    ಏನಿದು ಘಟನೆ?

    ಲಾಕ್ ಡೌನ್ ಸಮಯದಲ್ಲಿ ಅನುಮತಿ ಮುಗಿದು 15 ನಿಮಿಷಗಳು ಕಳೆದರೂ ಮೊಬೈಲ್ ಅಂಗಡಿ ತೆರೆದಿದ್ದ ಆರೋಪದಲ್ಲಿ ಜೆಯರಾಜ್ ಮತ್ತು ಅವರ ಮಗ ಫೆನಿಕ್ಸ್ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಲಾಕಪ್‌ನಲ್ಲಿ ಹಾಕಿ ಅಮಾನುಷವಾಗಿ ಥಳಿಸಿದ್ದರು ಎನ್ನಲಾಗಿದೆ. ತೀವ್ರ ಗಾಯಗೊಂಡಿದ್ದ ಫೆನಿಕ್ಸ್ ಜೂನ್ 22ರಂದು ಕೋವಿಲ್‌ಪಟ್ಟಿ ಜನಲರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಅವರ ತಂದೆ ಜೆಯರಾಜ್ ಜೂನ್ 23ರಂದು ಕೊನೆಯುಸಿರೆಳೆದಿದ್ದರು. ಮೊದಲೇ ಕೊರೊನಾ ವೈರಸ್ ಸಂಕಷ್ಟದಲ್ಲಿರುವ ಜನತೆಗೆ ಈ ಘಟನೆ ಆಘಾತ ಮೂಡಿಸಿದೆ. ಈ ಘಟನೆಯನ್ನು ದೇಶಾದ್ಯಂತ ಸೆಲೆಬ್ರಿಟಿಗಳು ಖಂಡಿಸಿದ್ದಾರೆ.

    English summary
    Sathankulam custodial deaths of Jeyaraj and Fenix: Singam fame director Hari regrets for making five films celebrating police.
    Monday, June 29, 2020, 12:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X