ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಆರ್ಯ; ಪತಿಗೆ ಪ್ರೀತಿಯ ಶುಭಾಶಯ ತಿಳಿಸಿದ 'ಯುವರತ್ನ' ಸುಂದರಿ

ತಮಿಳು ಸಿನಿಮಾರಂಗದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಆರ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟಿರುವ ನಟ ಆರ್ಯ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ.

ವಿಶೇಷ ಎಂದರೆ ಆರ್ಯ ಪ್ರೀತಿಯ ಮಡದಿ ಸಯೇಶಾ ಸೈಗಲ್ ಪತಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದ್ದಾರೆ. ತೆಲುಗು ಸಿನಿಮಾರಂಗದ ಸುಂದರ ಜೋಡಿಗಳಲ್ಲಿ ಆರ್ಯ ಮತ್ತು ಸಯೇಶಾ ಜೋಡಿ ಕೂಡ ಒಂದು. ಪತಿಯ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸಯೇಶಾ ರೊಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡಿ ಪ್ರೀತಿಯ ಸಂದೇಶ ರವಾನಿಸಿದ್ದಾರೆ.

ಪತಿಗೆ ವಿಶ್ ಮಾಡಿದ ಸಯೇಶಾ

ಪತಿಗೆ ವಿಶ್ ಮಾಡಿದ ಸಯೇಶಾ

ಟ್ವಿಟರ್ ನಲ್ಲಿ ಪತಿಗೆ ವಿಶ್ ಮಾಡಿರುವ ಸಯೇಶಾ, 'ನಾನು ಹೆಮ್ಮೆಯಿಂದ ನನ್ನವನು ಎಂದು ಹೇಳಿಕೊಳ್ಳುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಹೇಳಿದ್ದಾರೆ. ಪತ್ನಿಯ ವಿಶ್ ಗೆ ಪ್ರತಿಕ್ರಿಯೆ ನೀಡಿರುವ ನಟ ಆರ್ಯ, 'ಧನ್ಯವಾದಗಳು ನನ್ನ ವೈಫಿ' ಎಂದು ಹೇಳಿದ್ದಾರೆ.

ನಟಿ ಖುಷ್ಬೂ ವಿಶ್

ನಟಿ ಖುಷ್ಬೂ ವಿಶ್

ಅನೇಕರು ನಟ ಆರ್ಯಗೆ ವಿಶ್ ಮಾಡುತ್ತಿದ್ದಾರೆ. ಹಿರಿಯ ನಟಿ ಖುಷ್ಬೂ ಸಹ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ. ಹಳೆಯ ಫೋಟೋವನ್ನು ಶೇರ್ ಮಾಡಿ, 'ಜಮ್ಮಿ ಹುಟ್ಟುಹಬ್ಬದ ಶುಭಾಶಯಗಳು. ಒಳ್ಳೆಯದಾಗಲಿ' ಎಂದು ಹೇಳಿದ್ದಾರೆ. ಖುಷ್ಬೂಗೆ ಪ್ರತಿಕ್ರಿಯೆ ನೀಡಿರುವ ಆರ್ಯ, ಧನ್ಯವಾದ ತಿಳಿಸಿದ್ದಾರೆ.

ಉತ್ತಮ ಸ್ನೇಹಿತರಾಗಿದ್ದ ನಟ ಆರ್ಯ ಮತ್ತು ವಿಶಾಲ್ 'ಎನಿಮಿ'ಗಳಾಗಿದ್ದೇಕೆ?

ಸರ್ಪಟ್ಟ ಪರಂಬರೈ ಸಿನಿಮಾ ಸೆಟ್ ನಲ್ಲಿ ಜನ್ಮದಿನ ಆಚರಣೆ

ಸರ್ಪಟ್ಟ ಪರಂಬರೈ ಸಿನಿಮಾ ಸೆಟ್ ನಲ್ಲಿ ಜನ್ಮದಿನ ಆಚರಣೆ

ಆರ್ಯ ಸದ್ಯ ಬಹುನಿರೀಕ್ಷೆಯ ಸರ್ಪಟ್ಟ ಪರಂಬರೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ಸೆಟ್ ನಲ್ಲಿ ನಟ ಆರ್ಯ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇಡೀ ತಂಡ ಕೇಕ್ ಕತ್ತರಿಸಿ ಆರ್ಯ ಹುಟ್ಟುಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಸರ್ಪಟ್ಟ ಪರಂಬರೈ ಸಿನಿಮಾಗೆ ನಿರ್ದೇಶಕ ಪ. ರಂಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Recommended Video

ನಟನೆ ಜೊತೆಗೆ ಮತ್ತೊಂದು ಕೆಲಸಕ್ಕೆ ಕೈ ಹಾಕಿದ ಲೂಸ್ ಮಾದ ಯೋಗಿ | Filmibeat Kannada
ನಿರೀಕ್ಷೆ ಹೆಚ್ಚಿಸಿದ ಫಸ್ಟ್ ಲುಕ್

ನಿರೀಕ್ಷೆ ಹೆಚ್ಚಿಸಿದ ಫಸ್ಟ್ ಲುಕ್

ಇತ್ತೀಚಿಗೆ ಸರ್ಪಟ್ಟ ಪರಂಬರೈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಆರ್ಯ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಆರ್ಯ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ಸಿನಿಮಾಗಾಗಿ ಉಸಿರು ಬಿಡಿ ಹಿಡಿದು ಕಾಯುತ್ತಿದ್ದಾರೆ. ಚಿತ್ರಕ್ಕಾಗಿ ಆರ್ಯ ದೇಹ ಹುರಿಗೊಳಿಸಿ, ಕಟ್ಟುಮಸ್ತಾಗಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Yuvarathnaa fame Actress Sayyeshaa wishes her husband Arya on his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X