ನಯನತಾರ 'ಕೆಂಪು ಸೀರೆ' ರಹಸ್ಯ: ಸೀರೆಗಿದೆ ಹೊಯ್ಸಳರ ನಂಟು?

ಸಿನಿಮಾ ತಾರೆಯರ ಅದ್ಧೂರಿ ಮದುವೆ ಎಂದರೆ ಸಾಕಷ್ಟು ಕುತೂಹಲಗಳು ಇದ್ದೇ ಇರುತ್ತವೆ. ಅದರಲ್ಲೂ ಸ್ಟಾರ್ ನಟಿಯರು ಮದುವೆ ಆದರಂತೂ ಅವರ ಮದುವೆ ಕಾಸ್ಟ್ಯೂಂಗಳ ಮೇಲೆ ಗಮನ ಇರುತ್ತದೆ. ಯಾವ ರೀತಿಯ ಮದುವೆ ಧಿರಿಸಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲಗಳು ಸಹಜವಾಗಿ ಇರುತ್ತದೆ.

ಹಾಗೆ ಇತ್ತೀಚೆಗೆ ಸಾಕಷ್ಟು ನಿರೀಕ್ಷೆಯೊಂದಿಗೆ ಮದುವೆಯಾದ ನಟಿ ಎಂದರೆ ಅದು ನಯನತಾರ. ನಯನತಾರಾ ಮದುವೆ ಆಗುವ ತನಕವೂ ಈಕೆಯ ಲುಕ್‌ ಬಗ್ಗೆ ಹೆಚ್ಚಿನ ಕುತೂಹಲ ಇತ್ತು. ಮದುವೆ ಬಳಿಕ ವಿಘ್ನೇಶ್ ನಯನತಾರಾ ಲುಕ್ ಫೊಟೋ ಮೂಲಕ ರಿವೀಲ್ ಆಯ್ತು. ನಟಿ ನಯನತಾರ ಕೆಂಪು ಸೀರೆಯಲ್ಲಿ ಮದುವಣಗಿತ್ತಿಯಾಗಿ ಮಿಂಚಿದ್ದಾರೆ.

ನಯನತಾರ ಮದುವೆ ಫೊಟೋಗಳು ವೈರಲ್ ಆಗುತ್ತಲೇ, ಆಕೆಯ ಉಡುಗೆ ತೊಡುಗೆಯ ಬಗ್ಗೆಯೇ ಹೆಚ್ಚು ಚರ್ಚೆ ಆಗಿದೆ. ನಯನತಾರ ಉಟ್ಟಿದ್ದ ಕೆಂಪು ಬಣ್ಣದ ಬಗ್ಗೆ ಹೆಚ್ಚು ಚರ್ಚೆ ಆಗಿದೆ, ಈ ಕಡು ಕೆಂಪು ಬಣ್ಣದ ಸೀರೆಯನ್ನು ಬರಿ ಸೀರೆ ಎಂದು ಹೇಳಲು ಸಾಧ್ಯವಿಲ್ಲ. ಸೀರೆಯ ವಿಶೇಷತೆ ಏನು ಎನ್ನುವುದನ್ನು ಮುಂದೆ ಓದಿ...

ಕೆಂಪು ಸೀರೆ, ಹರಿಸು ಆಭರಣ!

ನಟಿ ನಯನತಾರ ಮದುವೆ ಸೀರೆಗಾಗಿ ಒಂದೆ ಬಣ್ಣದ ಸೀರೆಯನ್ನು ಆಯ್ಕೆ ಮಾಡಿದ್ದಾರೆ. ಕನಿಷ್ಟ ಎರಡು ಬಣ್ಣದ ಮಿಶ್ರಣ ಕೂಡ ಇಲ್ಲ. ಈ ಕಡು ಕೆಂಪು ಬಣ್ಣದ ಸೀರೆಯ ಹಲವು ವಿಶೇಷತೆಗಳಿಂದ ಕೂಡಿದೆ. ಇದು ಬರಿಯ ಸೀರೆಯಲ್ಲ. ಇದು ನಯನತಾ ಮತ್ತು ವಿಘ್ನೇಶ್ ದಂಪತಿಗಳ ಪ್ರೀತಿಯ ಪ್ರತೀಕ. ಈ ಸೀರೆಯನ್ನು ನಟಿ ನಯನತಾರಾ ಆಸೆಯಂತೆ ನೇಯ್ಗೆ ಮಾಡಲಾಗಿದೆ.

ಕೆಂಪು ಸೀರೆಯಲ್ಲಿ ಪತಿಯ ಹೆಸರು, ಹೊಯ್ಸಳ ಕಲೆ!

ಸೀರೆಯ ತುಂಬಾ ಹೂವಿನ ಚಿತ್ರಣ ಇದೆ. ಇನ್ನು ಈ ಸೀರೆಯ ಅಂಚು ಮಾತ್ರ ಬಹಳ ವಿಶೇಷವಾಗಿದೆ. ಅಂಚಿನಲ್ಲಿ ನಾಲ್ಕು ಹಂತದ ವಿನ್ಯಾಸಗಳಿವೆ. ಬಾರ್ಡರ್ ಕೊನೆಯಲ್ಲಿ ಕಾಣುವುದು ಹೊಯ್ಸಳರ ದೇವಸ್ಥಾನ ಶೈಲಿಯ ಚಿತ್ರಣ. ಈ ಚಿತ್ರಣ ಹೋಯ್ಸಳ ದೇವಸ್ಥಾನಗಳ ಚಿತ್ರದ ಸ್ಪೂರ್ತಿಯಿಂದಲೇ ನೇಯಲಾಗಿದೆ. ಇನ್ನು ಮಧ್ಯದಲ್ಲಿ ನಯನತಾರ ಮತ್ತು ವಿಘ್ನೇಶ್ ಹೆಸರನ್ನು ಹೆಣೆಯಲಾಗಿದೆ.

ನಯನತಾರ ಆಸೆಯಂತೆ ಸೀರೆ, ರವಿಕೆ!

ಇಬ್ಬರ ಹೆಸರುಗಳನ್ನು ಸೀತೆಯಲ್ಲಿ ನೇಯಬೇಕು ಎನ್ನುವುದು ನಯನತಾರ ಆಸೆ ಆಗಿತ್ತಂತೆ. ಅಂತೆಯೇ ಸೀರೆ ಸಿದ್ಧವಾಗಿದೆ. ಇನ್ನು ನಯನತಾರಾ ಸೀತೆಯ ಜೊತೆಗಿನ ರವಿಕೆ ಕೂಡ ವಿಶೇಷವಾಗಿದೆ. ಉದ್ದನೆಯ ಕೈ ತೋಳು ಹೊಂದಿದ್ದು, ಪೂರ್ಣ ಕೈ, ತೋಳಿನಿಂದ ಆವರಿಸಿದೆ. ತೋಳಿನ ಮೇಲೆ ಲಕ್ಷ್ಮೀ ದೇವತೆಯ ಚಿತ್ರಣ ಇರುವ ಮುದ್ರೆಗಳನ್ನು ಹೆಣೆಯಲಾಗಿದೆ.

ನಯನತಾರ ಆಭರಣಗಳ ವಿಶೇಷತೆ!

ಕಣ್ಣು ಕುಕ್ಕುವಂಥಹಾ ಕೆಂಪು ಸೀರೆಯ ಮೇಲೆ ನಯನತಾರ ಹಸಿರು ಬಣ್ಣದ ಆಭರಣಗಳನ್ನು ತೊಟ್ಟಿದ್ದಾರೆ. ಎಮರಾಲ್ಡ್ ಜೆಮ್ ಸ್ಟೋನ್ ಮತ್ತು ವಜ್ರದ ಬೈತಲೆ ಬೊಟ್ಟು, ಕ್ಯಾಬಚೋನ್ ಎಮರಾಲ್ಡ್ ಕಿವಿಯೋಲೆ, ಜಾಂಬಿಯನ್ ಎಮರಾಲ್ಡ್ ಚೋಕರ್, ಪೋಲ್ಕಿ ಚೈನ್, ಸಟ್ಲಾಡ ಹಾರ ಹಾಕಿಕೊಂಡಿದ್ದರು. ನಯನತಾರ ಸೀರೆಯನ್ನು ವಿನ್ಯಾಸ ಮಾಡಿದ್ದು ಹೆಸರಾಂತ ವಿನ್ಯಾಸಕರಾದ ಮೋನಿಕಾ, ಕ್ರೀಶ್ಮ ಒಡೆತನದ ಜೇಡ್ ಸಂಸ್ಥೆ.

More from Filmibeat

English summary
Secret Of Nayanthara Wedding Saree, Why She Choos Red Color For Wedding, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X