For Quick Alerts
  ALLOW NOTIFICATIONS  
  For Daily Alerts

  ತೆಲುಗು ನಿರ್ದೇಶಕನ ಸಿನಿಮಾದಲ್ಲಿ ಧನುಷ್: ಭಿನ್ನ ಸಿನಿಮಾಕ್ಕೆ ತಯಾರಾಗಿ!

  |

  ಸ್ಟಾರ್ ನಟ ಧನುಷ್ ನಟನಾಗಿ ತಮಗೆ ತಾವು ಬೇಲಿ ಹಾಕಿಕೊಂಡವರಲ್ಲ. ಕತೆ, ಪಾತ್ರ ಇಷ್ಟವಾದರೆ ಸಾಕು, ಮಾಸ್-ಕ್ಲಾಸ್ ಎಂದೆಲ್ಲಾ ನೋಡದೆ ಸಿನಿಮಾದಲ್ಲಿ ನಟಿಸುತ್ತಾರೆ. ಹಾಗಾಗಿಯೇ ಅಷ್ಟು ಅತ್ಯದ್ಭುತ ಸಿನಿಮಾಗಳನ್ನು ನೀಡಲು ಅವರಿಗೆ ಸಾಧ್ಯವಾಗುತ್ತಿದೆ.

  ನಿರ್ದೇಶಕರ ವಿಷಯದಲ್ಲಿಯೂ ಅಷ್ಟೆ, ಸ್ಟಾರ್ ನಿರ್ದೇಶಕನೇ ಆಗಿರಬೇಕು. ಸೂಪರ್ ಹಿಟ್ ಸಿನಿಮಾಗಳು ನೀಡಿದ ಇತಿಹಾಸ ಬೆನ್ನಿಗಿರಬೇಕು ಎಂಬುದನ್ನೆಲ್ಲ ನೋಡುವುದಿಲ್ಲ ಧನುಷ್. ಕತೆ ಚೆನ್ನಾಗಿರಬೇಕು, ಅದನ್ನು ತೆರೆಯ ಮೇಲೆ ಸೂಕ್ತವಾಗಿ ತೋರಿಸುವಷ್ಟು ಪ್ರತಿಭೆ ಇರಬೇಕು ಇಷ್ಟಿದ್ದರೆ ಕತೆಗೆ ಸೈ ಎಂದು ಚಿತ್ರೀಕರಣಕ್ಕೆ ಇಳಿಯುತ್ತಾರೆ.

  ವಿಶ್ವ ದಾಖಲೆ ಬರೆದ 'ಅವೇಂಜರ್ಸ್' ಸಿನಿಮಾ ಖ್ಯಾತಿಯ ನಿರ್ದೇಶಕರೊಟ್ಟಿಗೆ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ಧನುಷ್ ಈಗ ತೆಲುಗಿನ ನಿರ್ದೇಶಕರೊಬ್ಬರೊಟ್ಟಿಗೆ ಹೊಸ ಸಿನಿಮಾಕ್ಕೆ ಕೈ ಜೋಡಿಸಿದ್ದಾರೆ.

  ಸೂಕ್ಷ್ಮ, ಆಹ್ಲಾದಕರ ಮಾದರಿಯ ಸಿನಿಮಾಗಳಿಂದ ಖ್ಯಾತಿಗಳಿಸಿರುವ ಶೇಖರ್ ಕಮ್ಮುಲ ನಿರ್ದೇಶಿಸಲಿರುವ ಮುಂದಿನ ಸಿನಿಮಾದಲ್ಲಿ ಧನುಷ್ ನಾಯಕರಾಗಿ ನಟಿಸಲಿದ್ದಾರೆ.

  ಹಲವು ಹಿಟ್ ಸಿನಿಮಾ ಕೊಟ್ಟಿರುವ ಶೇಖರ್

  ಹಲವು ಹಿಟ್ ಸಿನಿಮಾ ಕೊಟ್ಟಿರುವ ಶೇಖರ್

  'ಆನಂದ್', 'ಗೋಧಾವರಿ', ''ಹ್ಯಾಪಿಡೇಸ್', 'ಲೀಡರ್', 'ಫಿದಾ', 'ಲೈಫ್ ಈಸ್ ಬ್ಯೂಟಿಫುಲ್' ಇನ್ನೂ ಕೆಲವು ತೆಲುಗು ಸಿನಿಮಾಗಳನ್ನು ನಿರ್ದೇಶಿಸಿ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಶೇಖರ್ ಕಮ್ಮುಲ ಇದೇ ಮೊದಲ ಬಾರಿಗೆ ತಮಿಳಿನ ಸ್ಟಾರ್ ನಟ ಧನುಷ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಹೆಚ್ಚು ಹೊಸಬರೊಟ್ಟಿಗೆ ಸಿನಿಮಾ ಮಾಡಿದ್ದ ಶೇಖರ್

  ಹೆಚ್ಚು ಹೊಸಬರೊಟ್ಟಿಗೆ ಸಿನಿಮಾ ಮಾಡಿದ್ದ ಶೇಖರ್

  ಈ ಹಿಂದೆಲ್ಲ ಹೊಸಬರೊಟ್ಟಿಗೆ ಹೆಚ್ಚಿಗೆ ಸಿನಿಮಾ ಮಾಡಿದ್ದಾರೆ ಶೇಖರ್ ಕಮ್ಮುಲ. ನಯನತಾರಾ ಜೊತೆಗೆ 'ಅನಾಮಿಕ' ಸಿನಿಮಾ ಮಾಡಿದ್ದರಾದರೂ ಆ ಸಿನಿಮಾದ ಚಿತ್ರಕತೆ ಬೇರೆಯವರದ್ದಾಗಿತ್ತು. ನಂತರ ನಟ ನಾಗಚೈತನ್ಯ-ಸಾಯಿ ಪಲ್ಲವಿ ಜೊತೆಗೆ 'ಲವ್‌ ಸ್ಟೋರಿ' ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ರಾಣಾ ದಗ್ಗುಬಾಟಿಯನ್ನು ಸಿನಿಮಾರಂಗಕ್ಕೆ ಲಾಂಚ್ ಮಾಡಿದ್ದು ಇದೇ ಶೇಖರ್ ಕಮ್ಮುಲ.

  ಜಂಟಿ ಸಹಯೋಗದಲ್ಲಿ ಸಿನಿಮಾ ನಿರ್ಮಾಣ

  ಜಂಟಿ ಸಹಯೋಗದಲ್ಲಿ ಸಿನಿಮಾ ನಿರ್ಮಾಣ

  ಧನುಷ್, ಶೇಖರ್ ಕಮ್ಮುಲ ಒಟ್ಟಿಗೆ ಸಿನಿಮಾ ಮಾಡುವುದು ಖಾತ್ರಿಯಾಗಿದ್ದು, ಸೊನಾಲಿ ನಾರಂಗ್ ಹಾಗೂ ಶ್ರೀ ವೆಂಕಟೇಶ್ವರ ಸಿನಿಮಾಸ್‌ನ ಜಂಟಿ ಸಹಯೋಗದಲ್ಲಿ ಸಿನಿಮಾ ನಿರ್ಮಾಣಗೊಳ್ಳಲಿದೆ. ಸಿನಿಮಾದ ನಿರ್ಮಾಣ ಜವಾಬ್ದಾರಿಯನ್ನು ನಾರಾಯಣ ದಾಸ್ ನಾರಂಗ್ ಮತ್ತು ಪುಷ್ಕರ್ ರಾಮ್ ಮೋಹನ್ ವಹಿಸಿಕೊಂಡಿದ್ದಾರೆ.

  ಮೂರು ಭಾಷೆಯಲ್ಲಿ ಸಿನಿಮಾ ಬಿಡುಗಡೆ

  ಮೂರು ಭಾಷೆಯಲ್ಲಿ ಸಿನಿಮಾ ಬಿಡುಗಡೆ

  ಶೇಖರ್ ಕಮ್ಮುಲ, ಧನುಷ್ ಸಿನಿಮಾವು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗಲಿದೆ. ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿ ಬಂದ ನಂತರ ಶೇಖರ್ ಕಮ್ಮುಲ ಜೊತೆಗಿನ ಸಿನಿಮಾ ಸೆಟ್ಟೇರಲಿದೆ.

  ಸಂಚಾರಿ ವಿಜಯ್ ಹೆಸರಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಚಕ್ರವರ್ತಿ ಚಂದ್ರಚೂಡ್ | Filmibeat Kannada
  ಹಲವು ಸಿನಿಮಾಗಳು ಧನುಷ್ ಕೈಯಲ್ಲಿವೆ

  ಹಲವು ಸಿನಿಮಾಗಳು ಧನುಷ್ ಕೈಯಲ್ಲಿವೆ

  'ದಿ ಗ್ರೇ ಮ್ಯಾನ್' ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ಧನುಷ್ ನಟಿಸುತ್ತಿದ್ದು ಈ ಸಿನಿಮಾದಲ್ಲಿ 'ಕ್ಯಾಪ್ಟನ್ ಅಮೆರಿಕ' ಖ್ಯಾತಿಯ ಕ್ರಿಸ್ ಇವಾನ್, ಗೋಲ್ಡನ್ ಗ್ಲೋಬ್ ವಿಜೇತ ನಟ ರ್ಯಾನ್ ಗೋಸ್ಲಿಂಗ್‌ ಇದ್ದಾರೆ. ಧನುಷ್ ಕೈಯಲ್ಲಿ ಹಲವು ಸಿನಿಮಾಗಳಿದ್ದು, ಹಿಂದಿಯ 'ಅತರಂಗಿ ರೇ' ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. 'ಆಯರತ್ತಿಲ್ ಒರುವನ್ 2', 'ನಾನೇ ವರುವೇನ್', ಕಾರ್ತಿಕ್ ನರೇನ್ ನಿರ್ದೇಶನದ ಮತ್ತೊಂದು ಸಿನಿಮಾ ಚಿತ್ರೀಕರಣ ಆರಂಭವಾಗಬೇಕಿದೆ.

  English summary
  Sekhar Kammula will direct Tamil star Dhanush's next movie. Dhanush is now doing a Hollywood movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X