ಫಲಿಸದ ಚಿಕಿತ್ಸೆ: ನೃತ್ಯ ನಿರ್ದೇಶಕ ಶಿವಶಂಕರ್ ನಿಧನ

ಕೊರೊನಾ ಕಾರಣದಿಂದಾಗಿ ಕಳೆದ ಒಂದು ವಾರದಿಂದ ಹೈದರಾಬಾದ್‌ ಎಐಜಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನಪ್ರಿಯ ನೃತ್ಯ ನಿರ್ದೇಶಕ ಶಿವಶಂಕರ್ (72) ನಿನ್ನೆ (ನವೆಂಬರ್ 28) ರಂದು ನಿಧನ ಹೊಂದಿದ್ದಾರೆ.

ಕೊರೊನಾ ಪಾಸಿಟಿವ್ ಆಗಿದ್ದ ಶಿವಶಂಕರ್ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು, ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಶಿವಶಂಕರ್ ಕುಟುಂಬದ ಬಹುತೇಕ ಸದಸ್ಯರಿಗೆ ಕೊರೊನಾ ಆಗಿತ್ತು, ಶಿವಶಂಕರ್ ಮೊದಲ ಪುತ್ರನಿಗೂ ಆರೋಗ್ಯ ವಿಷಮ ಸ್ಥಿತಿಯಲ್ಲಿದ್ದು ಅವರಿಗೂ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸುಮಾರು 800 ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿರುವ ಶಿವಶಂಕರ್ ಅವರ ಕುಟುಂಬವು ಆರ್ಥಿಕ ಸಹಾಯಕ್ಕೆ ಮನವಿ ಮಾಡಿತ್ತು. ನೃತ್ಯ ನಿರ್ದೇಶಕರ ಸಂಘ, ನಟ ಸೋನು ಸೂದ್, ನಟ ಮೆಗಾಸ್ಟಾರ್ ಚಿರಂಜೀವಿ, ನಟ ಧನುಶ್ ಅವರುಗಳು ನೆರವಿನ ಹಸ್ತ ಚಾಚಿದ್ದರು. ಆದರೆ ಶಿವಶಂಕರ್ ಅವರನನ್ನು ಉಳಿಸಿಕೊಳ್ಳಲು ಆಗಲಿಲ್ಲ.

Senior Choreographer Shiva Shankar Passed Away Due To COVID 19

ಕೊರೊನಾದಿಂದಾಗಿ ಶಿವಶಂಕರ್ ಅವರ ಶ್ವಾಸಕೋಶಕ್ಕೆ ತೀವ್ರ ಹಾನಿಯಾಗಿತ್ತು, ಇದಲ್ಲದೆ ಅವರ ಇತರೆ ಅಂಗಾಂಗಗಳು ಸಹ ವಿಫಲವಾದವು ಹಾಗಾಗಿ ಶಿವಶಂಕರ್ ನಿಧನರಾದರು ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಇನ್ನು ಶಿವಶಂಕರ್ ಅವರ ಪ್ರಥಮ ಪುತ್ರ ವಿಜಯ್ ಶಂಕರ್ ಆರೋಗ್ಯ ಸಹ ಗಂಭೀರ ಸ್ಥಿತಿಯಲ್ಲಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಶಿವಶಂಕರ್ ಪತ್ನಿ ಸುಗನ್ಯಾಗೆ ಸಹ ಕೋವಿಡ್ ಆಗಿದ್ದು ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಶಂಕರ್ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಜನಪ್ರಿಯ ನೃತ್ಯ ನಿರ್ದೇಶಕ. ಈವರೆಗೆ ಸುಮಾರು 800 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನೃತ್ಯ ನಿರ್ದೇಶನಕ್ಕಾಗಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಕೆಲವು ಅತ್ಯುತ್ತಮ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. 'ಮಗಧೀರ' ಸಿನಿಮಾದ 'ಧೀರ ಧೀರ ಧೀರ ಮನಸಾಗಲೇದುರಾ...' ಹಾಡಿಗೆ ಮಾಡಿದ್ದ ನೃತ್ಯ ನಿರ್ದೇಶನಕ್ಕೆ ಶಿವಶಂಕರ್‌ಗೆ ರಾಷ್ಟ್ರಪ್ರಶಸ್ತಿ ಧಕ್ಕಿದೆ. ಕನ್ನಡತಿ ಛಾಯಾಸಿಂಗ್, ಧನುಶ್ ಒಟ್ಟಿಗೆ ಕುಣಿದಿದ್ದ 'ಮನ್ಮತ ರಾಜ' ಹಾಡಿಗೆ ಇವರೇ ನೃತ್ಯ ನಿರ್ದೇಶನ ಮಾಡಿದ್ದರು. ಚಿರಂಜೀವಿ ಡ್ಯಾನ್ಸ್ ಸ್ಟಾರ್ ಆಗಿ ಗುರುತು ಪಡೆದುಕೊಂಡ ಹಲವು ಸಿನಿಮಾಗಳಿಗೆ ಶಿವಶಂಕರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಈಗಿನ ಜನಪ್ರಿಯ ನೃತ್ಯ ನಿರ್ದೇಶಕ ಮತ್ತು ನಟ ರಾಘವ್ ಲಾರೆನ್ಸ್‌ಗೆ ಗುರು ಸಹ ಆಗಿರುವ ಶಿವ ಶಂಕರ್ ತಮಿಳು ಹಾಗೂ ತೆಲುಗಿನಲ್ಲಿ ಹಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಜೊತೆಗೆ ಕೆಲವು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸಹ ಭಾಗವಹಿಸಿದ್ದಾರೆ. ಮಹಿಳೆಯರಂತೆ ಮಾತನಾಡುವ, ನಡೆಯುವ ಅವರ ಹಾವ ಭಾವ ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತಿತ್ತು.

More from Filmibeat

English summary
Senior dance choreographer Shiva Shankar passed away due to COVID 19. Sonu Sood, Megastar Chianjeevi, Dhanush and many others helped Shiva Shankar and his family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X