For Quick Alerts
  ALLOW NOTIFICATIONS  
  For Daily Alerts

  ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್‌ಗೆ ಕೊರೊನಾ ಪಾಸಿಟಿವ್

  |

  ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹಿರಿಯ ನಿರ್ದೇಶಕರಲ್ಲಿ ಸಿಂಗೀತಂ ಶ್ರೀನಿವಾಸ್ ರಾವ್‌ ಸಹ ಒಬ್ಬರು. ಮಾಯಾಬಜಾರ್ ಕಾಲದಿಂದಲೂ ಚಿತ್ರರಂಗದಲ್ಲಿರುವ ದಿಗ್ಗಜ ನಿರ್ದೇಶಕ ಎಲ್ಲ ಪ್ರೇಕ್ಷಕರಿಗೂ ಇಷ್ಟವಾದ ಚಿತ್ರಗಳನ್ನು ನೀಡಿದ್ದಾರೆ.

  88 ವರ್ಷದ ಸಿಂಗೀತಂ ಶ್ರೀನಿವಾಸ್ ರಾವ್‌ ಅವರಿಗೂ ಸಹ ಕೊರೊನಾ ವೈರಸ್ ತಗುಲಿದೆ. ಆರಂಭದಲ್ಲಿ ಇದು ವದಂತಿ ಇರಬಹುದು ಎಂದು ಹೇಳಲಾಯಿತು. ಬಳಿಕ ಸ್ವತಃ ಸಿಂಗೀತಂ ಶ್ರೀನಿವಾಸ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

  ಸೆಪ್ಟೆಂಬರ್ 9 ರಂದು ಪಾಸಿಟಿವ್

  ಸೆಪ್ಟೆಂಬರ್ 9 ರಂದು ಪಾಸಿಟಿವ್

  ಸೆಪ್ಟೆಂಬರ್ 9 ರಂದು ಕೊರೊನಾ ವೈರಸ್ ಪರೀಕ್ಷೆಗೆ ಒಳಪಟ್ಟಿದ್ದ ಸಿಂಗೀತಂ ಶ್ರೀನಿವಾಸ್ ರಾವ್ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅದಾದ ಬಳಿಕ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಹೋಮ್ ಐಸೋಲೆಟ್ ಆಗಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿ ಸಹೋದರನಿಗೆ ಕೊರೊನಾ ಪಾಸಿಟಿವ್

  ಬೇಗ ಗುಣಮುಖರಾಗುವ ಭರವಸೆ

  ಬೇಗ ಗುಣಮುಖರಾಗುವ ಭರವಸೆ

  ಸಿಂಗೀತಂ ಶ್ರೀನಿವಾಸ್ ರಾವ್ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ರೋಗಲಕ್ಷಣಗಳು ಸಹ ದೊಡ್ಡ ಮಟ್ಟದಲ್ಲಿಲ್ಲ. ನಿರ್ದೇಶಕರು ಸಹ ಸಕರಾತ್ಮಕ ಮನೋಭಾವದಲ್ಲಿದ್ದು, ಆದಷ್ಟೂ ಬೇಗ ಗುಣಮುಖರಾಗುವ ಭರವಸೆ ವ್ಯಕ್ತಪಡಿಸಿದ್ದಾರೆ.

  ಸೆಪ್ಟೆಂಬರ್ 28ಕ್ಕೆ ಸಿಂಗೀತಂ ಬರ್ತಡೇ

  ಸೆಪ್ಟೆಂಬರ್ 28ಕ್ಕೆ ಸಿಂಗೀತಂ ಬರ್ತಡೇ

  ಸೆಪ್ಟೆಂಬರ್ 23 ರಂದು ಸಿಂಗೀತಂ ಶ್ರೀನಿವಾಸ್ ರಾವ್ ಅವರ ಹೋಮ್ ಐಸೋಲೇಶನ್ ಅವಧಿ ಮುಗಿಯಲಿದ್ದು, ಅಂದು ಅಂತಿಮ ಪರೀಕ್ಷೆ ಸಹ ಮಾಡಲಾಗುವುದು ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 28 ರಂದು ಸಿಂಗೀತಂ ಶ್ರೀನಿವಾಸ್ ಅವರ ಜನುಮದಿನವಾಗಿದ್ದು, ಅಷ್ಟರಲ್ಲಿ ಆರೋಗ್ಯ ಸುಧಾರಿಸಲಿದೆ ಎಂದು ಹೇಳಿದ್ದಾರೆ.

  ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಕೊರೊನಾ ವೈರಸ್ ನೆಗೆಟಿವ್

  ಸಿಂಗೀತಂ ಶ್ರೀನಿವಾಸ್ ರಾವ್ ಚಿತ್ರಗಳ ಬಗ್ಗೆ.....

  ಸಿಂಗೀತಂ ಶ್ರೀನಿವಾಸ್ ರಾವ್ ಚಿತ್ರಗಳ ಬಗ್ಗೆ.....

  ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಸಿಂಗೀತಂ ಶ್ರೀನಿವಾಸ್ ರಾವ್ ಎಲ್ಲ ಭಾಷೆಗಳಲ್ಲೂ ಅತ್ಯುನ್ನತ ಪ್ರಶಸ್ತಿ ಪಡೆದಿದ್ದಾರೆ. ಬಾಲಕೃಷ್ಣ ಅವರ 'ಆದಿತ್ಯ 369', ಮೈಕಲ್ ಕಾಮರಾಜನ್, ಅಪೂರ್ವ ಸಗೋದರರ್‌ಗಳ್ ಅಂತಹ ಸಿನಿಮಾಗಳು ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು.

  ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
  ಕನ್ನಡ ಸಿನಿಮಾಗಳು ಯಾವುದು?

  ಕನ್ನಡ ಸಿನಿಮಾಗಳು ಯಾವುದು?

  ಸಿಂಗೀತಂ ಶ್ರೀನಿವಾಸ್ ರಾವ್ ಅವರು ಕನ್ನಡದಲ್ಲಿ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹಾಲುಜೇನು, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಶ್ರಾವಣ ಬಂತು, ಭಾಗ್ಯದ ಲಕ್ಷ್ಮಿ ಬಾರಮ್ಮ, ಜ್ವಾಲಾಮುಖಿ, ಆನಂದ್, ಶ್ರುತಿ ಸೇರಿದಾಗ, ದೇವತಾ ಮನುಷ್ಯ, ಚಿರಂಜೀವಿ ಸಧಾಕರ್, ಸಂಯುಕ್ತಾ, ಕ್ರೀರಾ ಸಾಗರ, ಬೆಳ್ಳಿಯಪ್ಪಾ ಬಂಗಾರಪ್ಪ, ಟುವ್ವಿ ಟುವ್ವಿ ಟುವ್ವಿ ಹಾಗೂ ಮೇಕಪ್‌ ಚಿತ್ರ ಮಾಡಿದ್ದಾರೆ.

  English summary
  South Indian most successful senior Director Singeetam Srinivasa Rao tested coronavirus positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X