ನನಗೆ ಸಿಂಬು ಬೇಕೇ ಬೇಕು: ಮಧ್ಯರಾತ್ರಿ ಮನೆ ಮುಂದೆ ನಟಿಯ ಹೈಡ್ರಾಮ!

ತಮಿಳು ನಟ ಸಿಂಬು ಇತ್ತೀಚೆಗೆ ತಮ್ಮ ಲವ್ ಸ್ಟೋರಿ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ನಿಧಿ ಅಗರ್ವಾಲ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸದ್ಯದಲ್ಲೇ ಮದುವೆ ಆಗುತ್ತಾರೆ ಅಂತಲೂ ಹೇಳಲಾಗುತ್ತಿತ್ತು. ಹೀಗಿರುವಾಗ ಸಿಂಬು ಬಾಳಲ್ಲಿ ಮತ್ತೊಬ್ಬ ಹುಡುಗಿ ಎಂಟ್ರಿ ಆಗಿದೆ.

ತಮಿಳು ಸೀರಿಯಲ್ ನಟಿಯೊಬ್ಬರು ತನಗೆ ಸಿಂಬು ಬೇಕೆಂದು ಧರಣಿ ಕೂತಿದ್ದಾರೆ. ಇದಕ್ಕಾಗಿ ಮಧ್ಯರಾತ್ರಿ ಸಿಂಬು ಮನೆ ಮುಂದೆ ಪ್ರತಿಭಟನೆ ನಡೆಸಿದ್ದು, ಹೈಡ್ರಾಮಾ ಮಾಡಿದ್ದಾರೆ.

ಈಕೆ ಯಾರು? ಈಗ ಇದ್ದಕ್ಕಿದ್ದ ಹಾಗೆ ಸಿಂಬು ಬೇಕೆ ಬೇಕು ಎಂದು ಬಂದಿರುವುದು ಯಾಕೆ? ಎನ್ನುವ ಬಗ್ಗೆ ಹಲವು ಚರ್ಚೆಗಳು ಟಾಲಿವುಡ್‌ನಲ್ಲಿ ಹುಟ್ಟಿಕೊಂಡಿವೆ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ...

ಸಿನಿಮಾಗಳಲ್ಲಿ ನಟ ಸಿಂಬು ಬ್ಯುಸಿ!

ಸಿನಿಮಾಗಳಲ್ಲಿ ನಟ ಸಿಂಬು ಬ್ಯುಸಿ!

ನಟ ಸಿಂಬು ಸದ್ಯ 'ಪತ್ತು ತಲೆ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಇದಾದ ನಂತರ ನಿರ್ದೇಶಕ ಗೋಕುಲ್ ನಿರ್ದೇಶನದ 'ಕೊರೊನಾ ಕುಮಾರ' ಚಿತ್ರದಲ್ಲಿ ಸಿಂಬು ನಟಿಸಲಿದ್ದಾರೆ. ಇದಲ್ಲದೇ ಕೆಲವು ಚಿತ್ರಗಳಲ್ಲಿ ನಟಿಸಲು ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಸಿಂಬು ಹಿಂದೆ ಸೀರಿಯಲ್ ನಟಿ ಶ್ರೀನಿಧಿ!

ಸಿಂಬು ಹಿಂದೆ ಸೀರಿಯಲ್ ನಟಿ ಶ್ರೀನಿಧಿ!

ಜನಪ್ರಿಯ ಧಾರಾವಾಹಿ ನಟಿ ಶ್ರೀನಿಧಿ ಸಿಂಬು ಬೇಕು ಎಂದು ಹೇಳಿ ಸುದ್ದಿ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು ಸಿಂಬು ಬಗ್ಗೆ ಕೇಳಿದಾಗ ಸಿಂಬು ಅವರನ್ನು ಮದುವೆಯಾಗಲು ಸಿದ್ಧ ಎಂದು ಹೇಳಿದ್ದರು. ಈ ಬಗ್ಗೆ ವಿಡಿಯೋ ಕೂಡ ಬಿಡುಗಡೆ ಮಾಡಿದ್ದರು. ಆಗಾಗ ನಟರ ಬಗ್ಗೆ ಟೀಕಿಸುವ ಮೂಲಕ ಶ್ರೀನಿಧಿ ಸುದ್ದಿ ಆಗುತ್ತಾರೆ. ಹಾಗಾಗಿ ಇದನ್ನು ಯಾರು ಗಂಭಿರವಾಗಿ ಪರಿಗಣಿಸಿದಂತೆ ಇಲ್ಲ.

ಸಿಂಬು ಮನೆ ಮುಂದೆ ಶ್ರೀನಿಧಿ ಧರಣಿ!

ಸಿಂಬು ಮನೆ ಮುಂದೆ ಶ್ರೀನಿಧಿ ಧರಣಿ!

ತಮಿಳಿನ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಶ್ರೀನಿಧಿ. ಜೀ ಟಿವಿಯಲ್ಲಿ ಪ್ರಸಾರವಾಗುವ 'ಯಾರಡಿ ನೀ ಮೋಹಿನಿ' ಧಾರಾವಾಹಿಯಲ್ಲಿ ಶ್ರೀನಿಧಿ ಜನನಿ ಹೆಚ್ಚಿನ ಖ್ಯಾತಿ ಪಡೆದಿದ್ದಾರೆ. ಈಕೆ ಇದ್ದಕ್ಕಿದ್ದ ಹಾಗೆ ಮಧ್ಯರಾತ್ರಿ ನಟ ಸಿಂಬು ಮನೆ ಮುಂದೆ ಹೋಗಿ ಗಲಾಟೆ ಮಾಡಿದ್ದಾರೆ. ಸಿಂಬು ನೋಡದೇ ಅಲ್ಲಿಂದ ಹೋಗುವುದಿಲ್ಲ. ನನಗೆ ಸಿಂಬು ಬೇಕು ಎಂದು ಕೂಗಾಡಿದ್ದಾರೆ. ಬಳಿಕ ಸಿಂಬು ಮನೆಯವರು ನಟಿಯನ್ನು ಸಂಭಾಳಿಸಿ ಅಲ್ಲಿಂದ ಕಳುಹಿಸಿದ್ದಾರಂತೆ.

ಶ್ರೀನಿಧಿ ಬಗ್ಗೆ ಮಾತಾಡದ ಸಿಂಬು!

ಶ್ರೀನಿಧಿ ಬಗ್ಗೆ ಮಾತಾಡದ ಸಿಂಬು!

ನಟಿ ಶ್ರೀನಿಧಿಯ ಹೀಗೆ ಮಾಡಲು ಕಾರಣ ಏನು ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಇತ್ತ ಈ ಬಗ್ಗೆ ನಟ ಸಿಂಬು ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶ್ರೀನಿಧಿ ಸಿಂಬು ಮೇಲಿನ ಅಭಿಮಾನಕ್ಕೆ ಹೀಗೆ ಮಾಡಿಲ್ಲ. ಯಾಕೆಂದರೆ ಶ್ರೀನಿಧಿ, ಈ ಹಿಂದೆಯೂ ಸಿಂಬುನಾ ಮದುವೆ ಆಗುವುದಾಗಿ ಹೇಳಿಕೊಂಡಿದ್ದರು.

More from Filmibeat

English summary
Serial Actress Srinidhi Protest Infront Of Simbu House At Midnight To Marry Him, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X