20 ವರ್ಷದ ನಂತರ ಚಿತ್ರರಂಗಕ್ಕೆ ನಟಿ ಶಾಲಿನಿ ಅಜಿತ್ ವಾಪಸ್?

ಮದುವೆ ಆದ್ಮೇಲೆ ಚಿತ್ರರಂಗದಿಂದ ಹಿಂದೆ ಸರಿದಿದ್ದ ನಟಿ ಶಾಲಿನಿ ಅಜಿತ್ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನುವ ಸುದ್ದಿ ಚರ್ಚೆಯಾಗುತ್ತಿದೆ. ಸುಮಾರು 20 ವರ್ಷದ ನಂತರ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ. ಮಣಿರತ್ನಂ ನಿರ್ದೇಶನ ಮಾಡಲಿರುವ ಮೆಗಾ ಚಿತ್ರದಲ್ಲಿ ಶಾಲಿನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಪೊನ್ನಿಯನ್ ಸೆಲ್ವನ್' ಚಿತ್ರದಲ್ಲಿ ಶಾಲಿನಿ ನಟಿಸಲಿದ್ದಾರೆ. ಭಾರತೀಯ ಚಿತ್ರರಂಗದ ಹಲವು ಸ್ಟಾರ್ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಪ್ರಾಜೆಕ್ಟ್‌ಗೆ ಈಗ ಶಾಲಿನಿ ಸರ್ಪ್ರೈಸ್ ಎಂಟ್ರಿಯಾಗಿದ್ದಾರೆ. ಮುಂದೆ ಓದಿ....

ಹೈದರಾಬಾದ್‌ಗೆ ತೆರಳಲಿದ್ದಾರೆ ಶಾಲಿನಿ?

ಹೈದರಾಬಾದ್‌ಗೆ ತೆರಳಲಿದ್ದಾರೆ ಶಾಲಿನಿ?

ಮೊದಲ ಹಂತದಲ್ಲಿ ಚಿತ್ರೀಕರಣ ಮುಗಿಸಿರುವ ಪೊನ್ನಿಯನ್ ಸೆಲ್ವನ್ ಸಿನಿಮಾತಂಡ ಈಗ ಎರಡನೇ ಶೆಡ್ಯೂಲ್ ಆರಂಭಿಸಿದೆ. ಸದ್ಯದಲ್ಲೇ ಅಜಿತ್ ಅವರ ಪತ್ನಿ ಶಾಲಿನಿ ಹೈದರಾಬಾದ್‌ಗೆ ತೆರಳಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸದ್ಯಕ್ಕೆ ಪಾತ್ರದ ಬಗ್ಗೆ ಹೆಚ್ಚು ಮಾಹಿತಿ ಬಹಿರಂಗವಾಗಿಲ್ಲವಾದರೂ ಇದೊಂದು ಪ್ರಮುಖ ಪಾತ್ರ ಎಂದು ಹೇಳಲಾಗಿದೆ.

ಶಾಲಿನಿ ಕೊನೆಯ ಚಿತ್ರ ಯಾವುದು?

ಶಾಲಿನಿ ಕೊನೆಯ ಚಿತ್ರ ಯಾವುದು?

2000ನೇ ಇಸವಿಯಲ್ಲಿ ನಟ ಅಜಿತ್ ಅವರ ಕೈಹಿಡಿದ ಶಾಲಿನಿ ವೈವಾಹಿಕ ಜೀವನ ಆರಂಭಿಸಿದರು. 2001ರಲ್ಲಿ ಬಿಡುಗಡೆಯಾಗಿದ್ದ 'ಪರಿಯಾಧ ವಾರಂ ವೇಂಡುಂ' (Piriyadha Varam Vendum) ಚಿತ್ರದಲ್ಲಿ ಕೊನೆದಾಗಿ ಶಾಲಿನಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ತಮಿಳು ನಟ ಪ್ರಶಾಂತ್ ನಾಯಕರಾಗಿದ್ದರು.

ಶಾಲಿನಿ ಸಿನಿಮಾಗಳು ಕುರಿತು

ಶಾಲಿನಿ ಸಿನಿಮಾಗಳು ಕುರಿತು

ಶಾಲಿನಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು. ತೆಲುಗು, ತಮಿಳು, ಕನ್ನಡ ಹಾಗು ಮಲಯಾಳಂ ಭಾಷೆಯಲ್ಲಿ ಬಾಲನಟಿಯಾಗಿ ಸಿನಿ ಜರ್ನಿ ಆರಂಭಿಸಿದ್ದರು. 1986ರಲ್ಲಿ ರಿಲೀಸ್ ಆಗಿದ್ದ ವಿಷ್ಣುವರ್ಧನ್ ಅವರ ಚಿತ್ರ ''ಈ ಜೀವ ನಿನಗಾಗಿ'' ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪುಟ್ಟ ಬಾಲಕಿ ಇದೇ ಶಾಲಿನಿ. 1997ರಲ್ಲಿ ಮಲಯಾಳಂ ಚಿತ್ರದಲ್ಲಿ ಚೊಚ್ಚಲ ಬಾರಿಗೆ ನಾಯಕಿಯಾಗಿ ನಟಿಸಿದ್ದರು.

ಪೊನ್ನಿಯನ್ ಸೆಲ್ವನ್ ಚಿತ್ರದ ಕುರಿತು

ಪೊನ್ನಿಯನ್ ಸೆಲ್ವನ್ ಚಿತ್ರದ ಕುರಿತು

ಮಣಿರತ್ನಂ ಅವರ ಮೆಗಾಪ್ರಾಜೆಕ್ಟ್‌ನಲ್ಲಿ ನಟಿ ತ್ರಿಷಾ, ಐಶ್ವರ್ಯ ರೈ, ಜಯಂ ರವಿ, ಕಾರ್ತಿ, ಅಮಿತಾಭ್ ಬಚ್ಚನ್, ಚಿಯಾನ್ ವಿಕ್ರಂ, ಶೋಭಿತಾ, ಪ್ರಕಾಶ್ ರಾಜ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

More from Filmibeat

English summary
Actress Shalini ajith set to comeback to film industry after 20 years with Mani Ratnam's ponniyin selvan Movie?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X