twitter
    For Quick Alerts
    ALLOW NOTIFICATIONS  
    For Daily Alerts

    ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ವಿರೋಧ: #ShameOnVijaySethupati ಟ್ರೆಂಡ್

    |

    ಶ್ರೀಲಂಕಾದ ಮಾಜಿ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಬಯೋಪಿಕ್ ಗೆ ತಮಿಳರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. 800 ಟೈಟಲ್ ನಲ್ಲಿ ಈ ಬಯೋಪಿಕ್ ಮೂಡಿಬಂದಿದ್ದು, ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ತಮಿಳು ನಟ ವಿಜಯ್ ಸೇತುಪತಿ ನಟಿಸಿದ್ದಾರೆ. ಇಂದು ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆದ ಬಳಿಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೆ ಮುತ್ತಯ್ಯ ಪಾತ್ರದಲ್ಲಿ ಕಾಣಿಸಿಕೊಂಡ ವಿಜಯ್ ಸೇತುಪತಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.

    ಇದರ ಬೆನ್ನಲ್ಲೇ ಈಗ ಬಯೋಪಿಕ್ ವಿರುದ್ಧ ತಮಿಳರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. 'ಶೇಮ್ ಆನ್ ವಿಜಯ್ ಸೇತುಪತಿ' ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ವಿಜಯ್ ಸೇತುಪತಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ. ಆದರೆ ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ಸೇತುಪತಿ ಕಾಣಿಸಿಕೊಂಡಿರುವುದು ಸಹಿಸಿಕೊಳ್ಳಲು ತಮಿಳರಿಗೆ ಸಾಧ್ಯವಾಗುತ್ತಿಲ್ಲ. ಮುಂದೆ ಓದಿ...

    ಮುತ್ತಯ್ಯ ಮುರಳೀಧರನ್ ಬಯೋಪಿಕ್: '800' ಮೋಷನ್ ಪೋಸ್ಟರ್ ಗೆ ಅಭಿಮಾನಿಗಳು ಫಿದಾಮುತ್ತಯ್ಯ ಮುರಳೀಧರನ್ ಬಯೋಪಿಕ್: '800' ಮೋಷನ್ ಪೋಸ್ಟರ್ ಗೆ ಅಭಿಮಾನಿಗಳು ಫಿದಾ

    ಮುರಳೀಧರನ್ ಬಯೋಪಿಕ್ ಗೆ ವಿರೋಧ ಯಾಕೆ?

    ಮುರಳೀಧರನ್ ಬಯೋಪಿಕ್ ಗೆ ವಿರೋಧ ಯಾಕೆ?

    ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳರ ವಿರುದ್ಧ ಅಲ್ಲಿನ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ಈ ಹಿಂದೆ ಶ್ರೀಲಂಕಾದಲ್ಲಿ ಲಕ್ಷಾಂತರ ತಮಿಳರನ್ನು ಹತ್ಯೆ ಮಾಡಲಾಗಿದೆ. ಅಂದು ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ತಮಿಳರ ಪರ ಮಾತನಾಡಿಲ್ಲ. ಅಂಥ ವ್ಯಕ್ತಿಯ ಬಯೋಪಿಕ್ ಅನ್ನು ತಮಿಳಿನಲ್ಲಿ ನಿರ್ಮಾಣ ಮಾಡಿರುವುದು ಮತ್ತು ತಮಿಳು ನಟ ಸಿಂಹಳೀಯ ಕ್ರಿಕೆಟಿಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

    ವಿಜಯ್ ಸೇತುಪತಿ ಕೈಗೆ ಮತ್ತೊಂದು ಹಿಂದಿ ಸಿನಿಮಾ: ತಮಿಳಿನದ್ದೇ ರೀಮೇಕ್!ವಿಜಯ್ ಸೇತುಪತಿ ಕೈಗೆ ಮತ್ತೊಂದು ಹಿಂದಿ ಸಿನಿಮಾ: ತಮಿಳಿನದ್ದೇ ರೀಮೇಕ್!

    ಪರ-ವಿರೋಧ ಚರ್ಚೆ

    ಪರ-ವಿರೋಧ ಚರ್ಚೆ

    ಇನ್ನು ಕೆಲವರು ವಿಜಯ್ ಸೇತುಪತಿ ಪರವಾಗಿ ಮಾತನಾಡುತ್ತಿದ್ದಾರೆ. 'ಶ್ರೀಲಂಕಾದ ಧ್ವಜ ಇರುವ ಜೆರ್ಸಿಯನ್ನುಹಾಕಿದ್ದಕ್ಕಾಗಿ ವಿಜಯ್ ಸೇತುಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದು ನೋಡಿದ್ರೆ ನಾಚಿಯಾಗುತ್ತೆ. ಅವರು ನಟಿಸುತ್ತಿರುವುದು ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಲ್ಲಿ. ಶ್ರೀಲಂಕಾದ ಜರ್ಸಿಯಲ್ಲಿ ಭಾರತದ ಧ್ವಜವನ್ನು ಹಾಕಲು ಹೇಗೆ ಸಾಧ್ಯವಾಗುತ್ತಾ?. ವಿಜಯ್ ಸೇತುಪತಿ ಕಲಾವಿದನಾಗಿ ಅವರ ಕೆಲಸ ಮಾಡಿದ್ದಾರೆ' ಎಂದು ನೆಟ್ಟಿಗನೊಬ್ಬ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ತಮಿಳರು, ಒಂದು ವೇಳೆ ವಾಸಿಂ ಅಕ್ರಮ್ ಬಯೋಪಿಕ್ ಮಾಡಿ, ಭಾರತದ ನಟ ಅಭಿನಯಿಸಿ, ಪಾಕಿಸ್ತಾನದ ಧ್ವಜ ಹಿಡಿದು ಕುಣಿದರೆ ಅದನ್ನು ಸಿನಿಮಾ ಎಂದು ಸುಮ್ಮನಿರಲೂ ಸಾಧ್ಯವೆ?' ಎಂದು ಪ್ರಶ್ನಿಸಿದ್ದಾರೆ.

    1 ನಿಮಿಷದ 16 ಸೆಕೆಂಡ್ ನ ಮೋಷನ್ ಪೋಸ್ಟರ್

    1 ನಿಮಿಷದ 16 ಸೆಕೆಂಡ್ ನ ಮೋಷನ್ ಪೋಸ್ಟರ್

    1 ನಿಮಿಷ 16 ಸೆಕೆಂಡ್ ನ ಮೋಷನ್ ಪೋಸ್ಟರ್ ಅನ್ನು ಸಿನಿಮಾತಂಡ ಇಂದು ರಿಲೀಸ್ ಮಾಡಿದೆ. ಸಿನಿಮಾದಲ್ಲಿ ಮುತ್ತಯ್ಯ ಮುರಳೀಧರನ್ ಜೀವನದ ಜೊತೆಗೆ ಸಿವಿಲ್ ವಾರ್ ಬಗ್ಗೆಯೂ ತೋರಿಸಲಾಗಿದೆ. 2009ರಲ್ಲಿ ಪಾಕಿಸ್ತಾನ ಲಾಹೋರ್ ನಲ್ಲಿ ಶ್ರೀಲಂಕಾ ಕ್ರಿಕೆಟ್ ಟೀಂ ಮೇಲೆ ನಡೆದ ಉಗ್ರರ ದಾಳಿಯ ಬಗ್ಗೆಯೂ ಬಯೋಪಿಕ್ ನಲ್ಲಿ ನಿರೀಕ್ಷಿಸಬಹುದು.

    Recommended Video

    ಪ್ರಣಿತಾ ಹೆಸರು ಹೇಳಿ 13 ಲಕ್ಷ ಕೊಳ್ಳೆ ಹೊಡೆದ ಖದೀಮರು | Filmibeat Kannada
    ಮುಂದಿನ ವರ್ಷ ರಿಲೀಸ್ ಆಗಲಿದೆ

    ಮುಂದಿನ ವರ್ಷ ರಿಲೀಸ್ ಆಗಲಿದೆ

    ಈ ಸಿನಿಮಾವನ್ನು ಶ್ರೀಲಂಕಾ, ಯುಕೆ, ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮುಂದಿನ ವರ್ಷ 2021ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಇದೀಗ ಈ ಸಿನಿಮಾವನ್ನು ತಮಿಳು ಭಾಷೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ನಂತರ ಈ ಸಿನಿಮಾವನ್ನು ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದೆ, ಬಂಗಾಳಿ ಮತ್ತು ಸಿಂಹಳೀಯ ಭಾಷೆಯಲ್ಲೂ ಡಬ್ ಆಗಲಿದೆ.

    English summary
    Shame on Vijay Sethupati trends in social media. After Vijay Sethupati starrer 800 motion poster released.
    Wednesday, October 14, 2020, 15:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X