For Quick Alerts
  ALLOW NOTIFICATIONS  
  For Daily Alerts

  Shame on You Samantha: ಟ್ರೋಲ್‌ಗೆ ಗುರಿಯಾದ ಸಮಂತಾ: ರಕ್ಷಣೆಗೆ ನಿಂತ ಫ್ಯಾನ್ಸ್

  |

  'ದಿ ಫ್ಯಾಮಿಲಿ ಮ್ಯಾನ್' ಸೀಸನ್ 2 ವೆಬ್ ಸರಣಿಗೆ ತಮಿಳುನಾಡಿನಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಜೂನ್ 4 ರಂದು ಅಮೇಜಾನ್ ಪ್ರೈಮ್‌ನಲ್ಲಿ ಈ ವೆಬ್ ಸಿರೀಸ್ ಬಿಡುಗಡೆಯಾಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ಹೆಚ್ಚಾಗಿದೆ.

  ಅಕ್ಕಿನೇನಿ ಕುಟುಂಬದ ಸೊಸೆ ಸಮಂತಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿನ್ನೆಲೆ ಸಮಂತಾ ವಿರುದ್ಧ ಟೀಕಾಕಾರರು ಶೇಮ್ ಆನ್ ಯೂ ಸಮಂತಾ (Shame on You Samantha) ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ವಿರುದ್ಧ ತೀವ್ರ ವೈಯಕ್ತಿಕವಾಗಿ ದಾಳಿ ನಡೆಯುತ್ತಿದ್ದು, ಫೋಟೋ ಬಳಸಿ ಟ್ರೋಲ್ ಮಾಡಲಾಗುತ್ತಿದೆ. ಮತ್ತೊಂದೆಡೆ ನಟಿ ಪರವಾಗಿ ಅಭಿಮಾನಿಗಳು ರಕ್ಷಣೆಗೆ ನಿಂತಿದ್ದಾರೆ. ಮುಂದೆ ಓದಿ...

  ಸಮಂತಾ ನಟನೆಯ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ನಿಷೇಧಿಸಲು ಒತ್ತಾಯ: ಕಾರಣವೇನು?ಸಮಂತಾ ನಟನೆಯ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸರಣಿ ನಿಷೇಧಿಸಲು ಒತ್ತಾಯ: ಕಾರಣವೇನು?

  ತಮಿಳು ಜನರಿಗೆ ಅವಮಾನ?

  ತಮಿಳು ಜನರಿಗೆ ಅವಮಾನ?

  'ದಿ ಫ್ಯಾಮಿಲಿ ಮ್ಯಾನ್' ಸೀಸನ್ 1 ಬಹಳ ದೊಡ್ಡ ಯಶಸ್ಸು ಕಂಡಿತ್ತು. ಈಗ ಸೀಸನ್ 2 ತಯಾರಾಗಿದ್ದು, ಇದರಲ್ಲಿ ಸಮಂತಾ ಎಲ್‌ಟಿಟಿಇ ಉಗ್ರಳ ಪಾತ್ರ ನಿಭಾಯಿಸಿದ್ದಾರೆ. ಬಾಲಿವುಡ್ ನಟ ಮನೋಜ್ ಬಾಜಪೇಯಿ ಟಿಎಎಸ್‌ಸಿಯ ಏಜೆಂಟ್ ಪಾತ್ರ ನಿರ್ವಹಿಸಿದ್ದಾರೆ. ಈ ಸರಣಿಯಲ್ಲಿ ತಮಿಳು ಜನರಿಗೆ ಅವಮಾನ ಮಾಡಲಾಗಿದೆ, ತಮಿಳಿಗರು ಉಗ್ರರೆಂದು ಬಿಂಬಿಸಲಾಗಿದೆ. ಪಾಕಿಸ್ತಾನದ ಐಎಸ್‌ಐ ಜೊತೆ ನಂಟಿದೆ ಎಂದು ತೋರಿಸಲಾಗಿದೆ. ಹಾಗಾಗಿ, ಇದನ್ನು ನಿಷೇಧಿಸಬೇಕು ಎಂಬ ಕೂಗು ಜೋರಾಗಿದೆ.

  ಸಮಂತಾ ವಿರುದ್ಧ ವೈಯಕ್ತಿಕ ದಾಳಿ

  ಸಮಂತಾ ವಿರುದ್ಧ ವೈಯಕ್ತಿಕ ದಾಳಿ

  ಸಮಂತಾ ಅಕ್ಕಿನೇನಿ ಫೋಟೋ ಬಳಸಿ ಹೀನಾಯವಾಗಿ ಟ್ರೋಲ್ ಮಾಡಲಾಗುತ್ತಿದೆ. ನಮ್ಮ ಬೆಂಬಲ ಎಲ್‌ಟಿಟಿಇಗೆ ಎಂದು ಹೇಳುತ್ತಿರುವ ಒಂದಿಷ್ಟು ಜನರು ಸಮಂತಾ ವಿರುದ್ಧ ಟೀಕೆ ಮುಂದುವರಿಸಿದ್ದಾರೆ. ತಮಿಳು ಜನರಿಗೆ ಅವಮಾನ ಮಾಡುವಂತಹ ಕೆಲಸಕ್ಕೆ ಸಮಂತಾ ಮುಂದಾಗಿದ್ದಾರೆ, ಇದು ನಾಚಿಕೆಗೇಡಿನ ಸಂಗತಿ ಎಂದು ಟ್ರೋಲ್ ಮಾಡ್ತಿದ್ದಾರೆ.

  ಅಕ್ಕಿನೇನಿ ಸೊಸೆ ರಕ್ಷಣೆಗೆ ನಿಂತ ಫ್ಯಾನ್ಸ್

  ಅಕ್ಕಿನೇನಿ ಸೊಸೆ ರಕ್ಷಣೆಗೆ ನಿಂತ ಫ್ಯಾನ್ಸ್

  ಸಮಂತಾ ಮತ್ತು ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ವಿರೋಧಿಸುತ್ತಿರುವ ಮಂದಿಗೆ ಸ್ಯಾಮ್ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ. ಪೂರ್ತಿ ಸಿನಿಮಾ ನೋಡಿದ್ಮೇಲೆ ಮಾತನಾಡಿ, ಬರಿ ಟ್ರೈಲರ್ ನೋಡಿ ಟೀಕಿಸುವುದು ಸರಿಯಲ್ಲ, ನಾವು ಸಮಂತಾ ಪರವಾಗಿದ್ದೇವೆ ಎಂದು ಅಭಿಮಾನಿಗಳು ''Wesupportsamantha'' ವಿ ಸಪೋರ್ಟ್ ಸಮಂತಾ ಹ್ಯಾಷ್‌ಟ್ಯಾಗ್ ವೈರಲ್ ಮಾಡಿದ್ದಾರೆ.

  ನಮ್ಮಂತ ಚಿಕ್ಕ ಆರ್ಟಿಸ್ಟ್ ಗಳನ್ನ ಯಾಕೆ ಟಾರ್ಗೆಟ್ ಮಾಡ್ತೀರಾ? | Chandu Gowda | Filmibeat Kannada
  ಜೂನ್ 4ಕ್ಕೆ ರಿಲೀಸ್?

  ಜೂನ್ 4ಕ್ಕೆ ರಿಲೀಸ್?

  'ದಿ ಫ್ಯಾಮಿಲಿ ಮ್ಯಾನ್' ಚಿತ್ರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಇಷ್ಟೆಲ್ಲಾ ವಿವಾದ ಉಂಟಾಗಿದ್ದರು, ಇದ್ಯಾವುದಕ್ಕು ಸಂಬಂಧವೇ ಇಲ್ಲ ಎನ್ನುವಂತೆ ನಿರ್ಮಾಪಕರು ಮೌನವಹಿಸಿದ್ದಾರೆ. ಹೆಚ್ಚು ಪ್ರಚಾರವನ್ನು ಸಹ ಮಾಡ್ತಿಲ್ಲ. ಈಗಾಗಲೇ ಪ್ರಕಟಿಸಿರುವಂತೆ ಜೂನ್ 4 ರಂದು ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ.

  English summary
  Shame on you Samantha: Actress trolled for The Family Man 2, fans stand for her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X