For Quick Alerts
  ALLOW NOTIFICATIONS  
  For Daily Alerts

  ಕಾದಂಬರಿ ಆಧರಿಸಿ ಶಂಕರ್ 1000 ಕೋಟಿ ಬಜೆಟ್ ಸಿನಿಮಾ: ಹೀರೊ ಯಾರು ಗೊತ್ತಾ?

  |

  ಸೂಪರ್ ಹಿಟ್ ಸಿನಿಮಾಗಳ ಸರದಾರ ಶಂಕರ್ ಸದ್ಯ ಒಟ್ಟೊಟ್ಟಿಗೆ 2 ಮೆಗಾ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಮ್‌ಚರಣ್‌ ತೇಜಾ ನಟನೆ 15ನೇ ಚಿತ್ರಕ್ಕೆ ಶಂಕರ್ ಸಾರಥ್ಯ ವಹಿಸಿಕೊಂಡಿದ್ದಾರೆ. ಇನ್ನು ಕಾರಣಾಂತರಗಳಿಂದ ನಿಂತು ಹೋಗಿದ್ದ 'ಇಂಡಿಯನ್'-2 ಸಿನಿಮಾ ಚಿತ್ರೀಕರಣಕ್ಕೂ ಮತ್ತೆ ಚಾಲನೆ ಸಿಕ್ಕಿದೆ. ಇದೀಗ ಮತ್ತೊಂದು ಬಹುಕೋಟಿ ವೆಚ್ಚದ ಚಿತ್ರಕ್ಕೆ ಶಂಕರ್ ಪ್ಲ್ಯಾನ್ ಮಾಡುತ್ತಿರುವ ಬಗ್ಗೆ ಕಾಲಿವುಡ್‌ನಲ್ಲಿ ಗುಲ್ಲಾಗಿದೆ.

  'ಮುದಲ್ವನ್', 'ಇಂಡಿಯನ್', 'ಎಂದಿರನ್', 'ಶಿವಾಜಿ' ರೀತಿಯ ಬ್ಲಾಕ್‌ ಬಸ್ಟರ್ ಸಿನಿಮಾಗಳನ್ನು ಶಂಕರ್ ನಿರ್ದೇಶಿಸಿ ಗೆದ್ದಿದ್ದಾರೆ. ಆದರೆ ಇತ್ತೀಚೆಗೆ ಶಂಕರ್ ಮ್ಯಾಜಿಕ್ ನಡೀತಿಲ್ಲ. ಮತ್ತೆ ಫಿನಿಕ್ ರೀತಿ ಎದ್ದು ಬರಲು ಸ್ಟಾರ್ ಡೈರೆಕ್ಟರ್ ಕಸರತ್ತು ನಡೆಸ್ತಿದ್ದಾರೆ. ಬಹುಕೋಟಿ ವೆಚ್ಚದ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ 1000 ಕೋಟಿ ರೂ. ಬಜೆಟ್‌ನಲ್ಲಿ ಮತ್ತೊಂದು ದೃಶ್ಯಕ್ಕೆ ಕಾವ್ಯಕ್ಕೆ ತೆರೆಮರೆಯಲ್ಲಿ ಕೆಲಸ ಶುರುವಾಗಿದೆಯಂತೆ. ಒಂದು ಕಾದಂಬರಿ ಆಧರಿಸಿ ಈ ಸಿನಿಮಾ ನಿರ್ದೇಶನ ಮಾಡಲು ಶಂಕರ್ ಮನಸ್ಸು ಮಾಡಿದ್ದಾರೆ.

  ರಾಜಮೌಳಿ- ಪ್ರಶಾಂತ್‌ ನೀಲ್ ಇಬ್ಬರಿಗೆ ಸಮ ಒಬ್ಬ 'ಜಂಟಲ್‌ಮನ್' ಶಂಕರ್!ರಾಜಮೌಳಿ- ಪ್ರಶಾಂತ್‌ ನೀಲ್ ಇಬ್ಬರಿಗೆ ಸಮ ಒಬ್ಬ 'ಜಂಟಲ್‌ಮನ್' ಶಂಕರ್!

  'ಸುರರೈ ಪೊಟ್ರು', 'ಜೈಭೀಮ್' ಸೆನ್ಸೇಷನಲ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೂರ್ಯ ಅಬ್ಬರಿಸುತ್ತಿದ್ದಾರೆ. ಶಂಕರ್ ನಿರ್ದೇಶನದ 1000 ಕೋಟಿ ರೂ. ಬಜೆಟ್‌ ಚಿತ್ರಕ್ಕೂ ನಡಿಪಿನ್ ನಾಯಕನ್ ಸೂರ್ಯ ಹೀರೊ ಅನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಸೂರ್ಯ ನಟನೆಯ 42ನೇ ಸಿನಿಮಾ ಪೋಸ್ಟರ್ ರಿಲೀಸ್ ಆಗಿ ಧೂಳೆಬ್ಬಿಸಿತ್ತು. ಈ ಚಿತ್ರ ಬರೋಬ್ಬರಿ 10 ಭಾಷೆಗಳಲ್ಲಿ 3D ವರ್ಷನ್‌ನಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ. ಇದರ ಬೆನ್ನಲ್ಲೇ ಶಂಕರ್ ನಿರ್ದೇಶನದ ಚಿತ್ರದಲ್ಲಿ ಸೂರ್ಯ ನಟಿಸೋ ಸಾಧ್ಯತೆಯಿದೆ.

  ತಮಿಳು ಸಾಹಿತಿ ಎಸ್. ವೆಂಕಟೇಶನ್ ಬರೆದ 'ವೇಲ್‌ಪರಿ' ಎನ್ನುವ ಐತಿಹಾಸಿಕ ಕಥಾಹಂದರದ ಕಾದಂಬರಿ ಆಧರಿಸಿ ಸಿನಿಮಾ ಮಾಡಲು ಶಂಕರ್ ತಯಾರಿ ನಡೆಸಿದ್ದಾರೆ. ತಮಿಳುನಾಡಿದ ಪರಂಬುನಾಡು ಪ್ರದೇಶವನ್ನು ಆಳಿದ ರಾಜನ ಕಥೆ ಈ ಕಾದಂಬರಿಗೆ ಸ್ಪೂರ್ತಿ. ಸದ್ಯ ಮಣಿರತ್ನಂ 'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಆಧರಿಸಿ ಅದೇ ಟೈಟಲ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದಾರೆ. ಸೆಪ್ಟೆಂಬರ್ 30ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಇದೀಗ ಶಂಕರ್ ಕೂಡ ಅಂತದ್ದೇ ಸಾಹಸಕ್ಕೆ ಕೈ ಹಾಕಿದ್ದು, ರಾಜ ವೇಲ್‌ಪರಿ ಪಾತ್ರದಲ್ಲಿ ಸೂರ್ಯ ನಟಿಸೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಐತಿಹಾಸಿಕ ಕಥೆ ಆಗಿರುವುದರಿಂದ ಅಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಭಾರೀ ಬಜೆಟ್ ಬೇಕು ಎನ್ನಲಾಗುತ್ತಿದೆ.

  Shankar And Suriya Joining Hands For A 1000 Crore Mega Budget Movie

  ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂದಿನ ಚಿತ್ರಕ್ಕೂ ಶಂಕರ್ ಆಕ್ಷನ್ ಕಟ್ ಹೇಳ್ತಾರೆ ಅನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದರ ನಡುವೆ ಶಂಕರ್ ಹಾಗೂ ಸೂರ್ಯ ಕಾಂಬಿನೇಷನ್‌ನಲ್ಲಿ 1000 ಕೋಟಿ ರೂ. ಸಿನಿಮಾ ಸುದ್ದಿ ಕೇಳಿಬರ್ತಿದೆ. ಶಂಕರ್‌ RC15 ಹಾಗೂ ಇಂಡಿಯನ್ ಸಿನಿಮಾಗಳನ್ನು ಕಂಪ್ಲೀಟ್ ಮಾಡಲು ಇನ್ನು ಒಂದು ವರ್ಷ ಬೇಕಾಗಬಹುದು. ಆ ನಂತರ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೋ ಕಾದು ನೋಡಬೇಕು.

  English summary
  Shankar And Suriya Joining Hands For A 1000 Crores Mega Budget Movie. Latest report suggests that Shankar planning to do Movie based on the novel Velpari.
  Sunday, September 11, 2022, 16:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X