For Quick Alerts
  ALLOW NOTIFICATIONS  
  For Daily Alerts

  ಅನ್ನಿಯನ್ ಹಿಂದಿ ವಿವಾದ: ನಿರ್ಮಾಪಕನ ಆರೋಪಕ್ಕೆ ತಿರುಗೇಟು ನೀಡಿದ ಶಂಕರ್

  |

  ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಶಂಕರ್ ಅವರು ಬಾಲಿವುಡ್‌ನಲ್ಲಿ 'ಅನ್ನಿಯನ್' ಸಿನಿಮಾದ ರಿಮೇಕ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದರು. ನಟ ರಣ್ವೀರ್ ಸಿಂಗ್ ಜೊತೆ ಸೇರಿ ಈ ಚಿತ್ರವನ್ನು ತೆರೆಗೆ ತರುವುದಾಗಿ ಹೇಳಿದರು. ಈ ಪ್ರಾಜೆಕ್ಟ್ ಘೋಷಣೆಯಾದ ಮರುದಿನವೇ ಅನ್ನಿಯನ್ ಚಿತ್ರದ ಮೂಲ ನಿರ್ಮಾಪಕ ವಿಶ್ವನಾಥ್ ರವಿಚಂದ್ರನ್ ವಿರೋಧ ವ್ಯಕ್ತಪಡಿಸಿದರು.

  'ಅನ್ನಿಯನ್ ಚಿತ್ರದ ಕಥೆಯ ಹಕ್ಕು ನನ್ನ ಬಳಿ ಇದೆ. ಬರಹಗಾರ ಸುಜಾತ ಅವರಿಗೆ ಪೂರ್ತಿ ಸಂಭಾವನೆ ನೀಡಿ ಹಕ್ಕು ಖರೀದಿಸಿರುವುದು ನಾನು. ನನ್ನ ಅನುಮತಿ ಇಲ್ಲದೇ ಬೇರೆ ಯಾರೂ ಈ ಚಿತ್ರದ ನಕಲು ಮಾಡುವಂತಿಲ್ಲ. ಈ ಸಂಬಂಧ ನಾನು ಲೀಗಲ್ ನೋಟಿಸ್ ಕೊಡ್ತೇನೆ' ಎಂದು ಪ್ರಕಟಣೆ ಬಿಡುಗಡೆ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ನಿರ್ದೇಶಕ ಶಂಕರ್ ''ಅನ್ನಿಯನ್ ಕಥೆ ರಚಿಸಿದ್ದು ನಾನು, ಬೇರೆ ಯಾರ ಒಪ್ಪಿಗೆಯೂ ನನಗೆ ಬೇಕಿಲ್ಲ'' ಎಂದು ತಾವು ಕೂಡ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಮುಂದೆ ಓದಿ...

  ನಿರ್ದೇಶಕ ಶಂಕರ್ ಮತ್ತು ರಣ್ವೀರ್ ಸಿಂಗ್ ಚಿತ್ರಕ್ಕೆ ಆರಂಭದಲ್ಲೇ ವಿಘ್ನನಿರ್ದೇಶಕ ಶಂಕರ್ ಮತ್ತು ರಣ್ವೀರ್ ಸಿಂಗ್ ಚಿತ್ರಕ್ಕೆ ಆರಂಭದಲ್ಲೇ ವಿಘ್ನ

  ಕಥೆ ಬರೆದಿದ್ದು ನಾನು, ಸುಜಾತ ಸಂಭಾಷಣೆ ಮಾತ್ರ ರಚಿಸಿದ್ದರು

  ಕಥೆ ಬರೆದಿದ್ದು ನಾನು, ಸುಜಾತ ಸಂಭಾಷಣೆ ಮಾತ್ರ ರಚಿಸಿದ್ದರು

  ಅನ್ನಿಯನ್ ಸಿನಿಮಾದ ಕಥೆ ಸುಜಾತ ಅವರದ್ದು ಎಂದು ನಿರ್ಮಾಪಕ ವಿಶ್ವನಾಥ್ ರವಿಚಂದ್ರನ್ ಉಲ್ಲೇಖಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಂಕರ್ ''ಆಸ್ಕರ್ ಸಂಸ್ಥೆಯ ವಿ ರವಿಚಂದ್ರನ್ ಅವರು ಹೇಳಿರುವಂತೆ ಅನ್ನಿಯನ್ ಕಥೆ ಸುಜಾತ ಅವರದ್ದಲ್ಲ, ಅವರು ಕೇವಲ ಸಂಭಾಷಣೆ ಮಾತ್ರ ಬರೆದಿದ್ದಾರೆ. ಆ ಚಿತ್ರದ ಕಥೆ-ಚಿತ್ರಕಥೆ ನನ್ನದು. ಈ ಚಿತ್ರದಲ್ಲಿ ಬಹಳ ಜನರು ಕೆಲಸ ಕಷ್ಟಪಟ್ಟಿದ್ದಾರೆ. ಆದರೆ ಕಥೆ ಮಾತ್ರ ನನ್ನದೇ'' ಎಂದು ತಿರುಗೇಟು ನೀಡಿದ್ದಾರೆ.

  ಟೈಟಲ್ ಕ್ರೆಡಿಟ್‌ನಲ್ಲಿ ಗಮನಿಸಬಹುದು

  ಟೈಟಲ್ ಕ್ರೆಡಿಟ್‌ನಲ್ಲಿ ಗಮನಿಸಬಹುದು

  ಅನ್ನಿಯನ್ ಚಿತ್ರದ ಪೂರ್ತಿ ಕಥೆ ನನ್ನದು ಎಂದು ಸ್ಪಷ್ಟನೆ ನೀಡಿರುವ ಶಂಕರ್ ''ಟೈಟಲ್ ಕಾರ್ಡ್‌ನಲ್ಲಿ ಕಥೆ-ಚಿತ್ರಕಥೆ-ನಿರ್ದೇಶಕ ಶಂಕರ್ ಎಂದು ಬರುತ್ತದೆ. ಸುಜಾತ ಅವರು ಕೇವಲ ಸಂಭಾಷಣೆ ಮಾತ್ರ ಮಾಡಿರುವುದು. ಅವರು ಮಾಡಿದ ಕೆಲಸಗಳಿಗೆ ತಕ್ಕ ಗೌರವ ಕೊಡಲಾಗಿದೆ. ಚಿತ್ರದ ಇತರೆ ಯಾವುದೇ ಕೆಲಸಗಳಲ್ಲಿಯೂ ಅವರ ಪಾತ್ರವಿಲ್ಲ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

  ಬೇರೆ ಕಥೆ ರಚಿಸುವ ಹಕ್ಕು ನನಗಿದೆ

  ಬೇರೆ ಕಥೆ ರಚಿಸುವ ಹಕ್ಕು ನನಗಿದೆ

  ''ಅನ್ನಿಯನ್ ಸಿನಿಮಾ ಆಧರಿಸಿ ಇನ್ನೊಂದು ಕಥೆ ರಚಿಸುವ ಹಕ್ಕು ನನಗಿದೆ. ಅದಕ್ಕೆ ವಿರೋಧ ವ್ಯಕ್ತಪಡಿಸುವುದಕ್ಕೆ ಯಾವುದೇ ಅಧಿಕಾರ ಇಲ್ಲ. ಅನ್ನಿಯನ್ ರಿಮೇಕ್ ಮಾಡುವ ಹಕ್ಕು ನಿಮಗೆ ಅಥವಾ ನಿಮ್ಮ ಘಟಕಕ್ಕೆ ಇಲ್ಲ. ಏಕೆಂದರೆ ಹಕ್ಕುಗಳನ್ನು ನಿಮಗೆ ಲಿಖಿತವಾಗಿ ನೀಡಿಲ್ಲ. ಸ್ಕ್ರಿಪ್ಟ್ ನಿಮ್ಮೊಂದಿಗೆ ಇದೆ ಎಂದು ಪ್ರತಿಪಾದಿಸಲು ಯಾವುದೇ ಆಧಾರಗಳಿಲ್ಲ'' ಎಂದು ಉತ್ತರಿಸಿದ್ದಾರೆ.

  ಬಿಗ್ ಬಾಸ್ ನಿಂದ ಹೊರ ಬಂದ ಕಿಚ್ಚ ಸುದೀಪ್..? | Filmibeat Kannada
  2022ರಲ್ಲಿ ಹಿಂದಿಯಲ್ಲಿ ಅನ್ನಿಯನ್ ಆರಂಭ

  2022ರಲ್ಲಿ ಹಿಂದಿಯಲ್ಲಿ ಅನ್ನಿಯನ್ ಆರಂಭ

  2005ರಲ್ಲಿ ಅನ್ನಿಯನ್ ಸಿನಿಮಾ ತೆರೆಕಂಡಿತ್ತು. ಶಂಕರ್ ನಿರ್ದೇಶಿಸಿದ್ದ ಈ ಚಿತ್ರವನ್ನು ವಿಶ್ವನಾಥ್ ರವಿಚಂದ್ರನ್ (ಆಸ್ಕರ್ ರವಿಚಂದ್ರನ್) ನಿರ್ಮಾಣ ಮಾಡಿದ್ದರು. ಮೂಲ ಚಿತ್ರದಲ್ಲಿ ವಿಕ್ರಂ ನಟಿಸಿದ್ದರು. ಸೈಕೋಲಾಜಿಕಲ್ ಆಕ್ಷನ್ ಥ್ರಿಲ್ಲರ್ ಕಥೆಯಲ್ಲಿ ಅಂಬಿ, ರೆಮೋ, ಅನ್ನಿಯನ್ ಎಂಬ ಮೂರು ವಿಭಿನ್ನ ಪಾತ್ರಗಳನ್ನು ವಿಕ್ರಂ ನಿರ್ವಹಿಸಿದ್ದರು. ಈಗ ಇದೇ ಚಿತ್ರದ ಹಿಂದಿ ಅವತರಣಿಕೆ 2022ರಲ್ಲಿ ಆರಂಭವಾಗಲಿದೆ.

  English summary
  South Indian Director Shankar react to Viswanathan Ravichandran claims about Anniyan Hindi remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X