For Quick Alerts
  ALLOW NOTIFICATIONS  
  For Daily Alerts

  ತಮಿಳು ಸ್ಟಾರ್ ನಟನ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಲಿದ್ದಾರೆ ಶಾರುಖ್ ಖಾನ್

  |

  ಬಾಲಿವುಡ್ ಬಾದ್‌ಶಾ, ವಿಶ್ವದೆಲ್ಲೆಡೆ ಅಭಿಮಾನಿಗಳನ್ನು ಹೊಂದಿರುವ ನಟ ಶಾರುಖ್ ಖಾನ್ ಹಿಂದಿ ಸಿನಿಮಾಗಳಲ್ಲಿ ಆಗಾಗ್ಗೆ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಶಾರುಖ್ ಕಾಣಿಸಿಕೊಂಡಿರುವುದು ಬಹಳ ಕಡಿಮೆ.

  ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ, ಜೂಹಿ ಚಾವ್ಲಾ, ನವಾಜುದ್ಧೀನ್ ಸಿದ್ಧಿಕಿ ಸೇರಿ ಬಾಲಿವುಡ್‌ನ ಹಲವು ಪ್ರಮುಖ ನಟ-ನಟಿಯರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಬಾಲಿವುಡ್‌ನ ಮೂವರು ಖಾನ್‌ಗಳು ಅದೇಕೋ ದಕ್ಷಿಣ ಭಾರತ ಸಿನಿಮಾ ರಂಗದಿಂದ ದೂರವೇ ಉಳಿದಿದ್ದಾರೆ.

  ತಮಿಳು, ಹಿಂದಿ ಎರಡರಲ್ಲೂ ಏಕಕಾಲದಲ್ಲಿ ನಿರ್ಮಾಣಗೊಂಡಿದ್ದ 'ಹೇ ರಾಮ್' ಸಿನಿಮಾದಲ್ಲಿ ಮಾತ್ರವೇ ಶಾರುಖ್ ಖಾನ್ ನಟಿಸಿದ್ದಾರೆ. ಈ ಸಿನಿಮಾವನ್ನು ಕಮಲ್ ಹಾಸನ್ ನಿರ್ದೇಶನ ಮಾಡಿದ್ದರು. ಇದೀಗ 21 ವರ್ಷದ ಬಳಿಕ ತಮಿಳು ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಶಾರುಖ್.

  'ಹೇರಾಮ್' ಸಿನಿಮಾದಲ್ಲಿ ನಟಿಸಿದ್ದ ಶಾರುಖ್

  'ಹೇರಾಮ್' ಸಿನಿಮಾದಲ್ಲಿ ನಟಿಸಿದ್ದ ಶಾರುಖ್

  ಹೌದು, 'ಹೇ ರಾಮ್' ಬಳಿಕ ಮತ್ತೆ ಶಾರುಖ್ ಖಾನ್ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅತಿಥಿ ಪಾತ್ರದಲ್ಲಿ ಮಾತ್ರ. ತಮಿಳಿನ ಖ್ಯಾತ ನಟ ವಿಜಯ್ ನಟನೆಯ ಮುಂದಿನ ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  'ಬೀಸ್ಟ್' ಸಿನಿಮಾದಲ್ಲಿ ಶಾರುಖ್ ಖಾನ್!

  'ಬೀಸ್ಟ್' ಸಿನಿಮಾದಲ್ಲಿ ಶಾರುಖ್ ಖಾನ್!

  ಪೂಜಾ ಹೆಗ್ಡೆ ನಾಯಕಿಯಾಗಿ, ವಿಜಯ್ ನಾಯಕನಾಗಿ ನಟಿಸುತ್ತಿರುವ 'ಬೀಸ್ಟ್' ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕಿಕೊಂಡು ಖುಷಿ ಹಂಚಿಕೊಳ್ಳುತ್ತಿದ್ದಾರೆ.

  ಶಾರುಖ್ ಸಿನಿಮಾದಲ್ಲಿ ವಿಜಯ್ ಅತಿಥಿ ಪಾತ್ರ

  ಶಾರುಖ್ ಸಿನಿಮಾದಲ್ಲಿ ವಿಜಯ್ ಅತಿಥಿ ಪಾತ್ರ

  ಅದರ ಜೊತೆಗೆ, ಶಾರುಖ್ ಖಾನ್, ತಮಿಳಿನ ನಿರ್ದೇಶಕ ಅಟ್ಟಿಲಿ ನಿರ್ದೇಶಿಸುತ್ತಿರುವ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದು ಆ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿ ನಟಿಸಲಿದ್ದಾರೆ. ಆ ಸಿನಿಮಾದಲ್ಲಿ ನಟ ವಿಜಯ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಶಾರುಖ್ ನಟಿಸಿದ್ದ ಹಿಂದಿ ಸಿನಿಮಾ 'ರಾ ಒನ್‌' ನಲ್ಲಿ ರಜನೀಕಾಂತ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

  ನಿಖಿಲ್ ಕುಮಾರಸ್ವಾಮಿ ಮನೇಲಿ ಸಂತೋಷ- ಸಂಭ್ರಮ ! | Oneindia Kannada
  'ಪಠಾಣ್' ಸಿನಿಮಾದಲ್ಲಿ ನಟಿಸುತ್ತಿರುವ ಶಾರುಖ್

  'ಪಠಾಣ್' ಸಿನಿಮಾದಲ್ಲಿ ನಟಿಸುತ್ತಿರುವ ಶಾರುಖ್

  ವಿಜಯ್ ನಟನೆಯ 'ಬೀಸ್ಟ್' ಸಿನಿಮಾದ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡಿದ್ದಾರೆ. ಇನ್ನು ಶಾರುಖ್ ಖಾನ್ ಪ್ರಸ್ತುತ 'ಪಠಾಣ್' ಸಿನಿಮಾದಲ್ಲಿ ನಟಿಸುತ್ತಿದ್ದು ಅದರ ಬಳಿಕ ತಮಿಳಿನ ಅಟ್ಟಿಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ನಂತರ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.

  English summary
  Sharukh Khan may do a cameo role in Vijay's next movie Beast. And Vijay also doing cameo in Sharukh-Atlee's Hindi movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X