ಮಗಳು ಐಶ್ವರ್ಯಾ ಪರ ಗಟ್ಟಿಯಾಗಿ ದನಿ ಎತ್ತಿದ ಸೂಪರ್ ಸ್ಟಾರ್ ರಜನಿಕಾಂತ್! ಆಗಿದ್ದೇನು?

ತಂದೆಯ ವಿರುದ್ಧವಾಗಿ ಯಾರಾದರೂ ಮಾತನಾಡಿದರೇ, ತಪ್ಪು ತಪ್ಪಾಗಿ ಬಿಂಬಿಸಲು ಹೊರಟರೇ ಮಕ್ಕಳು ಸುಮ್ಮನೆ ಇರುವುದಿಲ್ಲ. ಹಾಗೆ ಮಕ್ಕಳ ಬಗ್ಗೆ ಕೆಟ್ಟ ಸುದ್ದಿ ಹಬ್ಬಿಸುವವರ ವಿರುದ್ಧ ತಂದೆ ಗಟ್ಟಿಯಾಗಿ ನಿಲ್ಲುತ್ತಾರೆ. ಇದೇ ಈಗ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅವರ ಮಗಳು, ನಿರ್ದೇಶಕಿ ಐಶ್ವರ್ಯಾ ವಿಷಯದಲ್ಲಿ ನಡೆಯುತ್ತಿದೆ.

ರಜನಿಕಂತ್ ಅವರ ಮುಂದಿನ ಸಿನಿಮಾ 'ಲಾಲ್ ಸಲಾಮ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಐಶ್ವರ್ಯಾ ತಮ್ಮ ತಂದೆ ರಜನಿಕಾಂತ್ ಅವರು ಟ್ವಿಟರ್ ಮತ್ತು ಇತರ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಅನೇಕರು ಹೇಳಿಕೊಳ್ಳುವಂತಹ ಸಂಘಿ ಅಲ್ಲ ಎಂದು ಹೇಳಿದರು. ಆತ ಸಂಘಿಯಾಗಿದ್ದರೆ ಲಾಲ್ ಸಲಾಮ್ ನಂತಹ ಸಿನಿಮಾ ಮಾಡುತ್ತಿರಲಿಲ್ಲ ಎಂದಿದ್ದಾರು. ಇದರಲ್ಲಿ ಸಂಘಿ ಪದ ಸಕತ್ ವಿವಾದ ಸೃಷ್ಟಿಸಿದೆ.

 She never said Sanghi was a bad word: Superstar Rajinikanth defends daughter Aishwarya

ಮಗಳ ಪರ ನಿಂತ ಸೂಪರ್‌ಸ್ಟಾರ್ ರಜನಿಕಾಂತ್

ಇನ್ನು, ಮಗಳು ಐಶ್ವರ್ಯಾ ಅವರನ್ನು ಟ್ರೋಲ್ ಮಾಡಿದ ಬೆನ್ನಲ್ಲೇ ಸೂಪರ್‌ಸ್ಟಾರ್ ರಜನಿಕಾಂತ್, ಜನವರಿ 29 ರಂದು, ತಮ್ಮ ಮಗಳು ಐಶ್ವರ್ಯಾ ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕರು 'ಸಂಘಿ' ಎಂದು ಬ್ರಾಂಡ್ ಮಾಡಿದ ಬಗ್ಗೆ ಮಾತನಾಡಿದ ಅವರು, "ಸಂಘಿ ಪದ ಕೆಟ್ಟ ಪದ ಎಂದು ಐಶ್ವರ್ಯ ಯಾವತ್ತೂ ಹೇಳಿಲ್ಲ" ಎಂದು ಹೇಳಿದ್ದಾರೆ.

ತಮ್ಮ ಮಗಳು ಐಶ್ವರ್ಯಾ ಅವರನ್ನು ಸಮರ್ಥಿಸಿಕೊಂಡಿರುವ ನಟ ರಜನಿಕಾಂತ್, "ನನ್ನ ಮಗಳು ಎಂದಿಗೂ ಸಂಘಿ [ಪದ] ಕೆಟ್ಟ ಪದ ಎಂದು ಹೇಳಿಲ್ಲ. ತನ್ನ ತಂದೆ ಆಧ್ಯಾತ್ಮಿಕತೆಯಲ್ಲಿ ಇರುವಾಗ ಅವರನ್ನು ಏಕೆ ಸಂಘಿ ಎಂದು ಏಕೆ ಬ್ರಾಂಡ್ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ" ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

 She never said Sanghi was a bad word: Superstar Rajinikanth defends daughter Aishwarya

ಐಶ್ವರ್ಯ ರಜಿನಿಕಾಂತ್ ಹೇಳಿದ್ದೇನು?

ಜನವರಿ 26 ರಂದು ಚೆನ್ನೈನ ಖಾಸಗಿ ಕಾಲೇಜಿನಲ್ಲಿ 'ಲಾಲ್ ಸಲಾಮ್' ಆಡಿಯೋ ಲಾಂಚ್ ನಡೆಯಿತು. ರಜನಿಕಾಂತ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಐಶ್ವರ್ಯಾ, "ನಾನು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಿಂದ ದೂರ ಇರುತ್ತೇನೆ. ಆದರೆ ನನ್ನ ತಂಡವು ಆಗಾಗ ಏನಾಗುತ್ತಿದೆ ಎಂದು ಹೇಳುತ್ತದೆ. ಕೆಲವು ಪೋಸ್ಟ್‌ಗಳನ್ನು ತೋರಿಸುತ್ತಲೇ ಇರುತ್ತಾರೆ. ಅವುಗಳನ್ನು ನೋಡಿ ನನಗೆ ಕೋಪ ಬರುತ್ತಿತ್ತು. ನಾವೂ ಮನುಷ್ಯರು.ಇತ್ತೀಚಿನ ದಿನಗಳಲ್ಲಿ ಅನೇಕರು ನನ್ನ ತಂದೆಯನ್ನು ಸಂಘಿ ಎಂದು ಕರೆಯುತ್ತಾರೆ. ಅದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ. ಆಗ ನಾನು ಸಂಘಿ ಎಂದರೆ ಏನು ಎಂದು ಕೇಳಿದೆ ಮತ್ತು ಅವರು ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸುವವರನ್ನು ಸಂಘಿ ಎಂದು ಕರೆಯುತ್ತಾರೆ ಎಂದು ಹೇಳಿದರು. ನಾನು ಇಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ, ರಜನಿಕಾಂತ್ ಅವರು ಸಂಘಿ ಅಲ್ಲ. ಅವರು ಅವರಾಗಿಯೇ ಇಇದ್ದಾರೆ. ಸಂಘಿ ಅಗಿದ್ದರೆ, ಅವರು 'ಲಾಲ್ ಸಲಾಂ' ಚಿತ್ರ ಮಾಡುತ್ತಿರಲಿಲ್ಲ" ಎಂದಿದ್ದರು. ಅವರ ಮಾತು ಕೇಳಿ ರಜನಿಕಾಂತ್ ಕಣ್ಣೀರು ಹಾಕಿದರು.

'ಲಾಲ್ ಸಲಾಮ್'

'ಲಾಲ್ ಸಲಾಮ್' ಒಂದು ಕ್ರೀಡಾ ಸಿನಿಮಾವಾಗಿದ್ದು, ಇದರಲ್ಲಿ ರಜನಿಕಾಂತ್ ಮೊಯ್ದೀನ್ ಭಾಯ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ವಿಕ್ರಾಂತ್ ಮತ್ತು ವಿಷ್ಣು ವಿಶಾಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಐಶ್ವರ್ಯಾ ರಜನಿಕಾಂತ್ ಅವರು 'ಲಾಲ್ ಸಲಾಂ' ಚಿತ್ರದ ಮೂಲಕ ನಿರ್ದೇಶಕಿಯಾಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸಿನಿಮಾ ಫೆಬ್ರವರಿ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Rajinikanth defends daughter Aishwarya in Sanghi word controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X