ಮತ್ತೊಂದು ತಮಿಳು ಸಿನಿಮಾದಲ್ಲಿ ಶಿವಣ್ಣ ಅತಿಥಿ ಪಾತ್ರ!

ನಟ ಶಿವರಾಜ್ ಕುಮಾರ್‌, ವಯಸ್ಸು 60 ಆಗಿದ್ದರೂ ಈಗಲೂ ಕನ್ನಡ ಚಿತ್ರರಂಗದ ಅತಿ ಹೆಚ್ಚು ಬ್ಯುಸಿಯಾಗಿರುವ ನಾಯಕ ನಟ. ಈಗಲೂ ಕೈತುಂಬಾ ಸಿನಿಮಾಗಳಿವೆ. ಒಂದರ ಹಿಂದೊಂದು ಬಿಡುಗಡೆ ಆಗುತ್ತಲೇ ಇವೆ.

ಕನ್ನಡದಲ್ಲಿಯೇ ಐದಾರು ಸಿನಿಮಾಗಳು ಶಿವರಾಜ್ ಕುಮಾರ್ ಕೈಯಲ್ಲಿವೆ, ಇದರ ಜೊತೆಗೆ ಪರಭಾಷೆಯಿಂದಲೂ ಶಿವಣ್ಣನಿಗೆ ಅವಕಾಶಗಳು ಅರಸಿ ಬರುತ್ತಲೇ ಇರುತ್ತವೆ. ಆದರೆ ಶಿವಣ್ಣ ಪರಭಾಷೆಯಲ್ಲಿ ನಾಯಕ ನಟನ ಪಾತ್ರಗಳನ್ನು ಅಥವಾ ಪೂರ್ಣ ಪ್ರಮಾಣದ ಸಿನಿಮಾಗಳನ್ನು ಮಾಡುವುದಿಲ್ಲ, ಬದಲಿಗೆ ಅವರು ತಮ್ಮ ಗೆಳೆಯರ ಮೇಲೆ ಪ್ರೀತಿಯಿಂದಾಗಿ ಕೇವಲ ಅತಿಥಿ ಪಾತ್ರಗಳಲ್ಲಿ ಅಷ್ಟೆ ನಟಿಸುತ್ತಾರೆ.

ಈ ಹಿಂದೆ ತೆಲುಗಿನ 'ಗೌತಮಿ ಪುತ್ರ ಶಾತಕರ್ಣಿ' ಸಿನಿಮಾದಲ್ಲಿ ಬಾಲಕೃಷ್ಣ ಜೊತೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಿವರಾಜ್ ಕುಮಾರ್. ಇತ್ತೀಚೆಗೆ ಸೂಪರ್ ಸ್ಟಾರ್ ನಟ ರಜನೀಕಾಂತ್‌ರ 'ಜೈಲರ್' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಇದೀಗ ಮತ್ತೊಂದು ತಮಿಳು ಸಿನಿಮಾದಲ್ಲಿ ಶಿವಣ್ಣ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಧನುಶ್ ಜೊತೆ ಶಿವಣ್ಣ ಸಿನಿಮಾ

ಧನುಶ್ ಜೊತೆ ಶಿವಣ್ಣ ಸಿನಿಮಾ

ತಮಿಳಿನ ಸ್ಟಾರ್ ನಟ ಧನುಶ್‌ರ ಹೊಸ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಧನುಶ್‌, 'ಕ್ಯಾಪ್ಟನ್ ಮಿಲ್ಲರ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧನುಶ್ ಹಾಗೂ ರಜನೀಕಾಂತ್ ಮೇಲಿನ ಪ್ರೇಮಕ್ಕಾಗಿ ಮಾತ್ರವೇ ಶಿವರಾಜ್ ಕುಮಾರ್ ಇವರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಬಗ್ಗೆ ಮಾತುಕತೆ

ಸಿನಿಮಾ ಬಗ್ಗೆ ಮಾತುಕತೆ

ಇಂಗ್ಲೀಷ್ ಪತ್ರಿಕೆಯೊಂದರ ಜೊತೆ ಈ ಬಗ್ಗೆ ಮಾತನಾಡಿರುವ ನಟ ಧನುಶ್, ''ನಾನು ಧನುಶ್‌ರ ದೊಡ್ಡ ಅಭಿಮಾನಿ. ಅವರ ಎಲ್ಲ ಸಿನಿಮಾಗಳನ್ನೂ ನಾನು ನೋಡಿದ್ದೇನೆ. ನನ್ನನ್ನು ನಾನು ಧನುಶ್ ಅವರಲ್ಲಿ ಕಾಣುತ್ತೇನೆ. ಅವರ ವ್ಯಕ್ತಿತ್ವ ಸಹ ನನ್ನೊಂದಿಗೆ ಹೋಲುತ್ತದೆ. ಅವರು ನನ್ನಂತೆಯೇ ಇದ್ದಾರೆ ಅಥವಾ ನಾನು ಅವರಂತೆ ಇದ್ದೇನೆ. ಅವರೊಟ್ಟಿಗೆ ನಟಿಸುವ ಅವಕಾಶವನ್ನು ಕೈಬಿಡುವುದು ನನಗೆ ಇಷ್ಟವಿರಲಿಲ್ಲ ಹಾಗಾಗಿ ಸಿನಿಮಾವನ್ನು ಒಪ್ಪಿಕೊಂಡೆ'' ಎಂದಿದ್ದಾರೆ.

ಸಿನಿಮಾದ ಕತೆ ಇಷ್ಟವಾಯಿತು: ಶಿವಣ್ಣ

ಸಿನಿಮಾದ ಕತೆ ಇಷ್ಟವಾಯಿತು: ಶಿವಣ್ಣ

'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ನಿರ್ದೆಶಕ ಅರುಣ್, ಬೆಂಗಳೂರಿಗೆ ಬಂದು ಇಡೀ ಕತೆಯನ್ನು ಕೇವಲ ನಲವತ್ತು ನಿಮಿಷಗಳಲ್ಲಿ ಹೇಳಿ ಮುಗಿಸಿದರು. ಅವರು ಕತೆ ಹೇಳಿದ ರೀತಿಯೇ ನನಗೆ ಇಷ್ಟವಾಯಿತು. ಅವರು ಕತೆ ಹೇಳುವಾಗಲೇ ನನ್ನ ತಲೆಯಲ್ಲಿ ದೃಶ್ಯ ಸಹಿತ ಸಿನಿಮಾ ಓಡುತ್ತಿತ್ತು. ಕತೆಯಲ್ಲಿನ ಭಾವುಕತೆ ನನಗೆ ಟಚ್ ಆಯಿತು. ಈಗಲೇ ನನ್ನ ಪಾತ್ರದ ಬಗ್ಗೆ ಹೆಚ್ಚು ಮಾತನಾಡಲಾರೆ, ಆದರೆ ನನ್ನ ಹಾಗೂ ಧನುಶ್ ಪಾತ್ರವನ್ನು ಪ್ರೇಕ್ಷಕರು ಖಂಡಿತ ಇಷ್ಟಪಡಲಿದ್ದಾರೆ'' ಎಂದಿದ್ದಾರೆ ಶಿವಣ್ಣ.

ಶಿವಣ್ಣನ ಕೈಲಿವೆ ಹಲವು ಸಿನಿಮಾ

ಶಿವಣ್ಣನ ಕೈಲಿವೆ ಹಲವು ಸಿನಿಮಾ

ಧನುಶ್ ಹಾಗೂ ಶಿವಣ್ಣ ನಡುವೆ ಒಳ್ಳೆಯ ಬಾಂಧವ್ಯ ಇದೆ. ಶಿವಣ್ಣ ನಟಿಸಿದ್ದ 'ವಜ್ರಕಾಯ' ಸಿನಿಮಾಕ್ಕಾಗಿ ಧನುಶ್ ಹಾಡೊಂದನ್ನು ಹಾಡಿದ್ದರು. ಶಿವಣ್ಣ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ನೀ ಸಿಗೊವರೆಗೆ' ಸಿನಿಮಾ ಬಿಡುಗಡೆ ಆಗಬೇಕಿದೆ. ಬಳಿಕ ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಶಿವಣ್ಣ ನಟಿಸಲಿದ್ದಾರೆ. 'ಘೋಸ್ಟ್' ಹೆಸರಿನ ಸಿನಿಮಾ ಇತ್ತೀಚೆಗೆ ಸೆಟ್ ಏರಿದೆ. ತಮ್ಮದೇ ನಿರ್ಮಾಣ ಸಂಸ್ಥೆಯ ಹೊಸ ಸಿನಿಮಾ 'ವೇದ' ಸಹ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

More from Filmibeat

English summary
Shiva Rajkumar acting along with Tamil star Dhanush in Captain Miller movie. He also acting in Jailer Tamil movie along with Rajinikanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X