ತನ್ನ ಎರಡನೇ ತಮಿಳು ಚಿತ್ರ ಘೋಷಿಸಿದ ಶಿವಣ್ಣ; 'ಕ್ಯಾಪ್ಟನ್ ಮಿಲ್ಲರ್' ಪ್ರಪಂಚಕ್ಕೆ ಸ್ವಾಗತ ಎಂದ ಧನುಷ್

ಚಂದನವನದ ಸೆಂಚುರಿ ಸ್ಟಾರ್‌, ಕಿಂಗ್ ಶಿವ ರಾಜ್ ಕುಮಾರ್ ಈಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕಾಲಿವುಡ್ ಚಿತ್ರರಂಗದ ಪ್ರತಿಭಾವಂತ ನಟ ಧನುಷ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಶಿವ ರಾಜ್ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಶಿವಣ್ಣ ಧನುಷ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಈ ಸುದ್ದಿ ಇದೀಗ ಅಧಿಕೃತವಾಗಿದ್ದು ಶಿವಣ್ಣ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸುವುದು ಖಾತರಿಯಾಗಿದೆ.

Shiva Rajkumars second Tamil film Captain Miller announced

ಸ್ವತಃ ಶಿವ ರಾಜ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ಪೋಸ್ಟ್‌ ಮಾಡಿದ್ದು ಪ್ರತಿಭಾವಂತ ನಟ ಧನುಷ್ ಹಾಗೂ ಸತ್ಯಜ್ಯೋತಿ ಫಿಲ್ಮ್ಸ್ ರೀತಿಯ ಪ್ರತಿಷ್ಠಿತ ಬ್ಯಾನರ್ ಅಡಿಯಲ್ಲಿ ನಟಿಸಲು ಸಂತಸವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಅತ್ತ ಧನುಷ್ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಕ್ಯಾಪ್ಟನ್ ಮಿಲ್ಲರ್ ಪ್ರಪಂಚಕ್ಕೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.

ಇದು ಶಿವಣ್ಣ ನಟಿಸಲಿರುವ ಎರಡನೇ ತಮಿಳು ಚಿತ್ರವಾಗಿದ್ದು, ಇದಕ್ಕೂ ಮುನ್ನ ರಜನಿಕಾಂತ್ ನಟನೆಯ ಜೈಲರ್ ಚಿತ್ರದಲ್ಲಿ ಪ್ರಮುಖ‌ ಪಾತ್ರ ನಿರ್ವಹಿಸುತ್ತಿರುವುದಾಗಿ ಘೋಷಣೆಯಾಗಿತ್ತು. ಸದ್ಯ ಜೈಲರ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿರುವ ಶಿವಣ್ಣ ಕ್ಯಾಪ್ಟನ್ ಮಿಲ್ಲರ್ ಚಿತ್ರೀಕರಣದಲ್ಲಿ ಶೀಘ್ರದಲ್ಲೇ ಭಾಗವಹಿಸಲಿದ್ದಾರೆ‌. ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೆ ಅರುಣ್ ಮಾದೇಶ್ವರನ್ ನಿರ್ದೇಶನವಿದ್ದು, ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ.

More from Filmibeat

English summary
Shiva Rajkumar's second Tamil film Captain Miller announced. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X