Shivarajkumar: ತಮಿಳಿನ ಈ ಸ್ಟಾರ್ ನಟ ಕ್ಯೂಟ್, ಈತನ ಜತೆ ನಟಿಸುವಾಸೆ ಎಂದ ಶಿವಣ್ಣ!

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಆಫ್‌ಲೈನ್‌ನಲ್ಲಿ ಎಲ್ಲೇ ನೋಡಿದರೂ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಹಾಗೂ ಸುದ್ದಿ ಜೈಲರ್ ಚಿತ್ರದ್ದೇ. ಹೌದು, ಆಗಸ್ಟ್ 10ರಂದು ಬಿಡುಗಡೆಗೊಂಡ ಜೈಲರ್ ಸಿನಿಮಾ ಸೌತ್ ಇಂಡಿಯಾ ಪೂರ್ತಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ಹಿಂದೆ ಅಣ್ಣಾತ್ತೆ ಸಿನಿಮಾ ಮಾಡುವ ಮೂಲಕ ಸೋತಿದ್ದ ರಜನಿಕಾಂತ್ ಹಾಗೂ ಕಳೆದ ವರ್ಷ ವಿಜಯ್‌ಗೆ ಬೀಸ್ಟ್ ಚಿತ್ರವನ್ನು ನಿರ್ದೇಶಿಸಿ ಕೈ ಸುಟ್ಟುಕೊಂಡಿದ್ದ ನಿರ್ದೇಶಕ ನೆಲ್ಸನ್ ಕುಮಾರ್ ಜೈಲರ್ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ.

ಜೈಲರ್ ಚಿತ್ರ ಬಿಡುಗಡೆಯ ದಿನದ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟಾಕ್ ಪಡೆದುಕೊಳ್ಳಲು ಆರಂಭಿಸಿ ಗೆಲುವನ್ನು ಪಡೆದುಕೊಂಡಿತು. ಸದ್ಯ ಜೈಲರ್ ನಿನ್ನೆಗೆ ( ಆಗಸ್ಟ್ 18 ) 9 ದಿನಗಳ ಪ್ರದರ್ಶನವನ್ನು ಪೂರೈಸಿದ್ದು, ಒಟ್ಟಾರೆ 450 ಕೋಟಿ ಗಳಿಕೆ ಮಾಡಿ ಅಬ್ಬರಿಸಿದೆ. ಕೇವಲ ತಮಿಳು ನಾಡು ಮಾತ್ರವಲ್ಲದೇ ಕರ್ನಾಟಕ, ಕೇರಳ, ತೆಲುಗು ರಾಜ್ಯಗಳು ಹಾಗೂ ಹಿಂದಿ ಭಾಷೆಗಳಲ್ಲಿಯೂ ಸಹ ಅಬ್ಬರದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿರುವ ಜೈಲರ್ ಚಿತ್ರದಲ್ಲಿ ವಿವಿಧ ಕಲಾವಿದರ ಪಾತ್ರಗಳಿಂದ ತುಸು ಹೆಚ್ಚಿನ ಜನಪ್ರಿಯತೆ ಗಳಿಸಿದೆ ಎಂದರೆ ತಪ್ಪಾಗಲಾರದು.

Shivanna: Shivarajkumar expressed his wish to act with tamil star Ajith Kumar

ಅದರಲ್ಲಿಯೂ ಚಿತ್ರದಲ್ಲಿ ನರಸಿಂಹ ಪಾತ್ರವನ್ನು ನಿರ್ವಹಿಸಿರುವ ಶಿವರಾಜ್‌ಕುಮಾರ್ ಸಿನಿ ರಸಿಕರ ಹಾಟ್ ಫೇವರಿಟ್ ಆಗಿದ್ದಾರೆ. ಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆಯೇ ಎಲ್ಲೆಡೆ ಶಿವಣ್ಣನ ನಟನೆ ಬಗ್ಗೆ ದೊಡ್ಡ ಮಟ್ಟದ ಪ್ರಶಂಸೆಗಳು ವ್ಯಕ್ತವಾಗತೊಡಗಿದವು. ಹೌದು, ಚಿತ್ರದ ಮೊದಲಾರ್ಧದಲ್ಲಿ ಮಂಡ್ಯ ಮೂಲದ ಗ್ಯಾಂಗ್‌ಸ್ಟರ್ ನರಸಿಂಹನಾಗಿ ಮಾಸ್ ಆಗಿ ಎಂಟ್ರಿ ನೀಡುವ ಶಿವರಾಜ್‌ಕುಮಾರ್ ಕ್ಲೈಮ್ಯಾಕ್ಸ್‌ನಲ್ಲಿ ಸಿಗರ್ ಸೇದುತ್ತಾ ಪಂಚೆ ಉಟ್ಟು ನಡೆಯುವ ಮೂಲಕವೇ ಸೌತ್ ಸಿನಿ ರಸಿಕರ ಮನ ಗೆದ್ದಿದ್ದಾರೆ.

ಹೀಗೆ ಬೃಹತ್ ಮಟ್ಟದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿರುವ ಶಿವರಾಜ್‌ಕುಮಾರ್ ಅವರು ಸದ್ಯ ತಮಿಳು ಮೀಡಿಯಾಗಳ ಸಂದರ್ಶನಗಳಲ್ಲಿ ಭಾಗವಹಿಸಿ ಜೈಲರ್ ಚಿತ್ರದ ಕುರಿತು ಹಾಗೂ ಅದರಿಂದ ತಮಗೆ ಸಿಕ್ಕ ಮನ್ನಣೆಯ ಕುರಿತು ಮತ್ತು ತಮಿಳು ಚಿತ್ರರಂಗದ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸನ್ ಮ್ಯೂಸಿಕ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ ಶಿವರಾಜ್‌ಕುಮಾರ್ ತಮಿಳಿನ ಯಾವ ನಟನ ಜತೆ ನಟಿಸುವಾಸೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ.

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಜತೆ ನಟಿಸಬೇಕು ಎಂದು ಶಿವಣ್ಣ ಆಸೆ ಪಟ್ಟಿದ್ದಾರೆ. ಹೌದು, ಸಂದರ್ಶಕಿ ತಮಿಳು ಚಿತ್ರರಂಗದಲ್ಲಿ ಯಾವುದಾದರೂ ನಟನ ಜತೆ ನಟಿಸಬೇಕು ಎಂಬ ಆಸೆ ಏನಾದರೂ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ "ನನಗೆ ಅಜಿತ್ ಜತೆ ನಟಿಸುವಾಸೆ. ಅವರು ತುಂಬಾ ರಾ ಹಾಗೂ ಕ್ಯೂಟ್ ಹ್ಯುಮನ್ ಬಿಯಿಂಗ್, ಅವರು ಬೈಕ್‌ನಲ್ಲಿ ಸಿಂಪಲ್ ಆಗಿ ತೆರಳಿ ಸಾಮಾನ್ಯ ಜನರ ಜತೆ ಬೆರೆಯುವುದನ್ನು ನಾನು ನೋಡಿದ್ದೇನೆ. ಅವರ ಈ ಸರಳತೆ ನನ್ನ ಹೃದಯ ಮುಟ್ಟಿದೆ" ಎಂದು ಹೇಳಿಕೆ ನೀಡಿದರು. ಈ ಮೂಲಕ ಶಿವಣ್ಣ ಅಜಿತ್ ಚಿತ್ರದಲ್ಲಿ ನಟಿಸುವ ಆಸೆಯನ್ನು ಹೊರಹಾಕಿದರು.

ಇನ್ನು ಜೈಲರ್ ಬಳಿಕ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿಯೂ ಸಹ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಇದು ಶಿವರಾಜ್‌ಕುಮಾರ್ ನಟನೆಯ ಎರಡನೇ ತಮಿಳು ಚಿತ್ರವಾಗಲಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಧನುಷ್ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Shivanna: Shivarajkumar expressed his wish to act with tamil star Ajith Kumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X