ತಂದೆಗೆ ತಕ್ಕ ಮಗ; ತಮಿಳಿನಲ್ಲಿ ಶಿವಣ್ಣ ನಟನೆಯ ಹೊಸ ಸಿನಿಮಾ ಶುಭಾರಂಭ

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಶಿವಣ್ಣ ನಟನೆಯ ತಮಿಳು ಸಿನಿಮಾ ಸೆಟ್ಟೇರಿದೆ. ಈಗಾಗಲೇ ಟಾಲಿವುಡ್, ಕಾಲಿವುಡ್ ಅಂಗಳದಲ್ಲಿ ಹ್ಯಾಟ್ರಿಕ್ ಹೀರೊ ದರ್ಬಾರ್ ಶುರುವಾಗಿದೆ. ತೆಲುಗಿನ 'ಪೆದ್ದಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಜೈಲರ್'-2 ಪೋಸ್ಟ್ ಪ್ರೊಡಕ್ಷನ್ ಕೆಲಸ ಚಾಲ್ತಿಯಲ್ಲಿದೆ. ಈ ನಡುವೆ ಹೊಸ ಸಿನಿಮಾ ಮುಹೂರ್ತ ನೆರವೇರಿದೆ.

ಕಳೆದ ವರ್ಷ ತಮಿಳಿನಲ್ಲಿ 'ಟೂರಿಸ್ಟ್ ಫ್ಯಾಮಿಲಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಅಬಿಶಾನ್ ಜೀವಿಂತ್ ಹೊಸ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿರುವುದು ವಿಶೇಷ. ಕೆಲ ದಿನಗಳ ಹಿಂದೆಯೇ ಈ ಬಗ್ಗೆ ಫಿಲ್ಮಿಬೀಟ್ ಕನ್ನಡ ವರದಿ ಮಾಡಿತ್ತು. ಇದೀಗ ಅಧಿಕೃತವಾಗಿ ಸಿನಿಮಾ ಶುರುವಾಗಿದೆ. ಚೆನ್ನೈನಲ್ಲಿ ಇಂದು(ಜೂನ್ 1) ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದೆ. ಇನ್ನು ಹೆಸರಿಡದ ಚಿತ್ರದಲ್ಲಿ ಶಿವಾನಿ ನಗರಂ ನಾಯಕಿಯಾಗಿ ನಟಿಸುತ್ತಿದ್ದಾರೆ.

Shivarajkumar and Abishan Jeevinth s Production No1 film begins with launch ceremony

ತಂದೆ- ಮಗನ ನಡುವಿನ ಕಥಾಹಂದರದ ಚಿತ್ರಕ್ಕೆ ಗೌತಮ್ ಶಿವರಾಮನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಬಿಶಾನ್‌ಗೆ ತಂದೆ ಪಾತ್ರದಲ್ಲಿ ಶಿವಣ್ಣ ಬಣ್ಣ ಹಚ್ಚಿದ್ದಾರೆ. ಡ್ರಾಮಾ ಕಂಪನಿ ಬ್ಯಾನರ್ ಅಡಿಯಲ್ಲಿ ಬಾಲ ಅರುಣಾಲಂ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 'ಟೂರಿಸ್ಟ್ ಫ್ಯಾಮಿಲಿ' ಚಿತ್ರ ನಿರ್ದೇಶಿಸಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಅಬಿಶಾನ್ ಬಳಿಕ 'ವಿತ್ ಲವ್' ಎಂಬ ಸಿನಿಮಾದಲ್ಲಿ ಹೀರೊ ಆಗಿ ಮೋಡಿ ಮಾಡಿದ್ದರು. ಈಗ ಮತ್ತೆ ಲೀಡ್ ರೋಲ್‌ನಲ್ಲಿ ನಟಿಸೋಕೆ ಮುಂದಾಗಿದ್ದಾರೆ.

'ಜೈಲರ್' ಚಿತ್ರದ ನರಸಿಂಹ ಪಾತ್ರ ಅಕ್ಕಪಕ್ಕ ಇಂಡಸ್ಟ್ರಿಗಳಲ್ಲಿ ಶಿವಣ್ಣನಿಗೆ ಭಾರೀ ಕ್ರೇಜ್ ಹುಟ್ಟಾಕ್ಕಿದೆ. ಸಾಕಷ್ಟು ತಮಿಳು, ತೆಲುಗು ಕಥೆಗಳನ್ನು ಅವರು ಕೇಳ್ತಿದ್ದಾರೆ. ಅಳೆದು ತೂಗಿ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪ್ರೊಡಕ್ಷನ್ ನಂ.1 ಹೆಸರಿನಲ್ಲಿ ಈ ಸಿನಿಮಾ ಕೆಲಸಗಳು ನಡೀತಿದೆ. ಮುಹೂರ್ತದ ಬೆನ್ನಲ್ಲೇ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿದೆ. ಯೋಗಲಕ್ಷ್ಮಿ ಚಿತ್ರದ ಮತ್ತೊಬ್ಬ ನಾಯಕಿಯಾಗಿ ನಟಿಸುತ್ತಿದ್ದಾರೆ.

'ಟೂರಿಸ್ಟ್ ಫ್ಯಾಮಿಲಿ' ಚಿತ್ರಕ್ಕೆ ಗೌತಮ್ ಶಿವರಾಮನ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಸ್ವತಂತ್ರ ನಿರ್ದೇಶಕರಾಗಿ ಪ್ರೊಡಕ್ಷನ್ ನಂ.1 ಅವರ ಚೊಚ್ಚಲ ಸಿನಿಮಾ. ಲಿಯಾನ್ ಜೇಮ್ಸ್ ಸಂಗೀತ ಹಾಗೂ ಪ್ರಗದೀಶ್ ಪ್ರಭು ಛಾಯಾಗ್ರಹಣ ಚಿತ್ರಕ್ಕಿದೆ. ಅಂದಹಾಗೆ ತಮಿಳಿನಲ್ಲಿ ಇದು ಶಿವಣ್ಣನ ನಟನೆಯ 4ನೇ ಸಿನಿಮಾ. 'ಜೈಲರ್' ಬಳಿಕ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಧನುಷ್ ಜೊತೆ ಅವರು ನಟಿಸಿದ್ದರು. ಈಗಾಗಲೇ 'ಜೈಲರ್ -2' ಸಿನಿಮಾ ಮುಗಿಸಿದ್ದಾರೆ. ಖ್ಯಾತ ನಿರ್ಮಾಪಕರ ಕಲೈಪುಲಿ ತನು, ರಜನಿಕಾಂತ್ ಮಗಳು ಸೌಂದರ್ಯ ಸೇರಿ ತಮಿಳು ಚಿತ್ರರಂಗದ ಗಣ್ಯರು ಸಿನಿಮಾ ಮುಹೂರ್ತ ಸಮಾರಂಭಕ್ಕೆ ಹಾಜರಾಗಿ ಶುಭ ಕೋರಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಪ್ರೊಡಕ್ಷನ್ ನಂ.1 ಚಿತ್ರದ ಮುಹೂರ್ತ ನಡೆದಿದೆ. ವರ್ಷಾಂತ್ಯಕ್ಕೆ ಅಥವಾ ಸಂಕ್ರಾಂತಿ ವೇಳೆಗೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಮುಹೂರ್ತದ ವೇಳೆ ಶಿವಣ್ಣ ಹಾಗೂ ಅಬಿಶಾನ್‌ ಸಣ್ಣ ಸ್ಕಿಟ್ ಮಾಡಿ ಗಮನ ಸೆಳೆದಿದ್ದಾರೆ. ಅದನ್ನು ನೋಡ್ತಿದ್ರೆ ಸಿನಿಮಾ ಕಥೆ ಏನಿರಬಹುದು ಎನ್ನುವುದು ಗೊತ್ತಾಗುತ್ತಿದೆ. ತಂದೆ-ಮಗನ ಪೈಪೋಟಿ ಚಿತ್ರದ ಒನ್‌ಲೈನ್ ಸ್ಟೋರಿ ಇರಬಹುದಾ ಎನ್ನುವ ಕುತೂಹಲ ಮೂಡಿದೆ.

ಕನ್ನಡದಲ್ಲಿ ಶಿವಣ್ಣ 'ಡ್ಯಾಡ್' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. '666 ಆಪರೇಷನ್ ಡ್ರೀಮ್ ಥಿಯೇಟರ್', 'ಎ ಫಾರ್ ಆನಂದ್' ಹಾಗೂ 'ಬೇಲ್' ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ 'ಗುಮ್ಮಡಿ ನರಸಯ್ಯ' ಬಯೋಪಿಕ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಒಂದು ಸಿನಿಮಾ ಘೋಷಣೆಯಾಗಿದೆ.

Read more about: shivarajkumar kollywood actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X