ನಯನತಾರ ಮತ್ತು ಧನುಷ್ ವಿವಾದದ ಬೆನ್ನಲ್ಲೇ ಮಹತ್ವದ ನಿರ್ಧಾರ ತೆಗೆದುಕೊಂಡ ವಿಘ್ನೇಶ್ ಶಿವನ್..!

ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು.

ಹಾಗಂಥ ತೀರಾ ಹೊಲಸಾಗಿ ಟ್ರೋಲ್ ಕೂಡ ಮಾಡಬಾರದು. ಯಾಕೆಂದರೆ ಕೆಲ ಒಮ್ಮೆ ಹೀಗೆ ಮಾಡಲಾಗುವ ಟ್ರೋಲ್ ವ್ಯಕ್ತಿಯೊಬ್ಬನ ಮಾನಸಿಕ ತೊಂದರೆಗೆ ಕಾರಣವಾಗಬಹುದು. ಆಘಾತಕ್ಕೆ ಕಾರಣವಾಗಿ ಒತ್ತಡವನ್ನು ಹೆಚ್ಚಿಸಬಹುದು. ಲೇಡಿ ಸೂಪರ್ ಸ್ಟಾರ್ ನಯನತಾರ ಅವರ ಪತಿ ವಿಘ್ನೇಶ್ ಶಿವನ್ ಅವರಿಗೆ ಕೂಡ ಇದೇ ತರಹದ ಅನುಭವ ಆಗಿದೆಯಾ ಗೊತ್ತಿಲ್ಲ. ಆದರೆ ವಿಘ್ನೇಶ್ ಶಿವನ್ ಅವರ ನಡೆ ಇಂತಹದ್ದೊಂದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Shocking Amid Controversy with Dhanush Nayanthara s Husband Vignesh Shivan Goes Missing

ಹೌದು, ಎಲ್ಲರಿಗೆ ಗೊತ್ತಿರುವಂತೆ ಸದ್ಯ ನಯನತಾರ ಮತ್ತು ಧನುಷ್ ನಡುವೆ ಸಮರ ಶುರುವಾಗಿದೆ. ಮನಿ ಕಂಡರೆ ಮನುಷ್ಯತ್ವವನ್ನು ಮರೆಯುತ್ತಾರೆ ಎನ್ನುವುದನ್ನು ಕೂಡ ಈ ವಿವಾದ ರುಜುವಾತು ಮಾಡಿದೆ. ನಯನತಾರ ಮತ್ತು ಧನುಷ್ ಭಕ್ತಗಣದ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಮರ ಕೂಡ ಶುರುವಾಗಿದೆ.

ಆದರೆ ಇದೆಲ್ಲದರ ನಡುವೆ ಈಗ ವಿಘ್ನೇಶ್ ಶಿವನ್ ತಮ್ಮ ಎಕ್ಸ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇದು ಹಲವರನ್ನು ಅಚ್ಚರಿಗೆ ದೂಡಿದರೆ ಇನ್ನೂ ಕೆಲವರನ್ನು ದಿಗ್ಭ್ರಾಂತಿಗೊಳಿಸಿದೆ. ಹೀಗಾಗಿಯೇ ವಿಘ್ನೇಶ್ ಶಿವನ್ ತೊರೆದು ಹೋದ ಜಾಗ ಎಕ್ಸ್‌ನಲ್ಲಿ ಚರ್ಚೆಯನ್ನು ಮಾಡುತ್ತಿರುವ ಅನೇಕರು ಸದ್ಯ ತಮ್ಮ ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆ ಅಂದರೆ ಎರಡು ದಿನದ ಹಿಂದೆ ವಿಘ್ನೇಶ್ ಶಿವನ್ ಗಲಾಟ ಪ್ಲಸ್ ಯೂಟ್ಯೂಬ್ ಚಾನೆಲ್‌ನ ಚರ್ಚೆಯಲ್ಲಿ ಭಾಗಿಯಾಗಿದ್ದರು. ದುಂಡು ಮೇಜಿನ ಸಭೆಯಲ್ಲಿ ಪ್ಯಾನ್ ಇಂಡಿಯಾದ ಸಾಧಕ ಬಾಧಕದ ಕುರಿತು ಕೆಲ ನಿರ್ದೇಶಕರ ಜೊತೆ ಚರ್ಚೆಯನ್ನು ಮಾಡಿದ್ದರು. ಆದರೆ, ಇದನ್ನು ಸಹಿಸದ ಅನೇಕರು ವಿಘ್ನೇಶ್ ಶಿವನ್ ಅವರ ಚಿತ್ರಗಳ ಕುರಿತು ವಿಮರ್ಶೆ ಮಾಡಲು ಶುರು ಮಾಡಿದ್ದರು. ಖುದ್ದು ಈ ಚರ್ಚೆಯಲ್ಲಿ ಭಾಗಿಯಾಗಿದ್ದ ನಿರ್ದೇಶಕರೇ ವಿಘ್ನೇಶ್ ಶಿವನ್ ಅವರನ್ನು ಚರ್ಚೆಗೆ ಆಹ್ವಾನಿಸಿದ್ದಕ್ಕೆ ಕೆರಳಿ ಕೆಂಡವಾಗಿದ್ದರು. 2022ರಲ್ಲಿ ವಿಘ್ನೇಶ್ ಶಿವನ್ ನಿರ್ದೇಶಿಸಿದ್ದ 'ಕಾತುವಾಕುಲ ರೆಂದು ಕಾದಲ್' ಚಿತ್ರವನ್ನು ಟೀಕಿಸಿದ್ದರು. ಅದ್ಹೇಗೆ ನಿಮ್ಮ ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರ ಎನ್ನುವ ವಾದ ಮಾಡುತ್ತೀರಾ ಎಂದು ಕೇಳಿದರು.ತೆರೆಗೆ ಬರಲು ಸಿದ್ಧವಾಗಿರುವ ವಿಘ್ನೇಶ್ ಶಿವನ್ ನಿರ್ದೇಶನದ 'ಲವ್ ಇನ್ಶುರೆನ್ಸ್ ಕಂಪನಿ' ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಎನ್ನುವ ವಾದ ಮಾಡಿದರು.

ಇದರಿಂದ ವಿಘ್ನೇಶ್ ಶಿವನ್ ಮನಸಿಗೆ ಬೇಸರವಾಯಿತಾ...? ಗೊತ್ತಿಲ್ಲ. ಆದರೆ ಸದ್ಯ ವಿಘ್ನೇಶ್ ಶಿವನ್ ಅವರ ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ. ಕಾಲಿವುಡ್‌ನಲ್ಲಿ ವ್ಯಾಪಕವಾದ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ.

ಇನ್ನುಳಿದಂತೆ ನಯನತಾರ ಮತ್ತು ಧನುಷ್ ನಡುವೆ ನಡೆಯುತ್ತಿರುವ ಮೂರು ಸೆಕೆಂಡ್ ವಿಡಿಯೋ ಜಗಳಕ್ಕೆ ಎಂಟ್ರಿ ನೀಡಿದ್ದ ವಿಘ್ನೇಶ್ ಶಿವನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿವಾದಾತ್ಮಕ ಮೂರು ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡಿದ್ದರು. 'ಇದು 10 ಕೋಟಿ ರೂಪಾಯಿ ಮೌಲ್ಯದ ವೀಡಿಯೊವಾಗಿದ್ದು, ನಮ್ಮ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರದಿಂದ ತೆಗೆದುಹಾಕಲು ಕೇಳಲಾಗಿದೆ. ದಯವಿಟ್ಟು ಇಲ್ಲಿ ಉಚಿತವಾಗಿ ವೀಕ್ಷಿಸಿ ಎಂದಿದ್ದರು. ಸಾಕ್ಷ್ಯಚಿತ್ರದ ಟ್ರೇಲರ್‌ನಲ್ಲಿ ಈ ವೀಡಿಯೊವನ್ನು ಬಳಸಿದ ನಂತರ ಧನುಷ್ ಕಳುಹಿಸಿದ್ದ ಲೀಗಲ್ ನೋಟಿಸ್‌ನ ಮೂರು ಪುಟಗಳ ಪ್ರತಿಯನ್ನು ಸಹ ಅವರು ಹಂಚಿಕೊಂಡಿದ್ದ ವಿಘ್ನೇಶ್ ಶಿವನ್ ಪ್ರೀತಿ ಹರಡಿ ಸಾರ್ ಎಂದು ಮಾತಲ್ಲಿಯೇ ಧನುಷ್‌ಗೆ ತಿವಿದಿದ್ದರು. ಇಂಥಾ ವಿಘ್ನೇಶ್ ಶಿವನ್ ಸದ್ಯ ತಮ್ಮ ಎಕ್ಸ್ ಖಾತೆಯನ್ನು ಡಿ ಆಕ್ಟಿವೇಟ್ ಮಾಡಿದ್ಧಾರೆ.

More from Filmibeat

Read more about: nayanthara vignesh shivan troll
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X