ಲೈವ್ ವೇಳೆ 'ಮೇಡಂ ನಿಮ್ಮ ಎದೆ ಸೂಪರ್' ಎಂದ ಅಭಿಮಾನಿ; ಶ್ರೇಯಾ ಗಂಡನ ಪ್ರತಿಕ್ರಿಯೆ ವೈರಲ್

ಸೋಶಿಯಲ್ ಮೀಡಿಯಾ ಒಂಥರಾ ವಿಚಿತ್ರ. ಇದರಿಂದ ಎಷ್ಟು ಅನುಕೂಲ ಇದ್ಯೋ ಅಷ್ಟೇ ಅನಾನುಕೂಲ ಕೂಡ ಇದೆ. ಟ್ವಿಟ್ಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಮೂಲಕ ತಾರೆಯರು ತಮ್ಮ ಅಭಿಮಾನಿಗಳಿಗೆ ಬಹಳ ಹತ್ತಿರವಾಗಿಬಿಟ್ಟಿದ್ದಾರೆ. ನೆಚ್ಚಿನ ನಟ, ನಟಿಯರಿಗೆ ಪ್ರಶ್ನೆ ಕೇಳಲು, ಅಭಿಪ್ರಾಯ ತಿಳಿಸಲು ಇದು ಒಳ್ಳೆ ಮಾರ್ಗ ಎನ್ನುವಂತಾಗಿದೆ. ಸೆಲೆಬ್ರೆಟಿಗಳು ಕೂಡ ಆಗಾಗ್ಗೆ ಅಭಿಮಾನಿಗಳ ಜೊತೆ ಲೈವ್ ಬಂದು ಮಾತನಾಡುತ್ತಾರೆ.

ನಟಿಯರಿಗೆ ಸೋಶಿಯಲ್ ಮೀಡಿಯಾ ಲೈವ್ ವೇಳೆ ವಿಚಿತ್ರ, ಅಸಭ್ಯ ಪ್ರಶ್ನೆಗಳು ಎದುರಾಗುತ್ತವೆ. ಕೆಲವರು ಅಂತಹ ಪ್ರಶ್ನೆ ಓದುವ ಗೋಜಿಗೆ ಹೋಗುವುದಿಲ್ಲ. ನೋಡಿಯೂ ನೋಡದಂತೆ ಸುಮ್ಮನಿದ್ದುಬಿಡುತ್ತಾರೆ. ಕೆಲವರು ಓದಿ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡುತ್ತಾರೆ. ಬಹುಭಾಷಾ ನಟಿ ಶ್ರೇಯಾ ಶರಣ್‌ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆಕೆಗೆ ಇನ್‌ಸ್ಟಾಗ್ರಾಮ್ ಲೈವ್ ವೇಳೆ ವಿಚಿತ್ರ ಕಾಂಪ್ಲಿಮೆಂಟ್ ಸಿಕ್ಕಿತ್ತು. ಅದಕ್ಕೆ ಪಕ್ಕದಲ್ಲೇ ಇದ್ದ ಪತಿ ಆಂಡ್ರೇ ಕೊಸ್ಚೀವ್ ಪ್ರತಿಕ್ರಿಯೆ ಎಲ್ಲರ ಹುಬ್ಬೇರಿಸಿತ್ತು.

Shriya Saran s husband Andrei Koscheev s reply to disgusting comment by netizen goes viral

ಶ್ರೇಯಾ ಶರಣ್ ಇನ್‌ಸ್ಟಾಗ್ರಾಮ್ ಲೈವ್ ಬಂದಿದ್ದ ವೇಳೆ ನೆಟ್ಟಿಗನೊಬ್ಬ ಮೇಡಂ ನಿಮ್ಮ 'ಬೂ*ಬ್ಸ್(ಸ್ತ*ನಗಳ) ಸೂಪರ್' ಎಂದು ಕಾಮೆಂಟ್ ಮಾಡಿದ್ದಾನೆ. ಕೂಡಲೇ ಶ್ರೇಯಾ ಅದನ್ನು ಓದಿ ಒಂದು ಕ್ಷಣ ಅವಕ್ಕಾಗಿ ನನ್ನ ಎದೆ ಎಲ್ಲಿ ಕಾಣಿಸ್ತಿದೆ ಈಡಿಯಟ್ಸ್ ಎಂದಿದ್ದಾರೆ. ಕೂಡಲೇ ಪಕ್ಕದಲ್ಲಿದ್ದ ಪತಿ ಆಂಡ್ರೇ ಕೊಸ್ಚೀವ್ ನಾನು ನಿಮ್ಮ ಮಾತು ಒಪ್ಪುತ್ತೇನೆ. ಯಾರು ಆಕೆಯ ಎದೆಯ ಬಗ್ಗೆ ಮಾತನಾಡಿದ್ರೋ ಮತ್ತಷ್ಟು ಕಾಮೆಂಟ್ ಮಾಡಿ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ನಟಿ ಶ್ರೇಯಾ ಕೂಡ ಅದಕ್ಕೆ ನಕ್ಕು ಸುಮ್ಮನಾಗಿದ್ದಾರೆ.

ನಾಲ್ಕೈದು ವರ್ಷಗಳ ಹಿಂದೆ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಶ್ರೇಯಾ ಶರಣ್ ಇನ್‌ಸ್ಟಾಗ್ರಾಮ್‌ ಲೈವ್ ಬಂದಿದ್ದ ವೇಳೆ ಈ ಚಿಟ್‌ಚಾಟ್ ನಡೆದಿತ್ತು. ಆದರೆ ದಿಢೀರನೆ ಈ ವಿಡಿಯೋ ಮತ್ತೆ ವೈರಲ್ ಆಗ್ತಿದೆ. ನೆಟ್ಟಿಗನ ಕಾಮೆಂಟ್ ಓದಿದ ಶ್ರೇಯಾ ಹಾಗೂ ಆಕೆಯ ಪತಿಯ ರಿಯಾಕ್ಷನ್ ಬಗ್ಗೆ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಎಷ್ಟು ಧೈರ್ಯವಾಗಿ ಮಾತನಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮದುವೆ, ಮಗು ಬಳಿಕ ಶ್ರೇಯಾ ಹೆಚ್ಚು ಸಿನಿಮಾಗಳಲ್ಲಿ ನಟಿಸ್ತಿಲ್ಲ.

25 ವರ್ಷಗಳ ಹಿಂದೆ ಶ್ರೇಯಾ ಚಿತ್ರರಂಗ ಪ್ರವೇಶಿಸಿದ್ದರು. ಇವತ್ತಿಗೂ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಬಾಲಿವುಡ್ 'ದೃಶ್ಯಂ- 3' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಆಕೆ ಸಜ್ಜಾಗಿದ್ದಾರೆ. ಮೋಹನ್ ಲಾಲ್ ನಟನೆಯ 'ದೃಶ್ಯಂ- 3' ಚಿತ್ರ ತಮಿಳು, ತೆಲುಗು, ಕನ್ನಡ ಭಾಷೆಗಳಿಗೆ ಡಬ್ ಆಗಿ ತೆರೆಗೆ ಬಂದಿತ್ತು. ಆದರೆ ಹಿಂದಿಯಲ್ಲಿ ಮಾತ್ರ ರೀಮೆಕ್ ಆಗ್ತಿದೆ. ಅಕ್ಟೋಬರ್ 2ರಂದು ಕ್ರೈಂ ಥ್ರಿಲ್ಲರ್ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

ಪುನೀತ್ ರಾಜ್‌ಕುಮಾರ್ ನಟನೆಯ 'ಅರಸು' ಚಿತ್ರದಲ್ಲಿ ಶ್ರೇಯಾ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಬಳಿಕ 'ಚಂದ್ರ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದರು. ಆರ್‌. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದಲ್ಲಿ ಉಪೇಂದ್ರ ಜೋಡಿಯಾಗಿ ಆಕೆ ನಟಿಸಿದ್ದು ಗೊತ್ತೇಯಿದೆ. 2028ರಲ್ಲಿ ಆಂಡ್ರೇ ಕೊಸ್ಚೀವ್ ಜೊತೆ ಆಕೆಯ ಮದುವೆ ನಡೆದಿತ್ತು. ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ.

ಇದೇ ವರ್ಷ 'ಸಂಡೇಕಾರಿ' ಎಂಬ ಸಿನಿಮಾ ಮೂಲಕ ಶ್ರೇಯಾ ಪ್ರೇಕ್ಷಕರ ಮುಂದೆ ಬಂದಿದ್ದರು. ಒಂದ್ಕಾಲದಲ್ಲಿ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ತೆಲುಗು, ತಮಿಳು ಸೂಪರ್ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡಿದ್ದರು. ಬಳಿಕ ಬಾಲಿವುಡ್ ಪ್ರವೇಶಿಸಿ ಸಕ್ಸಸ್ ಕಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X