ನಿಮ್ಮ ತಾಯಿ,ಅಕ್ಕ,ತಂಗಿ,ಹೆಂಡತಿಯ ವಿಡಿಯೋ ನೋಡಿ-ವೈರಲ್ ಆದ ಖಾಸಗಿ ವಿಡಿಯೋ ಬಗ್ಗೆ ಶ್ರುತಿ ನಾರಾಯಣನ್ ಪ್ರತಿಕ್ರಿಯೆ!

ಫೇಸ್ ಬುಕ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಕಾಲಿವುಡ್‌ನ ಕಿನ್ನರಿ ಶ್ರುತಿ ನಾರಾಯಣನ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿನ್ನೆ ಮೊನ್ನೆವರೆಗೆ ಯಾರಿಗೂ ಗೊತ್ತಿರದ ಶ್ರುತಿ ನಾರಾಯಣನ್ ಅವರ ಹೆಸರು ಈಗ ಜಗದೆಲ್ಲೆಡೆ ಪಸರಿಸಿದೆ.

ಇಷ್ಟೆಲ್ಲ ಆದರೂ ಕೂಡ ಶ್ರುತಿ ನಾರಾಯಣನ್ ಮಾತ್ರ ಈ ವಿಚಾರದಲ್ಲಿ ನಿನ್ನೆಯವರೆಗೆ ಮೌನಕ್ಕೆ ಶರಣಾಗಿದ್ದರು. ಹೀಗಾಗಿ ಅನೇಕರು ಮೌನಂ ಸಮ್ಮತಿ ಲಕ್ಷಣಂ ಎಂದುಕೊಂಡ ಅನೇಕರು ವೈರಲ್ ಆದ ವಿಡಿಯೋ ಶ್ರುತಿ ನಾರಾಯಣನ್ ಅವರದ್ದೇ ಎಂದು ಷರಾ ಬರೆದರು. ಕೆಲವರು ಶ್ರುತಿ ಅವರನ್ನು ನಿಂದಿಸಲು ಶುರು ಮಾಡಿದರು.

Shruthi Narayanan breaks her silence on the casting couch viral leak video shares emotional Post

ಆದರೆ ಬಹುತೇಕ ಸಂದರ್ಭಗಳಲ್ಲಿ ಮೌನ ಸಮ್ಮತಿ ಲಕ್ಷಣವಾಗಿರುವುದಿಲ್ಲ. ಅದು ಅಸಮ್ಮತಿ ಲಕ್ಷಣವಾಗಿರುವ ಸಾಧ್ಯತೆ ಹೆಚ್ಚಿರುತ್ತೆ. ಯಾಕೆಂದರೆ ಸಮ್ಮತಿ ಇದ್ದವರು ಸಂತೋಷದಿಂದ ಅದನ್ನು ವ್ಯಕ್ತಪಡಿಸುತ್ತಾರೆ. ತಕರಾರು ಅಥವಾ ಅಸಮ್ಮತಿ ಇದ್ದಾಗಲೇ ಅದನ್ನು ವ್ಯಕ್ತಪಡಿಸಲಾಗದ ಅಸಹಾಯಕತೆಯಿಂದಾಗಿ ಮೌನ ವಹಿಸಿರುತ್ತಾರೆ. ಶ್ರುತಿ ನಾರಾಯಣನ್ ಕೂಡ ಹೀಗೆ ಮೌನ ವಹಿಸಿದ್ದರಾ ಗೊತ್ತಿಲ್ಲ. ಆದರೆ ಸದ್ಯ ಶ್ರುತಿ ನಾರಾಯಣನ್ ತಮ್ಮ ಮೌನ ಮುರಿದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಬರಹವನ್ನು ಹಂಚಿಕೊಂಡಿದ್ದಾರೆ.

ನಿಮಗೆಲ್ಲ ಈ ವಿಚಾರ ಜೋಕ್ ಅಥವಾ ತಮಾಷೆ ಆಗಿರಬಹುದು. ಆದರೆ ನನಗೆ ನನ್ನ ಕುಟುಂಬಕ್ಕೆ ಇದು ತುಂಬಾನೇ ಕಷ್ಟಕರವಾದ ಸಂದರ್ಭ. ನಾನು ಒಂದು ಹೆಣ್ಣು, ನನ್ನಲ್ಲಿಯೂ ಭಾವನೆಗಳಿವೆ, ನನ್ನ ಆಪ್ತವರ್ಗದವರಲ್ಲಿ ಕೂಡ ಭಾವನೆಗಳಿವೆ. ಆ ಭಾವನೆಗಳಿಗೆ ಬೆಲೆ ಕೊಡಿ ಎಂದು ಮನವಿಯನ್ನು ಮಾಡಿಕೊಂಡಿರುವ ಶ್ರುತಿ ನಾರಾಯಣನ್ ಕಾಡ್ಗಿಚ್ಚಿನಂತೆ ಆ ವಿಡಿಯೋ ಹಬ್ಬಿಸಬೇಡಿ ಎಂದು ಹೇಳಿದ್ದಾರೆ. ಹಾಗೊಂದು ವೇಳೆ ನೋಡಲೇಬೇಕು ಅಂದರೆ ನಿಮ್ಮ ತಾಯಿ, ನಿಮ್ಮ ಗರ್ಲ್‌ಫ್ರೆಂಡ್, ನಿಮ್ಮ ಸಹೋದರಿಯ ವಿಡಿಯೋಗಳನ್ನು ನೋಡಿ ಅವರು ಕೂಡ ನನ್ನಂತೆಯೇ ದೇಹವನ್ನು ಹೊಂದಿದ್ದಾರೆ ಅವರ ವಿಡಿಯೋಗಳನ್ನು ನೋಡಿ ಖುಷಿ ಪಡಿ ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು ಮತ್ತೊಂದು ಬರಹವನ್ನು ಕೂಡ ಹಂಚಿಕೊಂಡಿರುವ ಶ್ರುತಿ ನಾರಾಯಣನ್ ಮಹಿಳೆಯರ ವ್ಯಕ್ತಿತ್ವವನ್ನೇ ಯಾಕೆ ಯಾವಾಗಲೂ ಪ್ರಶ್ನೆ ಮಾಡಲಾಗುತ್ತೆ. ಈ ತರಹದ ವಿಡಿಯೋಗಳನ್ನು ಲೀಕ್ ಮಾಡುವವರನ್ನು ಯಾಕೆ ಪ್ರಶ್ನೆ ಮಾಡಲಾಗುವುದಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ನಿಮ್ಮ ತಾಯಿ, ನಿಮ್ಮ ಸಹೋದರಿ, ನಿಮ್ಮ ಅಜ್ಜಿ, ನಿಮ್ಮ ಪತ್ನಿ, ಎಲ್ಲ ಹೆಣ್ಣು ಮಕ್ಕಳ ದೇಹದಾಕಾರ ಒಂದೇ ರೀತಿಯಾಗಿರುತ್ತೆ, ಅದರಲ್ಲೇನಿದೆ ಎಂದಿರುವ ಶ್ರುತಿ ನಾರಾಯಣನ್ ಅದು ಕೇವಲ ವಿಡಿಯೋ ಮಾತ್ರವಲ್ಲ ಅದು ಒಬ್ಬರ ಬದುಕು ಎಂದು ಹೇಳಿದ್ದಾರೆ. ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

ಇನ್ನು, ವಿಡಿಯೋ ವೈರಲ್ ಆದ ನಂತರ ಅನೇಕರು ಇದು ಮುಂದುವರೆದ ತಂತ್ರಜ್ಞಾನದ ಸೈಡ್ ಎಫೆಕ್ಟ್ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಡೀಪ್ ಫೇಕ್ ಟೆಕ್ನಾಲಜಿಯನ್ನು ಬಳಿಸಿಕೊಂಡು ಶ್ರುತಿ ನಾರಾಯಣನ್ ಅವರ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ ಎಂದು ಹೇಳಿದ್ದರು.

ಶ್ರುತಿ ನಾರಾಯಣನ್ ಕೂಡ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದು ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾಗುವ ಡೀಪ್ ಫೇಕ್‌ ವಿಡಿಯೋಗಳು ಬದುಕನ್ನು ಹಾಳು ಮಾಡುತ್ತಿವೆ, ನೀವು ಈ ತರಹದ ಕೆಲಸ ಮಾಡುತ್ತಿದ್ದರೆ ನೀವು ಸಮಸ್ಯೆಯ ಒಂದು ಭಾಗ ಎಂದು ಹೇಳಿದ್ದಾರೆ. ಅಸಲಿ-ನಕಲಿ ವಿಡಿಯೋ ಯಾವುದಾದರೂ ಇರಲಿ ಲೀಕ್ ಆದ ವಿಡಿಯೋಗಳನ್ನು ಹಂಚಿಕೊಳ್ಳುವುದು ಭಾರತದಲ್ಲಿ ಅಪರಾಧ ಎಂದು ಹೇಳಿರುವ ಶ್ರುತಿ ನಾರಾಯಣನ್ ಭಾರತೀಯ ದಂಡ ಸಂಹಿತೆಯಲ್ಲಿ ಯಾವೆಲ್ಲ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬಹುದು ಎನ್ನುವ ವಿವರಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಇನ್ನು ಇದೆಲ್ಲದರ ನಡುವೆ ಶ್ರುತಿ ನಾರಾಯಣನ್ ಅವರ ವಿಡಿಯೋ ಹುಡುಕುವ ಭರದಲ್ಲಿ ಅನೇಕರು, ಸಿಟಾಡೆಲ್ ಹನಿ ಬನ್ನಿ ಚಿತ್ರದಲ್ಲಿ ವರುಣ್ ಧವನ್ ಮತ್ತು ಸಮಂತಾ ಜೊತೆ ಅಭಿನಯಿಸಿದ್ದ ಶ್ರುತಿ ನಾರಾಯಣನ್ ಅವರ ಬೆನ್ನ ಹಿಂದೆ ಬಿದ್ದಿದ್ದಾರೆ. ಸಿಟಾಡೆಲ್ ಚಿತ್ರದ ಈ ಶ್ರುತಿ ನಾರಾಯಣನ್ ಮತ್ತು ವೈರಲ್ ಆದ ವಿಡಿಯೋದಲ್ಲಿ ಇದ್ದಾರೆ ಎನ್ನಲಾದ ಶ್ರುತಿ ನಾರಾಯಣನ್ ಅವರ ಗುರುತು ಹಚ್ಚುವಲ್ಲಿ ವಿಫಲವಾಗಿ ಸಿಟಾಡೆಲ್ ನಟಿಯಾದ ಶ್ರುತಿ ನಾರಾಯಣನ್ ಅವರ ಫೋಟೊಗಳನ್ನು ತಮ್ಮ ವರದಿಗಳಲ್ಲಿ ಅನೇಕರು ಪ್ರಕಟಿಸುತ್ತಿದ್ದಾರೆ. ಫೋಟೊಗಳನ್ನು ಬಳಿಸಿಕೊಳ್ಳುತ್ತಿದ್ದಾರೆ.

ಈ ಹಿನ್ನೆಲೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಸ್ಪಷ್ಟನೆ ನೀಡಿರುವ ಸಿಟಾಡೆಲ್ ನ ನಟಿ ಶ್ರುತಿ ನಾರಾಯಣನ್, ಆನ್‌ ಲೈನ್‌ನಲ್ಲಿ ಹರಿದಾಡುತ್ತಿರುವ ಶ್ರುತಿ ನಾರಾಯಣನ್ ಹೆಸರಿಗೂ ಆ ವಿಡಿಯೋಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಸ್ಟ್ ಮಾಡಿದ್ಧಾರೆ. ನನ್ನ ಫೋಟೋಗಳನ್ನು ಬಳಸಬೇಡಿ, ಈ ವಿಚಾರದಿಂದ ನನ್ನ ದೂರವಿಡಿ ಎಂದು ಮನವಿಯನ್ನು ಮಾಡಿಕೊಂಡಿದ್ಧಾರೆ.

ಅಂದ್ಹಾಗೇ ವೈರಲ್ ಆದ ಖಾಸಗಿ ವಿಡಿಯೋ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಶ್ರುತಿ ನಾರಾಯಣನ್ 'ಕಾರ್ತಿಕ ದೀಪಂ' ಎಂಬ ಧಾರಾವಾಹಿಯಲ್ಲಿ ಶ್ರುತಿ ನಾರಾಯಣನ್ ನಟಿಸಿದ್ದರು. 'ಸಿರಗಾದಿಕ ಆಸೈ' ಇವರಿಗೆ ಅಪಾರವಾದ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು. ಜನವರಿ 2023ರಲ್ಲಿ ಪ್ರಸಾರ ಶುರು ಮಾಡಿದ ಈ ಕಾರ್ಯಕ್ರಮದ 650 ಎಪಿಸೋಡ್‌ಗಳು ಪ್ರಸಾರವಾಗಿವೆ. ಇನ್ನು ನಿನ್ನೆಯವರೆಗೆ ಶ್ರುತಿ ನಾರಾಯಣನ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ 57 ಸಾವಿರಕ್ಕೂ ಅಧಿಕ ಜನ ಹಿಂಬಾಲಿಸುತ್ತಿದ್ದರು. ಈ ಸಂಖ್ಯೆ ಈಗ 92 ಸಾವಿರ ಗಡಿಯನ್ನು ದಾಟಿದೆ. ಇನ್ನು ವಿಡಿಯೋ ವೈರಲ್ ಆದ ನಂತರ ಸೀರೆಯಲ್ಲಿ ತಮ್ಮ ಭಾವಚಿತ್ರಗಳನ್ನು ಶ್ರುತಿ ಹಂಚಿಕೊಂಡಿದ್ದು ಕಾಮೆಂಟ್ ಸೆಕ್ಷನ್‌ನ ಆಫ್ ಮಾಡಿದ್ದಾರೆ.

ಇನ್ನುಳಿದಂತೆ ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗವೇರುವಂತೆ ಅನೇಕರು ಅನೇಕ ನಾಯಕಿಯರಿಗೆ ಹೇಳಿದ್ದಾರೆ. ಸಂದರ್ಶನಗಳಲ್ಲಿ ಬೆಳ್ಳಿತೆರೆ ಮತ್ತು ಕಿರುತೆರೆಯ ಅನೇಕ ನಾಯಕಿಯರು ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕನಸೊತ್ತು ಚಿತ್ರರಂಗಕ್ಕೆ ಬರುವ ಅನೇಕ ಮಹಿಳೆಯರನ್ನು, ಯುವತಿಯರನ್ನು ಚಿತ್ರರಂಗದ ಕೆಲವರು ದಾರಿ ತಪ್ಪಿಸುತ್ತಾರೆ, ಅವಕಾಶದ ನೆಪದಲ್ಲಿ ಹೇಗೆಲ್ಲ ಬಳಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಶ್ರುತಿ ನಾರಾಯಣನ್ ಅವರ ವಿಚಾರದಲ್ಲಿ ಕೂಡ ಇದೇ ಆಗಿರಬಹುದು ಎನ್ನುವ ಅನುಮಾನ ಕೂಡ ಅನೇಕರಲ್ಲಿದೆ. ಅವಕಾಶ ನೀಡುವುದಾಗಿ ಹೇಳಿ ಶ್ರುತಿ ನಾರಾಯಣನ್ ಅವರ ವಿಡಿಯೋ ಮಾಡಿದ್ದಾರಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಈ ಕುರಿತು ಶ್ರುತಿ ನಾರಾಯಣನ್ ಯಾವುದೇ ಸ್ಪಷ್ಟವಾದ ಉತ್ತರವನ್ನು ನೀಡಿಲ್ಲವಾದರೂ ನಡೆಯುತ್ತಿರುವ ಚರ್ಚೆ ತಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.

ಒಟ್ನಲ್ಲಿ ಶ್ರುತಿ ನಾರಾಯಣನ್ ಸಾಮಾಜಿಕ ಜಾಲತಾಣದಲ್ಲಿ ಚರ್ಚಿತ ವಸ್ತುವಾಗಿದ್ದಾರೆ. ತಮ್ಮ ಮನದ ನೋವನ್ನು ಶ್ರುತಿ ನಾರಾಯಣನ್ ಹೊರ ಹಾಕಿದ್ದರೂ, ವಿಡಿಯೋ ನೋಡಬೇಡಿ, ಹಂಚಬೇಡಿ ಎಂಬ ಮನವಿಯನ್ನು ಮಾಡಿಕೊಂಡಿದ್ದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಶ್ರುತಿ ನಾರಾಯಣನ್ ಅವರ ವಿಡಿಯೋವನ್ನು ಹುಡುಕುತ್ತಿದ್ದಾರೆ. ಕಾನೂನಿನ ಅಡಿ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂದು ಶ್ರುತಿ ನಾರಾಯಣನ್ ಹೇಳಿದ್ದರು ಕೂಡ ಕ್ಯಾರೇ ಎನ್ನದ ಅನೇಕರು ಶ್ರುತಿ ನಾರಾಯಣನ್ ಹ್ಯಾಶ್ ಟ್ಯಾಗ್‌ನಡಿ ಸರ್ಚ್ ಮಾಡುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X