ಶ್ರುತಿ ಹಾಸನ್‌ ಗೆ ಕೈ ಕೊಟ್ಟ ಎರಡನೇ ಬಾಯ್‌ ಫ್ರೆಂಡ್..?

ಪ್ರೀತಿ ಎಂಬ ಎರಡಕ್ಷರವನ್ನ ಬಣ್ಣದ ಲೋಕದಲ್ಲಿರುವ ಅನೇಕರು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಹೀಗಾಗಿಯೇ ದಿನಕ್ಕೊಂದು ಸಂಬಂಧ ಇಲ್ಲಿ ಬದಲಾಗುತ್ತೆ. ಲವ್ ಬೆನ್ನಲ್ಲಿಯೇ ಬ್ರೇಕ್‌ಪ್ ಆಗುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಶ್ರುತಿ ಹಾಸನ್ ಮತ್ತು ಶಂತನು ಸಂಬಂಧ

ಹೌದು, ನಿಮಗೆ ಗೊತ್ತಿರಲಿ.. ಮೂರ್ನಾಲ್ಕು ವರ್ಷಗಳ ಹಿಂದೆ, ಕಮಲ ಹಾಸನ್ ಅವರ ಮುದ್ದಿನ ಮಗಳು ಶ್ರುತಿ ಹಾಸನ್, ಬ್ರಿಟಿಷ್ ನಟ ಮೈಕಲ್ ಕೋರ್ಸೆಲ್ ಜೊತೆ ಪ್ರೇಮದ ಖಾತೆ ತೆರೆದಿದ್ದರು. ಜೊತೆ ಜೊತೆಯಲ್ಲಿ ಇಬ್ಬರು ಅನೇಕ ಕಡೆ ಕಾಣಿಸಿಕೊಂಡಿದ್ದರು. ಆದರೆ ಆ ನಂತರ ಏನಾಯಿತೋ ಗೊತ್ತಿಲ್ಲ. ಸಂಬಂಧ ಮುರಿದು ಬಿತ್ತು.

shruti-haasan-and-her-longtime-boyfriend-santanu-hazarika-have-parted-ways

ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ, ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಾಂತನು ಹಜಾರಿಕಾ. ಶಾಂತನು ಜೊತೆ ಅಖಂಡ ಎರಡು ವರ್ಷ ಪ್ರೇಮದ ತಪಸ್ಸು ಮಾಡಿದ್ದ ಶ್ರುತಿ ಹಾಸನ್, ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು. ತನ್ನ ಮೇಲೆ ಶಾಂತನುಗೆ ಇರುವ ಕಾಳಜಿ, ಪ್ರೀತಿಯನ್ನೂ ಮೆಚ್ಚಿ ಮಾತನಾಡಿದ್ದರು. ಶಾಂತನು ಅವರಲ್ಲಿನ ಹಾಸ್ಯ ಪ್ರಜ್ಞೆ ಮತ್ತು ಪ್ರತಿಭೆಯನ್ನ ಕೂಡ ಹಾಡಿ ಹೊಗಳಿದ್ದರು ಶ್ರುತಿ ಹಾಸನ್.

ಇನ್ನು ಎರಡು ವರ್ಷದ ಹಿಂದೆ ಅಂದರೆ 2022ರ ಆಚೀಚೆ ತಮ್ಮ ಮದುವೆ ಆಗಿದೆ ಎಂಬ ವಿಚಾರವನ್ನ ಖುದ್ದು ಶಾಂತನು ಹೇಳಿದ್ದರು. ಈ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಅವತ್ತು ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನ ನೀಡಿದ್ದ ಶಾಂತನು "ಹಲವು ವರ್ಷಗಳಿಂದಲೂ ನಾವು ಒಟ್ಟಿಗೆ ಇದ್ದೇವೆ. ನಮ್ಮ ಬಾಂಡಿಂಗ್ ಕೂಡ ಉತ್ತಮವಾಗಿದೆ. ಮದುವೆ ಆದ ನಂತರದಿಂದ ನಮ್ಮ ಸಂಬಂಧ ಇನ್ನು ಗಟ್ಟಿಯಾಗಿದೆ ಹಾಗೂ ಉತ್ತಮವಾಗಿದೆ. ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸಲು ನಮ್ಮ ಮದುವೆ ನಮಗೆ ದಾರಿ ಮಾಡಿಕೊಟ್ಟಿದೆ. ಮುಂದೆಯೂ ಹೀಗೆ ಸಂತೋಷದಿಂದ ದಿನಗಳನ್ನು ಕಳೆಯಲು ತೀರ್ಮಾನಿಸಿದ್ದೇವೆ" ಎಂದಿದ್ದರು. ಶ್ರುತಿ ಹಾಸನ್ ಮದುವೆಯ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ ಅನ್ನುವುದು ಬೇರೆ ವಿಚಾರ

shruti-haasan-and-her-longtime-boyfriend-santanu-hazarika-have-parted-ways

ಇನ್ನೂ ಕಳೆದ ವರ್ಷ ದೀಪಾವಳಿಯಂದು ಈ ಜೋಡಿಯನ್ನ ನೋಡಲು ಎರಡು ಕಣ್ಣು ಕೂಡ ಸಾಲದಾಗಿತ್ತು. ಗ್ರೀನ್ ರೇಷ್ಮೆ ಸೀರೆಯಲ್ಲಿ ಶ್ರುತಿ ಹಾಸನ್ ಅವತ್ತು ಮಿಂಚಿದ್ದರೆ, ಶಾಂತನು ರೇಷ್ಮೆ ಪಂಚೆ ಮತ್ತು ಶರ್ಟ್ ಧರಿಸಿ ಮಿರ ಮಿರ ಮಿಂಚಿದ್ದರು. ಇವರ ಫೋಟೋಗಳನ್ನ ನೋಡಿದ್ದ ಅನೇಕರು ಮದುವೆ ಯಾವಾಗ ಎಂಬ ಪ್ರಶ್ನೆಯನ್ನೂ ಕೂಡ ಕೇಳಿದ್ದರು.

ಆದರೆ ಈಗ ಶ್ರುತಿ ಹಾಸನ್ ಮತ್ತು ಶಾಂತನು ನಡುವೆ ಇದ್ದ ಪ್ರೇಮ ಸೇತುವೆ ಮುರಿದು ಬಿದ್ದಿದೆ ಅನ್ನುವ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಶ್ರುತಿ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ಶಾಂತನು ಜೊತೆ ಫೋಟೋಗಳೆಲ್ಲ ಮಾಯವಾಗಿವೆ. ಶಾಂತನು ಅವರನ್ನ ಶ್ರುತಿ ಹಾಸನ್ ಅನ್ ಫ್ರೆಂಡ್ ಮಾಡಿದ್ದಾರೆ.

ಒಟ್ನಲ್ಲಿ ಸದ್ಯಕ್ಕೆ ಶ್ರುತಿ ಹಾಸನ್ ಮತ್ತು ಶಾಂತನು ನಡುವೆ ಮೊಳಕೆಯೊಡೆದಿದ್ದ ಪ್ರೀತಿ ಈಗ ಕಮರಿಹೋಗಿದೆ ಅನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಹರಿದಾಡುತ್ತಿರುವ ಈ ಸುದ್ದಿಯ ಬಗ್ಗೆ ಶ್ರುತಿ ಹಾಸನ್ ಸ್ಪಷ್ಟೀಕರಣ ಕೊಡ್ತಾರಾ ಅನ್ನುವುದನ್ನ ಕಾದು ನೋಡಬೇಕಿದೆ.

More from Filmibeat

English summary
According To Reports Shruti Haasan has ended her relationship with longtime boyfriend Santanu Hazarika."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X