twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್‌ನಲ್ಲಿ ಕೆಲಸ ಮಾಡಿದರೆ ಮಾತ್ರವೇ ನಾವು ಕಲಾವಿದರೇ?: ಶ್ರುತಿ ಹಾಸನ್ ಪ್ರಶ್ನೆ

    |

    ನಟಿ ಶ್ರುತಿ ಹಾಸನ್ ದಕ್ಷಿಣ ಭಾರತದ ಸಿನಿಮಾ ಹಾಗೂ ಬಾಲಿವುಡ್ ಎರಡರಲ್ಲಿಯೂ ಗುರುತಿಸಿಕೊಂಡವರು. ಜತೆಗೆ ಗಾಯಕಿಯಾಗಿಯೂ ಶ್ರುತಿ ಹೆಸರು ಮಾಡಿದ್ದಾರೆ. ಅವರು ಸಿದ್ಧಪಡಿಸಿರುವ 'ಎಡ್ಜ್' ಎಂಬ ಶೀರ್ಷಿಕೆಯ ಮೊದಲ ಹಾಡು ಶನಿವಾರ ಬಿಡುಗಡೆಯಾಗುತ್ತಿದೆ.

    Recommended Video

    ಇನ್ನೂ ರಾಕಿ ಭಾಯ್ Poster ನೋಡಿದ್ರೆ ಕಳೆದು ಹೋಗುತ್ತೀರ | Garuda Ram | Part 2 | Filmibeat Kannada

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿನ್ನೆಲೆಯಲ್ಲಿ ಚರ್ಚೆಗೆ ಒಳಗಾಗುತ್ತಿರಿವ ಸ್ವಜನಪಕ್ಷಪಾತದ ಕುರಿತು ಶ್ರುತಿ ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಪೋಷಕರಾದ ಕಮಲ್ ಹಾಸನ್ ಮತ್ತು ಸಾರಿಕಾ ಅವರ ಪ್ರಭಾವದ ಕಾರಣದಿಂದಲೇ ತಮಗೆ ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು. 'ಹಾಸನ್' ಎಂಬ ಸರ್‌ನೇಮ್ ತಮಗೆ ಬೆಳೆಯಲು ಬಹಳ ಸಹಕಾರಿಯಾಗಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಮುಂದೆ ಓದಿ.

    ಚಿನ್ನದ ಮಾಸ್ಕ್ ಧರಿಸಿ ಮಾದಕ ಲುಕ್‌ ಕೊಟ್ಟ ನಟಿ ಶ್ರುತಿ ಹಾಸನ್ಚಿನ್ನದ ಮಾಸ್ಕ್ ಧರಿಸಿ ಮಾದಕ ಲುಕ್‌ ಕೊಟ್ಟ ನಟಿ ಶ್ರುತಿ ಹಾಸನ್

    ಸರ್‌ನೇಮ್‌ನಿಂದಾಗಿ ಸಿಕ್ಕಿದ್ದು ನಿಜ

    ಸರ್‌ನೇಮ್‌ನಿಂದಾಗಿ ಸಿಕ್ಕಿದ್ದು ನಿಜ

    'ಚಿತ್ರೋದ್ಯಮದ ಬಾಗಿಲುಗಳು ನನಗೆ ಸುಲಭವಾಗಿ ತೆರೆದುಕೊಂಡಿದ್ದು, ನನ್ನ ಹೆಸರಿನೊಂದಿಗೆ ಇರುವ ಸರ್ ನೇಮ್ ಕಾರಣದಿಂದ. ಅದನ್ನು ನಿರಾಕರಿಸಿದರೆ ಅದು ಅಪರಾಧವಾಗುತ್ತದೆ. ಆದರೆ ವರ್ಷಗಳು ಉರುಳಿದಂತೆ ನಾನು ಬಾಲಿವುಡ್‌ಗೆ ಹೋಲಿಸಿದರೆ ತಮಿಳು ಮತ್ತು ತೆಲುಗಿನ ಸಿನಿಮಾ ರಂಗ ವಿಭಿನ್ನ ಎಂಬುದನ್ನು ನಾನು ಕಲಿತುಕೊಂಡೆ' ಎಂದಿದ್ದಾರೆ.

    ಪ್ರತಿಭೆ ಇದ್ದರೆ ಮಾತ್ರ ಉಳಿವು

    ಪ್ರತಿಭೆ ಇದ್ದರೆ ಮಾತ್ರ ಉಳಿವು

    ತಮಿಳಿನಲ್ಲಿ ಸೂರ್ಯ ಸರ್ ಅವರಂತಹ ನಟರೊಂದಿಗೆ ನನ್ನ ಮೊದಲ ಚಿತ್ರ ಮಾಡಿದೆ. ಸೂರ್ಯ ಕೂಡ ತಮ್ಮ ತಂದೆ ಶಿವಕುಮಾರ್ ಸರ್ ನಟರಾಗಿದ್ದರಿಂದ ಬ್ರೇಕ್ ಪಡೆದುಕೊಂಡವರು. ಇಲ್ಲಿಯೂ ಅವರು ತಮ್ಮ ಸ್ಟಾರ್ ಡಮ್‌ಅನ್ನು ತಮ್ಮ ಕೆಲಸದ ಮೂಲಕವೇ ರೂಪಿಸಿಕೊಂಡರು. ಆರಂಭದ ಲಾಂಚ್ ಬಳಿಕ ಪ್ರತಿ ನಟರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಮುಂದಿನ ಆಫರ್ ಪಡೆದುಕೊಳ್ಳಲು ಕಠಿಣ ಪರಿಶ್ರಮ ಪಡಬೇಕು. ಅದರಲ್ಲಿಯೂ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಈ ಕಷ್ಟಪಡಬೇಕು ಎಂದು ಹೇಳಿದ್ದಾರೆ.

    ಗಂಟೆಗೆ 1 ಲಕ್ಷ ರೂ ಕೊಡಿ: ಪ್ರಮುಖ ಚಿತ್ರದಲ್ಲಿ ನಟಿಸಲು ಶ್ರುತಿ ಹಾಸನ್ ಭಾರಿ ಡಿಮ್ಯಾಂಡ್ಗಂಟೆಗೆ 1 ಲಕ್ಷ ರೂ ಕೊಡಿ: ಪ್ರಮುಖ ಚಿತ್ರದಲ್ಲಿ ನಟಿಸಲು ಶ್ರುತಿ ಹಾಸನ್ ಭಾರಿ ಡಿಮ್ಯಾಂಡ್

    ಇಲ್ಲಿ ಮತ್ತೆ ಪ್ರಭಾವ ಬಳಸಲಾಗದು

    ಇಲ್ಲಿ ಮತ್ತೆ ಪ್ರಭಾವ ಬಳಸಲಾಗದು

    ಪ್ರಾದೇಶಿಕ ಚಿತ್ರರಂಗದಲ್ಲಿ ಒಬ್ಬ ನಟ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಆತನಿಗೆ ಇರುವ ಹಿನ್ನೆಲೆಯ ಪ್ರಭಾವ ತನ್ನಿಂದ ತಾನೇ ನಿಂತು ಹೋಗುತ್ತದೆ. ಮುಂದಿನ ಚಿತ್ರದಲ್ಲಿಯೂ ಅದೇ ಪ್ರಭಾವ ಬಳಸುವುದಿಲ್ಲ. ಆದರೆ ಇದೇ ರೀತಿ ಬಾಲಿವುಡ್‌ನಲ್ಲಿ ನಡೆಯುತ್ತದೆಯೇ ಎನ್ನುವುದು ತಮಗೆ ಗೊತ್ತಿಲ್ಲ ಎಂದಿದ್ದಾರೆ.

    ವಿದೇಶಿಗರಿಗೆ ನಾವು ಭಾರತದವರಷ್ಟೇ..

    ವಿದೇಶಿಗರಿಗೆ ನಾವು ಭಾರತದವರಷ್ಟೇ..

    ಬಾಲಿವುಡ್‌ನಲ್ಲಿ ಗ್ಯಾಂಗ್ ಒಂದು ತಮ್ಮ ವಿರುದ್ಧ ಕೆಲಸ ಮಾಡುತ್ತಿದೆ ಎಂಬ ಎಆರ್ ರೆಹಮಾನ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶ್ರುತಿ, ಅತ್ಯಂತ ಜನಪ್ರಿಯ ಭಾರತೀಯರಲ್ಲಿ ರೆಹಮಾನ್ ಒಬ್ಬರು. ವಿದೇಶದಲ್ಲಿ ಭಾರತೀಯರನ್ನು ಉತ್ತರ, ದಕ್ಷಿಣ ಅಥವಾ ಮಧ್ಯಭಾರತೀಯ ಎಂದು ಕರೆಯುವುದಿಲ್ಲ. ಅವರಿಗೆ ನಾವೆಲ್ಲರೂ ಕಲರ್‌ಫುಲ್, ಜೋರು ಮಾತನಾಡುವ ಮತ್ತು ಆಸಕ್ತಿಕರ ವ್ಯಕ್ತಿಗಳು. ಭಾರತದಲ್ಲಿ ಮಾತ್ರವೇ ನಾವು ಈ ವಿಭಜನೆಗಳನ್ನು ಹೊಂದಿದ್ದೇವೆ. ಯಾವ ನಿರ್ದಿಷ್ಟ ಸಂಗತಿ ಬಗ್ಗೆ ರೆಹಮಾನ್ ಸರ್ ಮಾತನಾಡಿದ್ದಾರೋ ನನಗೆ ತಿಳಿದಿಲ್ಲ ಎಂದಿದ್ದಾರೆ.

    ಹಿಂದಿಯಲ್ಲಿ ನಟಿಸಿದರಷ್ಟೇ ಕಲಾವಿದರೇ?

    ಹಿಂದಿಯಲ್ಲಿ ನಟಿಸಿದರಷ್ಟೇ ಕಲಾವಿದರೇ?

    ಆದರೆ ನಾನು ಒಂದು ಅಂಶದ ಕುರಿತು ಚರ್ಚೆಗೆ ಒಳಗಾಗುತ್ತಿದ್ದೇನೆ. ತೆಲುಗು ಅಥವಾ ತಮಿಳು ಚಿತ್ರಗಳಿಗಾಗಿ ಒಂದು ವರ್ಷ ಸಮಯ ನೀಡಿ ಹಿಂದಿ ಸಿನಿಮಾದಲ್ಲಿ ನಟಿಸದೆ ಹೋದರೆ, ನೀವು ಏಕೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ? ಎಂದು ಕೇಳಲು ಶುರುಮಾಡುತ್ತಾರೆ. ನಾವು ಹಿಂದಿಯಲ್ಲಿ ನಟಿಸಿದರೆ ಮಾತ್ರವೇ ಕಲಾವಿದರಾಗುತ್ತೇವೆಯೇ? ಇದು ಬಹಳ ಮುಖ್ಯವಾದ ಉದ್ಯಮ ಎಂದು ನಿರ್ಧರಿಸಿದವರು ಯಾರು? ನಾನು ಚೆನ್ನೈನಲ್ಲಿ ಹುಟ್ಟಿದ್ದಕ್ಕೆ, ನಾನು ತಮಿಳು ಮಾತನಾಡುವ ಹುಡುಗಿ ಎನಿಸಿಕೊಂಡಿದ್ದಕ್ಕೆ ಬಹಳ ಹೆಮ್ಮೆ ಪಟ್ಟುಕೊಳ್ಳುತ್ತೇನೆ. ಅದು ನನ್ನ ಐಡೆಂಟಿಟಿಯ ಭಾಗ. ಹೈದರಾಬಾದ್‌ಗೆ ಹೋಗಿ ಹೊಸ ಉದ್ಯಮ ಸೇರಿ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ.

    ವ್ಯತ್ಯಾಸ ಎಂದುಕೊಂಡಿರಲಿಲ್ಲ

    ವ್ಯತ್ಯಾಸ ಎಂದುಕೊಂಡಿರಲಿಲ್ಲ

    ನನ್ನ ಅಮ್ಮ ಮುಂಬೈನಲ್ಲಿ ಇರುವ ಕಾರಣದಿಂದ ಹಿಂದಿ ಚಿತ್ರರಂಗವೂ ಒಂದು ಉದ್ಯಮ ಎಂದು ಅದರಲ್ಲಿಯೂ ಕೆಲಸ ಮಾಡಲು ಬಯಸುತ್ತೇನೆ. ಮೊದಲು ಈ ವ್ಯತ್ಯಾಸವನ್ನು ನೋಡಿಯೇ ಇರಲಿಲ್ಲ. ಆದರೆ ಸಮಯ ಕಳೆದಂತೆ ನನಗೆ ವ್ಯತ್ಯಾಸ ಅರ್ಥವಾಯಿತು. ಅಲ್ಲಿನವರು ಯಾವಾಗ 'ದಕ್ಷಿಣದ ಸಿನಿಮಾಗಳು' ಅಥವಾ 'ಓ ನಿಮಗೆ ಇಡ್ಲಿ, ದೋಸೆ, ಸಾಂಬಾರ್ ಇಷ್ಟವಲ್ಲವೇ' ಎನ್ನುವಾಗ ವ್ಯತ್ಯಾಸ ಕಾಣಿಸುತ್ತದೆ. ನೀವು ಜನರನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಎನ್ನುವುದಕ್ಕೆ ಮಾನದಂಡವಿರಲು ಸಾಧ್ಯವಿಲ್ಲ.

    ರೇಸಿಸ್ಟ್ ಪ್ರಶ್ನೆಗಳೇ ಹೆಚ್ಚು

    ರೇಸಿಸ್ಟ್ ಪ್ರಶ್ನೆಗಳೇ ಹೆಚ್ಚು

    ಬಾಂಬೆಯಲ್ಲಿ ವಿದ್ಯಾವಂತರು, ಚೆನ್ನಾಗಿ ತಿಳಿದ ಜನರಿದ್ದಾರೆ, ಅವರು ಹೀಗೆಲ್ಲ ಆಲೋಚಿಸುವುದಿಲ್ಲ ಎಂದು ನಾನು ಭಾವಿಸಿದ್ದೇನೆ. ಆದರೆ ಅವರ ಹೆಚ್ಚಿನ ಪ್ರಶ್ನೆಗಳು ಮತ್ತು ಸಂಗತಿಗಳು ಆಂತರಿಕ ಜನಾಂಗೀಯ ನಿಂದನೆಯಂತೆ ಇರುತ್ತದೆ ಎಂದು ಶ್ರುತಿ ಹೇಳಿದ್ದಾರೆ.

    English summary
    Actress Shruti Haasan who admits she got opportunities because of her surname, asks are we actors only if we work in Hindi?
    Thursday, August 6, 2020, 16:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X