ಬ್ರೇಕಪ್ ಬಳಿಕ ಹೊಸ ಹಾಡು ಕಟ್ಟಿ ಹಾಡಿದ ಶ್ರುತಿ ಹಾಸನ್
ನಟಿ ಶ್ರುತಿ ಹಾಸನ್ ತಮ್ಮ ಬ್ರೇಕಪ್ ವಿಚಾರವನ್ನು ಇತ್ತೀಚೆಗೆ ಖಚಿತಪಡಿಸಿದ್ದರು. ಮೈಕೆಲ್ ಕೊರ್ಸೇಲ್ ಜೊತೆ ಡೇಟಿಂಗ್ ನಡೆಸಿದ ಕಮಲ್ ಪುತ್ರಿ ಬಳಿಕ ಬ್ರೇಕಪ್ ಮಾಡಿಕೊಂಡಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಿಂದ ವಿಷ್ಯುವಲ್ ಆರ್ಟಿಸ್ಟ್ ಸಂತಾನು ಹಜಾರಿಕಾ ಪ್ರೇಮಪಾಶದಲ್ಲಿ ಸಿಲುಕಿದ್ದರು.
ಇತ್ತೀಚೆಗೆ ಸಂತಾನು ಹಜಾರಿಕಾ ಇಂದ ಶ್ರುತಿ ದೂರಾಗಿರುವುದಾಗಿ ಗುಸುಗುಸು ಕೇಳಿಬಂದಿತ್ತು. ಅದನನ್ನು ಮೊನ್ನೆ ಮೊನ್ನೆ ಆಕೆ ಖಚಿತಪಡಿಸಿದ್ದರು. ಅಭಿಮಾನಿಗಳ ಜೊತೆ ಆಸ್ಕ್ ಮಿ ಎನಿಥಿಂಗ್ ಸೆಷನ್ ವೇಳೆ ಶ್ರುತಿ ಈ ವಿಚಾರ ಬಹಿರಂಗಪಡಿಸಿದ್ದರು. ನಾನೀಗ ಸಿಂಗಲ್, ಮಿಂಗಲ್ ಆಗಲು ಸಿದ್ಧ. ಸದ್ಯಕ್ಕೆ ನನ್ನ ಕೆಲಸಗಳಲ್ಲಿ ಬ್ಯುಸಿಯಾಗಿ ಎಂಜಾಯ್ ಮಾಡುತ್ತಿದ್ದೀನಿ ಎಂದಿದ್ದರು.

ಇದೀಗ ಶ್ರುತಿ ಹಾಸನ್ ಸಾಹಿತ್ಯ ಬರೆದು ಮ್ಯೂಸಿಕ್ ಮಾಡಿ ಹೊಸ ಹಾಡು ಹಾಡಿದ್ದಾರೆ. ಒಳ್ಳೆ ಗಾಯಕಿ ಕೂಡ ಆಗಿರುವ ಶ್ರುತಿ ಕೆಲ ಹಾಡುಗಳಿಗೆ ದನಿಯಾಗಿದ್ದಾರೆ. ಇಂಗ್ಲೀಷ್ ಆಲ್ಬಮ್‌ಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಬ್ರೇಕಪ್ ಬಳಿಕ ಶ್ರುತಿ ಹೊಸ ಸಾಂಗ್, ಬ್ರೇಕಪ್ ಹಾಗೂ ಸೆಲ್ಫ್ ಲವ್ ಬಗ್ಗೆ ಇರುವುದು ವಿಶೇಷ. ಹಾಡಿನ ಉದ್ದಕ್ಕೂ ಸ್ವಯಂ ಪ್ರೀತಿ, ಬ್ರೇಕಪ್ ಮತ್ತು ಅದರಿಂದ ಚೇತರಿಸಿಕೊಳ್ಳುವ ಹಾದಿಯ ಬಗ್ಗೆ ಮಾತನಾಡಿದರು, ತನ್ನ ಮಾಜಿ ಗೆಳೆಯನಿಂದ ಬೇರ್ಪಟ್ಟ ನಂತರ ತನ್ನ ಅನುಭವದ ಬಗ್ಗೆ ಸುಳಿವು ನೀಡಿದಂತೆ ಭಾಸವಾಗುತ್ತಿದೆ.
"ನಾನು ಬಾಗಿಲು ಮುಚ್ಚಿದೆ. ಬೀಗದ ಕೈ ತಿಂದೆ. ನನಗೆ ಇನ್ನು ಮುಂದೆ ಅದರ ಅಗತ್ಯವಿಲ್ಲ. ನನ್ನ ಬರವಣಿಗೆಗೆ ಹಿಂತಿರುಗಿದೆ. ಅದು ತುಂಬಾ ಕ್ಯಾಥರ್ಟಿಕ್ ಅನಿಸುತ್ತದೆ. ನಾನು ಅವ್ಯವಸ್ಥೆಯ ಕೊಳದಲ್ಲಿ ಬೆಳಕನ್ನು ಹುಡುಕುತ್ತಾ ತಳಕ್ಕೆ ಈಜುತ್ತಿದ್ದೇನೆ, ನಾನು ಕೆಸರು ಪಾಚಿ ಮತ್ತು ಸಂಪೂರ್ಣ ಹಾಡನ್ನು ಕಂಡುಕೊಂಡಿದ್ದೇನೆ. ಜೀವನವು ಅದ್ಭುತವಾಗಿದೆ ಮತ್ತು ಭಯಾನಕವಾಗಿದೆ, ಅಷ್ಟೇ ಸುಂದರವಾಗಿದೆ. ಪ್ರತಿಯೊಂದು ಮ್ಯಾಜಿಕ್ ಎನಿಸುತ್ತಿದೆ" ಎಂದು ಕ್ಯಾಪ್ಷನ್ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.
ಸಂತಾನು ಹಜಾರಿಕಾ ಹಾಗೂ ಶ್ರುತಿ ಬರೀ ಲವ್ ಅಲ್ಲ, ಲಿವ್ ಇನ್‌ರಿಲೇಷನ್‌ಶಿಪ್‌ನಲ್ಲಿ ಇದ್ದರು. ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಕೋವಿಡ್ ಸಮಯದಲ್ಲೂ ಇಬ್ಬರು ಒಟ್ಟಿಗೆ ನೆಲಸಿದ್ದರು. ಇಬ್ಬರೂ ಮದುವೆ ಕೂಡ ಆಗುತ್ತಾರೆ ಎನ್ನಲಾಗಿತ್ತು. ಇನ್ನು ಆಗಾಗ್ಗೆ ಸಂತಾನು ಬಗ್ಗೆ ಶ್ರುತಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದೀಗ "ನನ್ನ ಹೃದಯದ ಬಾಗಿಲು ಮುಚ್ಚಿದೆ, ಪ್ರೀತಿ ಎನ್ನುವ ಬೀಗದ ಕೈಯಿಂದ ತೆಗೆಯಬೇಕು ಎಂದುಕೊಳ್ಳುತ್ತಿಲ್ಲ" ಎಂದು ಆಕೆ ಹಾಡಿದಂತಿದೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಶ್ರುತಿ ಹಾಸನ್ ಕೊನೆಯದಾಗಿ 'ಸಲಾರ್' ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಪ್ರಶಾಂತ್ ನೀಲ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿದೆ.
ಇತ್ತೀಚೆಗೆ ಶ್ರುತಿ ಹಾಸನ್ 'ಇನಿಮೇಲ್' ಆಲ್ಬಮ್ ಸಾಂಗ್‌ನಲ್ಲಿ ಮಿಂಚಿದ್ದರು. ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ರಾಜ್‌ಕಮಲ್ ಬ್ಯಾನರ್‌ನಲ್ಲಿ ಶ್ರುತಿ ತಂದೆ ಕಮಲ್ ಹಾಸನ್ ಆಲ್ಬಮ್ ಸಾಂಗ್ ನಿರ್ಮಿಸಿದ್ದರು. ಇದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.
ತಂದೆಯಾ ಹಾದಿಯಲ್ಲೇ ಶ್ರುತಿ ಹಾಸನ್ ಚಿತ್ರರಂಗಕ್ಕೆ ಬಂದರು. 'ಹೇ ರಾಮ್' ಚಿತ್ರದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು. 'ಲಕ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 'ಏಳಾಂ ಅರಿವು' ತಮಿಳಿನಲ್ಲಿ ನಾಯಕಿಯಾಗಿ ಆಕೆಯ ಚೊಚ್ಚಲ ಸಿನಿಮಾ. ಕನ್ನಡದ ಯಾವುದೇ ಚಿತ್ರದಲ್ಲಿ ಆಕೆ ನಟಿಸಿಲ್ಲ. ಆದರೆ 'ಪೃಥ್ವಿ' ಚಿತ್ರದ 'ನೆನಪಿದು ನೆನಪಿದು' ಹಾಡನ್ನು ಹಾಡಿದ್ದಾರೆ. 'ಟಾಕ್ಸಿಕ್' ಚಿತ್ರದ ಟೀಸರ್‌ನಲ್ಲಿ ಆಕೆಯ ಧ್ವನಿಯಿದೆ. ಶ್ರುತಿ ಚಿತ್ರದಲ್ಲಿ ನಟಿಸುತ್ತಾರೆ ಎಂದು ಗುಲ್ಲಾಗಿದೆ.


Click it and Unblock the Notifications










