ನಾನು ಸದ್ಯಕ್ಕೆ ಸಿಂಗಲ್ ಎಂದ ಶ್ರುತಿ ಹಾಸನ್ ; ಮತ್ತೆ ಪ್ರೇಮದ ಬಲೆಯಲ್ಲಿ ಸಿಲುಕುತ್ತಾರಾ ಕಮಲ್ ಪುತ್ರಿ..?
ಚಿತ್ರಕ್ಕಿಂತ ವ್ಯೆಯಕ್ತಿಕ ಕಾರಣಗಳಿಂದ ಹೆಚ್ಚು ಸುದ್ದಿಯಾದವರು ಶ್ರುತಿ ಹಾಸನ್. ಪ್ರೇಮದ ಅಮಲಿನಲ್ಲಿಯೇ ಹೆಚ್ಚೆಚ್ಚು ತೂರಾಡಿರುವ ಶ್ರುತಿ ಹಾಸನ್, ತಮ್ಮ ಮತ್ತೊಬ್ಬ ಗೆಳೆಯ ಶಾಂತನು ಹಜಾರಿಕಾ ಅವರಿಂದ ದೂರವಾಗಿದ್ದಾರೆ ಅನ್ನುವ ವಿಷ್ಯ ಸರಿಯಾಗಿ ಒಂದು ತಿಂಗಳ ಹಿಂದೆ ಸಿಕ್ಕಾಪಟ್ಟೆ ಗುಲ್ಲಾಗಿತ್ತು. ಆ ಸುದ್ದಿಯ ಮೇಲೆ ಶ್ರುತಿ ಹಾಸನ್ ಈಗ ಅಧಿಕೃತವಾದ ಮುದ್ರೆಯನ್ನ ಒತ್ತಿದ್ದಾರೆ.
ಹೌದು, ಕಮಲ್ ಹಾಸನ್ ಅವರ ಮುದ್ದಾದ ಮಗಳು ಶ್ರುತಿ ಹಾಸನ್, ತಮ್ಮ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರ ಸದ್ಭಳಕೆಯನ್ನ ಪಡೆದ ಅಭಿಮಾನಿಯೊಬ್ಬರು ಶ್ರುತಿ ಹಾಸನ್‌ಗೆ ನೀವು ಸಿಂಗಲ್ಲಾ ಅಥವಾ ನಿಮ್ಮ ಹೃದಯ ಬೇರೆಯವರ ಪಾಲಾಗಿದೆಯಾ ಎಂಬ ವ್ಯೆಯಕ್ತಿಕ ಪ್ರಶ್ನೆ ಕೇಳಿದ್ದರು.

ಇದಕ್ಕೆ ಉತ್ತರವನ್ನ ನೀಡಿರುವ ಶ್ರುತಿ ಹಾಸನ್ ನಾನು ಸಿಂಗಲ್. ಮಿಂಗಲ್ ಆಗಲು ಸಿದ್ಧಳಾಗಿದ್ದೇನೆ ಎಂದಿದ್ದಾರೆ. ಸದ್ಯಕ್ಕೆ ಗಮನವೆಲ್ಲ ಕೆಲಸದ ಕಡೆ ಇದೆ, ಜೀವನದ ಕ್ಷಣಗಳನ್ನ ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಮೂಲಕ ಬ್ರೇಕಪ್ ಬಗ್ಗೆ ಹೊರ ಬಿದ್ದಿದ್ದ ಬ್ರೇಕಿಂಗ್ ನ್ಯೂಸ್ ನಿಜಾ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಶ್ರುತಿ ಹಾಸನ್.
ಅಂದ್ಹಾಗೇ ಶಾಂತನು ಜೊತೆ ಅಖಂಡ ಎರಡು ವರ್ಷ ಪ್ರೇಮದ ತಪಸ್ಸು ಮಾಡಿದ್ದ ಶ್ರುತಿ ಹಾಸನ್, ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು. ತನ್ನ ಮೇಲೆ ಶಾಂತನುಗೆ ಇರುವ ಕಾಳಜಿ, ಪ್ರೀತಿಯನ್ನೂ ಮೆಚ್ಚಿ ಮಾತನಾಡಿದ್ದರು. ಶಾಂತನು ಅವರಲ್ಲಿನ ಹಾಸ್ಯ ಪ್ರಜ್ಞೆ ಮತ್ತು ಪ್ರತಿಭೆಯನ್ನ ಕೂಡ ಹಾಡಿ ಹೊಗಳಿದ್ದರು ಶ್ರುತಿ ಹಾಸನ್

ಇನ್ನು ಎರಡು ವರ್ಷದ ಹಿಂದೆ ಅಂದರೆ 2022ರ ಆಚೀಚೆ ತಮ್ಮ ಮದುವೆ ಆಗಿದೆ ಎಂಬ ವಿಚಾರವನ್ನ ಖುದ್ದು ಶಾಂತನು ಹೇಳಿದ್ದರು. ಈ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಅವತ್ತು ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನ ನೀಡಿದ್ದ ಶಾಂತನು "ಹಲವು ವರ್ಷಗಳಿಂದಲೂ ನಾವು ಒಟ್ಟಿಗೆ ಇದ್ದೇವೆ. ನಮ್ಮ ಬಾಂಡಿಂಗ್ ಕೂಡ ಉತ್ತಮವಾಗಿದೆ. ಮದುವೆ ಆದ ನಂತರದಿಂದ ನಮ್ಮ ಸಂಬಂಧ ಇನ್ನು ಗಟ್ಟಿಯಾಗಿದೆ ಹಾಗೂ ಉತ್ತಮವಾಗಿದೆ. ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಜೀವನ ನಡೆಸಲು ನಮ್ಮ ಮದುವೆ ನಮಗೆ ದಾರಿ ಮಾಡಿಕೊಟ್ಟಿದೆ. ಮುಂದೆಯೂ ಹೀಗೆ ಸಂತೋಷದಿಂದ ದಿನಗಳನ್ನು ಕಳೆಯಲು ತೀರ್ಮಾನಿಸಿದ್ದೇವೆ" ಎಂದಿದ್ದರು. ಆದರೆ ಈಗ ಶ್ರುತಿ ಹಾಸನ್ ಮತ್ತು ಶಾಂತನು ನಡುವೆ ಇದ್ದ ಪ್ರೇಮ ಸೇತುವೆ ಮುರಿದು ಬಿದ್ದಿದೆ
ಒಟ್ನಲ್ಲಿ ಸದ್ಯಕ್ಕೆ ಶ್ರುತಿ ಹಾಸನ್ ಮತ್ತು ಶಾಂತನು ನಡುವೆ ಮೊಳಕೆಯೊಡೆದಿದ್ದ ಪ್ರೀತಿ ಈಗ ಕಮರಿಹೋಗಿದೆ. ಶ್ರುತಿ ಹಾಸನ್ ಬದುಕಿನಲ್ಲಿ ಬೇರೆ ಯಾರಾದರೂ ಪ್ರವೇಶ ಮಾಡ್ತಾರಾ ಅಥವಾ ಈ ಪ್ರೀತಿ-ಪ್ರೇಮ ಎಲ್ಲ ಪುಸ್ತಕದ ಬದನೆಕಾಯಿ ಅಂದುಕೊಂಡು ಶ್ರುತಿ ಹಾಸನ್ ಚಿತ್ರರಂಗದ ಕಡೆ ಗಮನ ಕೊಡ್ತಾರಾ ಅನ್ನುವುದನ್ನ ಕಾದು ನೋಡಬೇಕಿದೆ.


Click it and Unblock the Notifications











