ಬ್ಯಾಕ್ ಲೆಸ್ ಡ್ರೆಸ್ ಧರಿಸಿ ಪಿಯಾನೋ ನುಡಿಸುತ್ತಿರುವ ಶ್ರುತಿ ಹಾಸನ್; ವಿಡಿಯೋ ವೈರಲ್
ದಕ್ಷಿಣ ಭಾರತೀಯ ಸಿನಿಮಾರಂಗದ ಜೊತೆಗೆ ಹಿಂದಿಯಲ್ಲೂ ಮಿಂಚುತ್ತಿರುವ ನಟಿ ಶ್ರುತಿ ಹಾಸನ್ ಸದ್ಯ ಕ್ರ್ಯಾಕ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ರವಿ ತೇಜ ನಾಯಕನಾಗಿ ಕಾಣಿಸಿಕೊಂಡಿರುವ ಕ್ರ್ಯಾಕ್ ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಮಿಂಚಿದ್ದರು.
ಕೆಲವು ಸಮಯ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ನಟಿ ಶ್ರುತಿ ಹಾಸನ್ ಕಳೆದ ವರ್ಷದಿಂದ ಮತ್ತೆ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶ್ರುತಿ ಹಾಸನ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಹೌದು, ಶ್ರುತಿ ಹಾಸನ್ ತನ್ನ ಹೊಸ ಪಿಯಾನೋ ನುಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶ್ರುತಿ ಹಾಸನ್ ಗೆ ಸಂಗೀತ ಎಂದರೆ ತುಂಬಾ ಇಷ್ಟ. ಅನೇಕ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಇದೀಗ ಶ್ರುತಿ ಹೊಸ ಪಿಯಾನೋ ಖರೀದಿಸಿದ್ದು, ಶ್ರುತಿ ಹಾಸನ್ ಹೊಸ ಸ್ನೇಹಿತೆ ಪಿಯಾನೋ ನುಡಿಸುತ್ತಾ ಆನಂದಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಕೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೆ ಹರಿದುಬರುತ್ತಿದೆ.

ಬ್ಯಾಕ್ ಲೆಸ್ ಡ್ರೆಸ್ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಶ್ರುತಿ ಹಾಸನ್ ಪಿಯಾನೋ ವಿಡಿಯೋ ಜೊತೆಗೆ 'ನನ್ನ ಹೊಸ ಸ್ನೇಹಿತೆ ಪಿಯಾನೋ. ನಾನು ಅವಳಿಗೆ ಏನೆಂದು ಹೆಸರಿಡಲಿ. ಬಹುಶಃ ಲೈರಾ? ಎಂದು ಬರೆದುಕೊಂಡಿದ್ದಾರೆ.
ಶ್ರುತಿ ಹಾಸನ್ ಇತ್ತೀಚಿಗಷ್ಟೆ ತಂದೆ ಕಮಲ್ ಹಾಸನ್ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಕಮಲ್ ಕಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಶ್ರುತಿ ಹಾಸನ್ ಪತ್ರದ ಮೂಲಕ ಮಾಹಿತಿ ಶೇರ್ ಮಾಡಿದ್ದರು. ಅಪ್ಪ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದರು.
Recommended Video
ಇನ್ನು ಶ್ರುತಿ ಹಾಸನ್ ಸದ್ಯ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿರೀಕ್ಷೆಯ ಈ ಸಿನಿಮಾ ಸದ್ಯದಲ್ಲೇ ತೆರೆಗ ಬರಲಿದೆ. ತಮಿಳು, ತೆಲುಗು ಸಿನಿಮಾಗಳ ಜೊತೆಗೆ ಹಿಂದಿಯಲ್ಲೂ ದಿ ಪವರ್ ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











