For Quick Alerts
  ALLOW NOTIFICATIONS  
  For Daily Alerts

  ಚುನಾವಣೆಯಲ್ಲಿ ಸೋತ ಕಮಲ್ ಹಾಸನ್‌ಗೆ ಪುತ್ರಿ ಶ್ರುತಿ ಹಾಸನ್ ಹೇಳಿದ್ದೇನು?

  |

  ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಬದಲಾವಣೆ ತರುವ ವಿಶ್ವಾಸ ಮೂಡಿಸಿದ್ದ ಹಿರಿಯ ಸಿನಿಮಾ ನಟ ಕಮಲ್ ಹಾಸನ್ ಮೊದಲ ಪ್ರಯತ್ನದಲ್ಲಿ ಸೋತಿದ್ದಾರೆ. ಕೊನೇಕ್ಷಣದ ವರೆಗೂ ಕುತೂಹಲ ಮೂಡಿಸಿದ್ದ ಕಮಲ್ ಹಾಸನ್ ಕೂದಲೆಳೆ ಅಂತರದಲ್ಲಿ ಸೋಲುಂಡಿದ್ದಾರೆ.

  ತಮಿಳುನಾಡಿನ ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಮಲ್ ಹಾಸನ್ ಬಿಜೆಪಿ ಅಭ್ಯರ್ಥಿ ವಿರುದ್ಧ ಕಡಿಮೆ ಅಂತರದಲ್ಲಿ ಸೋಲುಂಡಿದ್ದಾರೆ.

  ತಂದೆಯ ಸೋಲಿನ ಬಳಿಕ ಪುತ್ರಿ, ಖ್ಯಾತ ನಟಿ ಶ್ರುತಿ ಹಾಸನ್ ಸಾಮಾಜಿಕ ಜಾಲತಾಣದಲ್ಲಿ ತಂದೆಯ ಬಗ್ಗೆ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆಯ ಬಗ್ಗೆ ಸಂದೇಶವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. 2018ರಲ್ಲಿ ತಮ್ಮದೆ ಆದ ಪಕ್ಷ ಮಕ್ಕಳ್ ನೀದಿ ಮೈಯಮ್ ಸ್ಥಾಪಿಸಿದ ತಂದೆಯ ಬಗ್ಗೆ ಶ್ರುತಿ, 'ನನ್ನ ಅಪ್ಪನ ಬಗ್ಗೆ ಯಾವಾಗಲು ನನಗೆ ಹೆಮ್ಮೆ ಇದೆ' ಎಂದು ಹೇಳಿದ್ದಾರೆ.

  ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ಪಾತ್ರ ರಿವೀಲ್ಪ್ರಭಾಸ್ 'ಸಲಾರ್' ಸಿನಿಮಾದಲ್ಲಿ ನಟಿ ಶ್ರುತಿ ಹಾಸನ್ ಪಾತ್ರ ರಿವೀಲ್

  ಇನ್ನು ದಿ ಫೈಟರ್ ಮತ್ತು ಟರ್ಮಿನೇಟರ್ ಎಂದು ಬರೆದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ. ಅಪ್ಪನ ಜೊತೆ ಮತಚಲಾಯಿಸಲು ಮತದಾನ ಕೇಂದ್ರಕ್ಕೆ ತೆರಳಿದ್ದ ಶ್ರುತಿ ಹಾಸನ್ ಮತ್ತು ಅಕ್ಷರಾ ಹಾಸನ್ ತಂದೆ ಕಮಲ್ ಹಾಸನ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದರು.

  ಭಯ ಹುಟ್ಟಿಸೋ ಸುದ್ದಿಯನ್ನು ಮೊದಲು ನಿಲ್ಲಿಸಿ ಅಂತ ಶೃತಿ ಹರಿಹರನ್ ಹೇಳಿದ್ಯಾಕೆ? | Filmibeat Kannada

  ಸೋತ ಬಳಿಕ ಕಮಲ್ ಹಾಸನ್ ಟ್ವೀಟ್ ಮಾಡಿ, ಗೆಲವು ಸಾಧಿಸಿದ ಸ್ಟಾಲಿನ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಇಂಥ ಬಿಕ್ಕಟ್ಟಿನ ಸಮಯದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದೀರಿ. ತಮಿಳುನಾಡನ್ನು ಅಭಿವೃದ್ಧಿ ಹಾದಿಯಲ್ಲಿ ಸಾಗಿಸಿ' ಎಂದು ಟ್ವೀಟ್ ಮಾಡಿದ್ದಾರೆ.

  English summary
  Shruti Haasan posts after her father Kamal Haasan lost his election. She calls him Fighter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X