For Quick Alerts
  ALLOW NOTIFICATIONS  
  For Daily Alerts

  ಮದುವೆ ಯಾವಾಗ ಎಂದು ಕೇಳಿದ ಅಭಿಮಾನಿಗೆ ಶ್ರುತಿ ಹಾಸನ್ ಹೀಗಾ ಹೇಳೋದು?

  |

  ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್ ಸದ್ಯ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಬರ್ತಿರುವ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಸಿನಿಮಾದ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಳ್ಳುತ್ತಿದ್ದು, ಶೂಟಿಂಗ್ ನಲ್ಲಿ ಭಾಗಿಯಾದ ಫೋಟೋವನ್ನು ಹಂಚಿಕೊಂಡಿದ್ದರು.

  ಅಂದಹಾಗೆ ಶ್ರುತಿ ಹಾಸನ್ ಇತ್ತೀಚಿಗೆ ಸಿನಿಮಾಗಳ ವಿಚಾರಕ್ಕಿಂತ ಹೆಚ್ಚಾಗಿ ಲವ್, ಡೇಟಿಂಗ್, ಬ್ರೇಕಪ್ ವಿಚಾರಗಳಿಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಶ್ರುತಿ ಹಾಸನ್ ಆಗಾಗ ಅಭಿಮಾನಿಗಳ ಜೊತೆ ಸಂವಾದ ಕೂಡ ನಡೆಸುತ್ತಿರುತ್ತಾರೆ.

  ಕನ್ನಡ ಸಿನಿಮಾದ ಬಗ್ಗೆ ಟ್ವೀಟ್ ವಿವಾದ: ಸ್ಪಷ್ಟನೆ ನೀಡಿದ ನಟಿ ಶ್ರುತಿ ಹಾಸನ್ಕನ್ನಡ ಸಿನಿಮಾದ ಬಗ್ಗೆ ಟ್ವೀಟ್ ವಿವಾದ: ಸ್ಪಷ್ಟನೆ ನೀಡಿದ ನಟಿ ಶ್ರುತಿ ಹಾಸನ್

  ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಏನಾದರು ಪ್ರಶ್ನೆಗಳನ್ನು ಕೇಳಿ ಎಂದು ಬರೆದುಕೊಂಡಿದ್ದರು. ಶ್ರುತಿ ಹಾಸನ್ ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳಿಂದ ತರಹೇವಾರಿ ಪ್ರಶ್ನೆಗಳು ಹರಿದುಬಂದಿವೆ. ಆದರೆ ಕೆಲವು ಆಯ್ದ ಪ್ರಶ್ನೆಗಳಿಗೆ ಶ್ರುತಿ ಉತ್ತರಿಸಿದ್ದಾರೆ.

  ಇಂಟರೆಸ್ಟಿಂಗ್ ಅಂದರೆ ಸಾಕಷ್ಟು ಮಂದಿ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಭಿಮಾನಿಯೊಬ್ಬ ನಿಮ್ಮ ಮದುವೆ ಯಾವಾಗ? ಎಂದು ಹೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಶ್ರುತಿ ಕಣ್ಣಗಳನ್ನು ತಿರುಗಿಸುತ್ತಾ. 'ನನ್ನ ಕಣ್ಣುಗಳನ್ನು ಇನ್ನು ಹೆಚ್ಚು ರೋಲ್ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

  ಇನ್ನು ಮತ್ತೊಬ್ಬ ಅಭಿಮಾನಿ ನಾವಿಬ್ಬರು ಮದುವೆಯಾಗುವುದು ಯಾವಾಗ ಎಂದು ಕೇಳಿದ್ದಕ್ಕೆ, ಶ್ರುತಿ 'ನೀವು ತಪ್ಪಾದ ನಂಬರ್ ಗೆ ಕರೆ ಮಾಡಿದ್ದೀರಿ, ಬಾಯ್' ಎಂದಿದ್ದಾರೆ. ನಿಮ್ಮ ಜೊತೆ ಮದುವೆಯಾಗಲು ಸುಲಭದ ದಾರಿ ಯಾವುದು ಎಂದು ಕೇಳಿದ ಅಭಿಮಾನಿಗೆ ಸ್ಟಾಪಿಟ್ ಎಂದು ಹೇಳಿ ಬಾಯಿ ಮುಚ್ಚಿಸಿದ್ದಾರೆ.

  ಶ್ರುತಿ ಇತ್ತೀಗಷ್ಟೆ ಪಿಟ್ಟ ಕಥಾಲು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇನ್ನು ನಟ ವಿಜಯ್ ಸೇತುಪತಿ ನಟನೆಯ ಲಾಂಬಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಪವನ್ ಕಲ್ಯಾಣ್ ಅಭಿನಯದ ವಕೀಲ್ ಸಾಬ್ ಸಿನಿಮಾದಲ್ಲೂ ಶ್ರುತಿ ನಾಯಕಿ ಮಿಂಚಿದ್ದಾರೆ.

  Bigg Boss Kannada Season 8 : ಬಿಗ್ ಬಾಸ್ ಮನೆಗೆ ಹೋಗ್ತಿರೋ ರಾಜಕಾರಿಣಿಯ ಬಗ್ಗೆ ಹೇಳಿದ ಪರಮೇಶ್ವರ್ ಗುಂಡ್ಕಲ್
  English summary
  Shruti Haasan responses when fans asked about her marriage plans during an Ask me Anything session.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X